ಬೆಂಗಳೂರು : ದಿ ಡಿವೈನ್‌ ಬ್ಲಾಕ್ಬಸ್ಟರ್‌ ಸಿನಿಮಾ ಕಾಂತಾರ ಭಾರತೀಯ ಸಿನಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಿರ್ದೇಶನದ ಜೊತೆ ನಟಿಸಿ ರಿಷಬ್ ಶೆಟ್ಟಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಪ್ಯಾನ್‌ ಇಂಡಿಯಾ ಸಿನಿಮಾ ಕುರಿತು ಮಾತನಾಡಿ, ಸಿನಿಮಾಗಳು ಭಾಷೆಯ ಗಡಿ ದಾಟುತ್ತಿವೆ. ಕಂಟೆಂಟ್ ಪ್ರೇಕ್ಷಕರಿಗೆ ಇಷ್ಟವಾದ್ರೆ ಸಾಕು ತಾನಾಗಿಯೇ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟಕ್ಕೆ ತಲುಪುತ್ತದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಖಾಸಗಿ ವಾಹಿನಿಗೆ ಅನುಪಮ್‌ ಖೆರ್‌ ಅವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ರಿಷಬ್‌ ಶೆಟ್ಟಿ, ಇಂದು ಚಲನಚಿತ್ರಗಳು ಭಾಷೆಯ ಗಡಿ ದಾಟಿ ಬೆಳೆಯುತ್ತಿವೆ. ಪ್ರಸ್ತುತ ಪ್ರೇಕ್ಷಕರಿಗೆ ಕಂಟೆಂಟ್ ಕನೆಕ್ಟ್ ಆದ್ರೆ ಆ ಸಿನಿಮಾ ಫ್ಯಾನ್‌ ಇಂಡಿಯಾ ಸಿನಿಮಾ ಎಂದು ಒಪ್ಪಿಕೊಳ್ಳಲಾಗುವುದು. ಒಂದು ಚಲನಚಿತ್ರವು ಹೆಚ್ಚು ಸ್ಥಳೀಯ ಆಚಾರ, ವಿಚಾರ, ಆಚರಣೆ, ಮೂಲ ತತ್ವಾಧಾರಿತ ವಿಚಾರವನ್ನು ಒಳಗೊಂಡಿದ್ದರೆ ಅದು ಜನರಿಗೆ ಹತ್ತಿರವಾಗುತ್ತದೆ ಎಂಬ ಮಂತ್ರವನ್ನು ನಾನು ನಂಬಿದ್ದೇನೆ ಎಂದು ರಿಷಬ್ ಶೆಟ್ಟಿ ಹೇಳಿದರು.


ಇದನ್ನೂ ಓದಿ: ಡಿ.30ಕ್ಕೆ ಯೋಗರಾಜ ಭಟ್ಟರ ಪದವಿ ಪೂರ್ವ ತೆರೆಗೆ..!


ಇನ್ನು ಕಾಂತಾರ ಸಿನಿಮಾದ ಕುರಿತು ಮಾತನಾಡಿ, ʼಕಾಂತಾರʼ ಮಾನವರು ಮತ್ತು ಪ್ರಕೃತಿಯ ನಡುವೆ ನಡೆಯುತ್ತಿರುವ ಸಂಘರ್ಷದ ಕಥೆ. ಇದು ಪ್ರಕೃತಿ, ಸಂಸ್ಕೃತಿ ಮತ್ತು ಕಾದಂಬರಿಗಳ ಸಮ್ಮಿಲನ. ನಮ್ಮಲ್ಲಿ ನಮ್ಮ ಸಂಸ್ಕೃತಿಗಳು ಮತ್ತು ನಂಬಿಕೆಯ ವ್ಯವಸ್ಥೆಗಳು ಪ್ರತಿಯೊಬ್ಬರಲ್ಲೂ ಬೇರೂರಿದೆ. ತುಳುನಾಡು ಸಂಸ್ಕೃತಿಯಲ್ಲಿ ನಾನು ಕೇಳಿದ ಜನಪದ ಮತ್ತು ಬಾಲ್ಯದ ಅನುಭವಗಳ ಫಲವಾಗಿ ಈ ಚಿತ್ರ ಮೂಡಿಬಂದಿದೆ ಎಂದರು. ಮಾತು ಮುಂದುವರೆಸಿದ ರಿಷಬ್‌, ಎರಡನೇ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ 'ಕಾಂತಾರ' ಕಲ್ಪನೆ ಹುಟ್ಟುಕೊಂಡಿತು. ಸಿನಿಮಾ ದಕ್ಷಿಣ ಕನ್ನಡ ಜಿಲ್ಲೆಯ ನನ್ನ ಹುಟ್ಟೂರಾದ ಕುಂದಾಪುರದಲ್ಲಿ ಚಿತ್ರೀಕರಿಸಿದ್ದೇನೆ ಎಂದು ತಿಳಿಸಿದರು. 


ಇದೀಗ ಅಮೆಜಾನ್ ಪ್ರೈಂನಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿಯೂ ಸಹ ಕಾಂತಾರಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಲೇ ಯಶಸ್ವಿಯಾಗಿ 50 ದಿನಗಳನ್ನು ದಾಟಿ ಇಂದಿಗೂ ಸಿನಿಮಾ ಚಿತ್ರಮಂದಿಗಳಲ್ಲಿ ಪ್ರದರ್ಶನವಾಗುತ್ತಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ದಿ ಡಿವೈನ್‌ ಬ್ಲಾಕ್ಬಸ್ಟರ್‌ ಕಾಂತಾರವನ್ನು ವಿಜಯ್‌ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಿನಿಮಾ 400 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.