ನಾಗಚೈತನ್ಯ ಜೊತೆಗಿನ ಬ್ರೇಕಪ್‌ ಬಳಿಕ ಗುಡ್‌ನ್ಯೂಸ್‌ ಕೊಟ್ಟ ಸಮಂತಾ!

ಫೇಮಸ್‌ ಸ್ಟಾರ್‌ ನಟಿಯರ ಈ ಪಟ್ಟಿಯ ಬಗ್ಗೆ ಮಾತನಾಡುವುದಾದರೆ, ದಕ್ಷಿಣದ ಇತರ ತಾರೆಯರ ಪೈಕಿ ನಯನತಾರಾ ಮೂರನೇ ಸ್ಥಾನದಲ್ಲಿ, ಕಾಜಲ್ ಅಗರ್ವಾಲ್ ಐದನೇ ಸ್ಥಾನದಲ್ಲಿ, ಕೀರ್ತಿ ಸುರೇಶ್ ಆರನೇ ಸ್ಥಾನದಲ್ಲಿ, ರಶ್ಮಿಕಾ, ಪೂಜಾ ಹೆಗ್ಡೆ ಮತ್ತು ಅನುಷ್ಕಾ ಶೆಟ್ಟಿ ಕ್ರಮವಾಗಿ ಎಂಟು, ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿದ್ದಾರೆ.

Written by - Bhavishya Shetty | Last Updated : Jun 25, 2022, 10:04 AM IST
  • ಟಾಪ್-10 ಮಹಿಳಾ ತಾರೆಯರ ಪಟ್ಟಿ ಬಿಡುಗಡೆ
  • ಓರ್ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ ನಡೆಸಿದ ಸಮೀಕ್ಷೆ
  • ಅಗ್ರಸ್ಥಾನ ಪಡೆದುಕೊಂಡ ನಟಿ ಸಮಂತಾ
ನಾಗಚೈತನ್ಯ ಜೊತೆಗಿನ ಬ್ರೇಕಪ್‌ ಬಳಿಕ ಗುಡ್‌ನ್ಯೂಸ್‌ ಕೊಟ್ಟ ಸಮಂತಾ!  title=
Samantha

ಓರ್ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ ನಡೆಸಿದ ಸಮೀಕ್ಷೆಯಲ್ಲಿ ದಕ್ಷಿಣ ಭಾರತದ ಸ್ಟಾರ್‌ಗಳೇ ಪ್ರಾಬಲ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ. ಟಾಪ್-10 ಮಹಿಳಾ ತಾರೆಯರ ಪಟ್ಟಿಯಲ್ಲಿ 5 ತೆಲುಗು, 3 ಹಿಂದಿ ಮತ್ತು 2 ತಮಿಳು ಸ್ಟಾರ್‌ ನಟಿಗಳ ಹೆಸರುಗಳು ಸೇರಿವೆ. ಕುತೂಹಲಕಾರಿ ಸಂಗತಿಯೆಂದರೆ ಈ ಪಟ್ಟಿಯಲ್ಲಿ ಸೌತ್ ಸೂಪರ್ ಸ್ಟಾರ್ ಸಮಂತಾ ಅಗ್ರಸ್ಥಾನದಲ್ಲಿದ್ದು, ಆಲಿಯಾ ಭಟ್ ನಂತರದ ಸ್ಥಾನದಲ್ಲಿದ್ದಾರೆ. ಬಾಲಿವುಡ್‌ನ ಮೂವರು ನಟಿಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಆಲಿಯಾ ಎರಡನೇ ಸ್ಥಾನದಲ್ಲಿದ್ದರೆ, ದೀಪಿಕಾ ಐದನೇ ಸ್ಥಾನದಲ್ಲಿದ್ದಾರೆ ಮತ್ತು ಕತ್ರಿನಾ ಏಳನೇ ಸ್ಥಾನದಲ್ಲಿದ್ದಾರೆ.

ನಟ ನಾಗಚೈತನ್ಯರಿಗೆ ವಿಚ್ಛೇದನ ನೀಡಿದ ಬಳಿಕ ಸಮಂತಾ ತಮ್ಮ ವೃತ್ತಿಜೀವನದ ಕಡೆ ಗಮನ ಹರಿಸುತ್ತಿದ್ದಾರೆ. ಸಮಂತಾ 'ಪುಷ್ಪ' ಸಿನಿಮಾದಲ್ಲಿ ಸೂಪರ್‌ಹಿಟ್ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಹಾಡಿನಲ್ಲಿ ಅಭಿಮಾನಿಗಳ ಹೃದಯ ಗೆದ್ದ ನಟಿ, ತಮ್ಮ ಹೊಸ ಫೋಟೋಶೂಟ್‌ಗಳ ಮೂಲಕ ಅಚ್ಚರಿ ಮೂಡಿಸಿದ್ದರು.  

