ನವದೆಹಲಿ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿ 30 ವರ್ಷ ಪೂರೈಸಿರುವ ಬಿಟೌನ್ ಸ್ಟಾರ್ ಕಳೆದ ಹಲವು ವರ್ಷಗಳಿಂದ ‘ಪಠಾಣ್’ ಸಿನಿಮಾದಲ್ಲಿಯೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್​ನ ಬೇಡಿಕೆಯ ನಟನಾಗಿರುವ ಶಾರುಖ್ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾವ ವಿಷಯಕ್ಕೆ ಅಂತೀರಾ..?


COMMERCIAL BREAK
SCROLL TO CONTINUE READING

‘ಕನ್ನಡ’ ಕಡೆಗಣಿಸಿದ್ದಕ್ಕೆ ಶಾರುಖ್ ವಿರುದ್ಧ ಕೆಂಡಾಮಂಡಲ!


ಕರ್ನಾಟಕವೂ ಸೇರಿದಂತೆ ದೇಶ-ವಿದೇಶಗಳಲ್ಲಿ ಕಿಂಗ್ ಖಾನ್‍ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಚಿತ್ರರಂಗದಲ್ಲಿ ತಮ್ಮ 30 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಶಾರುಖ್ ಅನೇಕ ಅತ್ಯುತ್ತಮ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ಶುಭ ಸಂದರ್ಭದಲ್ಲಿ ಶಾರುಖ್ ಅವರು ಅಭಿಮಾನಿಗಳಿಗೆ ಮತ್ತೊಂದು ಗುಡ್‍ ನ್ಯೂಸ್ ನೀಡಿದ್ದಾರೆ. ಆದರೆ, ಈ ಗುಡ್ ನ್ಯೂಸ್ ನಡುವೆ ಅವರೊಂದು ಎಡವಟ್ಟು ಮಾಡಿದ್ದಾರೆ.


ಇದನ್ನೂ ಓದಿ: ಜೂನ್ 30 ರಂದು ದೇಶಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ ಪೃಥ್ವಿರಾಜ್ ಸುಕುಮಾರನ್ ರ ಕಡುವ ಸಿನಿಮಾ


ಹೌದು, ಶಾರುಖ್ ಮಾಡಿರೋ ಈ ಎಡವಟ್ಟಿಗೆ ಕನ್ನಡಿಗರು ಕೆಂಡಾಮಂಡಲರಾಗಿದ್ದು, ‘ಕನ್ನಡ’ ಭಾಷೆ ಕಡೆಗಣಿಸಿದ ಬಿಟೌನ್‍ ಸ್ಟಾರ್‍ಗೆ ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಶಾರುಖ್ ತಮ್ಮ ಮುಂದಿನ ಚಿತ್ರದಲ್ಲಿ ‘ಕನ್ನಡ’ ಭಾಷೆಯನ್ನು ಕಡೆಗಣಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕನ್ನಡಿಗರು ಎಲ್ಲಾ ಭಾಷೆಯನ್ನು ಗೌರವಿಸುವಂತೆ ಕಿಂಗ್ ಖಾನ್‍ಗೆ ತಿರುಗೇಟು ನೀಡಿದ್ದಾರೆ.  ಅಷ್ಟಕ್ಕೂ ಶಾರುಖ್ ಮಾಡಿದ ಎಡವಟ್ಟು ಏನು ಅಂತೀರಾ..?     


‘ಹೋಪ್’ ಟ್ರೇಲರ್ ಅನಾವರಣ ಮಾಡಿದ ಸಚಿವ ಅಶ್ವತ್ಥ್ ನಾರಾಯಣ್..ಜುಲೈ 8ಕ್ಕೆ ಸಿನಿಮಾ ಬೆಳ್ಳಿತೆರೆಗೆ


‘ಪಠಾಣ್’ ಚಿತ್ರದ ಹೊಸ ಪೋಸ್ಟರ್ ನೋಡಿದ ನೂರಾರು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಶಾರುಖ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ಪೋಸ್ಟರ್‍ ಎಲ್ಲಿದೆ..? ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗದ ‘ಪಠಾಣ್’ ಚಿತ್ರವನ್ನು ಕನ್ನಡಿಗರ್ಯಾರು ವೀಕ್ಷಿಸುವುದಿಲ್ಲ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ತಯಾರಿಸುವ ನೀವು ಕನ್ನಡವನ್ನು ಕಡೆಗಣಿಸಿದ್ದು ಏಕೆ..? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.     


ನೀವು ಕನ್ನಡ ಭಾಷೆಯನ್ನು ಕಡೆಗಣಿಸುತ್ತಿರುವುದು ಏಕೆ? ನಿಮ್ಮ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುವುದೇ ಬೇಡ. ಕನ್ನಡದಲ್ಲಿ ಬಿಡುಗಡೆ ಮಾಡದ ನಿಮ್ಮ ಸಿನಿಮಾವನ್ನು ನಾವು ನೋಡುವುದಿಲ್ಲವೆಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಬಾಲಿವುಡ್ ನಟನ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ‘ಪಠಾಣ್’ ಸಿನಿಮಾ ಬಿಡುಗಡೆ ವೇಳೆ ಮತ್ತಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆ ಇದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.