ಇದನ್ನೂ ಓದಿ: Shocking News: ಹಳ್ಳದಲ್ಲಿ ತೇಲಿಬಂದ ಭ್ರೂಣಗಳು! ಬೆಚ್ಚಿಬಿದ್ದ ಬೆಳಗಾವಿ ಜನರು

ಫೇಮಸ್‌ ಸ್ಟಾರ್‌ ನಟಿಯರ ಈ ಪಟ್ಟಿಯ ಬಗ್ಗೆ ಮಾತನಾಡುವುದಾದರೆ, ದಕ್ಷಿಣದ ಇತರ ತಾರೆಯರ ಪೈಕಿ ನಯನತಾರಾ ಮೂರನೇ ಸ್ಥಾನದಲ್ಲಿ, ಕಾಜಲ್ ಅಗರ್ವಾಲ್ ಐದನೇ ಸ್ಥಾನದಲ್ಲಿ, ಕೀರ್ತಿ ಸುರೇಶ್ ಆರನೇ ಸ್ಥಾನದಲ್ಲಿ, ರಶ್ಮಿಕಾ, ಪೂಜಾ ಹೆಗ್ಡೆ ಮತ್ತು ಅನುಷ್ಕಾ ಶೆಟ್ಟಿ ಕ್ರಮವಾಗಿ ಎಂಟು, ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿದ್ದಾರೆ.

ಏಪ್ರಿಲ್ ತಿಂಗಳ ಆರಂಭದಲ್ಲಿಓರ್ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ ಸಮೀಕ್ಷೆ ನಡೆಸಿದೆ. ಈ ಸಂಶೋಧನಾ ವರದಿಯ ಪ್ರಕಾರ, ಸಮಂತಾ ಪ್ರಭು ಟಾಪ್‌  ಫೇಮಸ್‌ ಸ್ಟಾರ್‌ ನಟಿ ಎಂದು ಪರಿಗಣಿಸಲಾಗಿದೆ. 

ಸಮಂತಾ ರುತುಪ್ರಭು ಇಂದು ಭಾರತದ ಅತಿದೊಡ್ಡ ನಟಿಯರಲ್ಲಿ ಒಬ್ಬರು. ಅವರು ತಮ್ಮ ನಟನೆ ಮತ್ತು ಪ್ರತಿಭೆಯಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.  ದಿ ಫ್ಯಾಮಿಲಿ ಮ್ಯಾನ್ 2 ಸಿರೀಸ್‌, ಪುಷ್ಪಾ ಸಿನಿಮಾದಲ್ಲಿ ಬೋಲ್ಡ್‌ ಆಗಿ ಅಭಿನಯಿಸಿದ ಸಮಂತಾ ಪಡ್ಡೆ ಹುಡುಗರ ಮನಗೆದ್ದಿದ್ದಾರೆ. 

ಇದನ್ನೂ ಓದಿ: Gold-Sliver Price: ಗ್ರಾಹಕರಿಗೆ ಸಿಹಿ ಸುದ್ದಿ: ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ

ಸಮಂತಾ ಜನಪ್ರಿಯ ನಟಿ ಮಾತ್ರವಲ್ಲ, ಉದ್ಯಮಿ ಮತ್ತು ಸೋಶಿಯಲ್‌ ಮೀಡಿಯಾ ಸ್ಟಾರ್‌ ಕೂಡ. ಅವರ ಮೋಡಿ ಮಾಡುವ ನೋಟ ಮತ್ತು ನಟನಾ ಕೌಶಲ್ಯಗಳು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದುವಂತೆ ಮಾಡಿದೆ. ʼಏ ಮಾಯಾ ಚೆಸಾವೇʼ ಸಿನಿಮಾದಲ್ಲಿನ ಜೆಸ್ಸಿ ಪಾತ್ರದಿಂದ ಸಿನಿ ಜರ್ನಿ ಆರಂಭಿಸಿದ ಸಮಂತಾ ಸದ್ಯ ಪುಷ್ಪ ಸಿನಿಮಾದ ʼಊ ಆಂಟಾವʼ ಐಟಂ ಸಾಂಗ್‌ನಿಂದ ಸಖತ್‌ ಫೇಮಸ್‌ ಆಗಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News