ಆಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ದಾಖಲಿಸಿ ನಟ ವಿದ್ಯಾಭರಣ

ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿಯೊಂದಿಗೆ ವಿಳ್ಯದೆಲೆ ಶಾಸ್ತ್ರ ಮುರಿದುಬೀಳುತ್ತಿದ್ದಂತೆ ತಮ್ಮ ತೇಜೋವಧೆ ಕಾರಣರಾದವರ ವಿರುದ್ಧ ಉದ್ಯಮಿ ನಟ, ವಿದ್ಯಾಭರಣ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

Written by - VISHWANATH HARIHARA | Edited by - Krishna N K | Last Updated : Nov 25, 2022, 06:19 PM IST
  • ತೇಜೋವಧೆ ಕಾರಣರಾದವರ ವಿರುದ್ಧ ಉದ್ಯಮಿ ವಿದ್ಯಾಭರಣ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ
  • ನಟಿ ವೈಷ್ಣವಿಯೊಂದಿಗೆ ವಿದ್ಯಾಭರಣ ನೊಂದಿಗೆ ವಿಳ್ಯದೆಲೆ ಶಾಸ್ತ್ರ ಆಗಿತ್ತು
  • ಸಮಾರಂಭದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು
ಆಡಿಯೋ ವೈರಲ್ ಮಾಡಿದವರ ವಿರುದ್ಧ ದೂರು ದಾಖಲಿಸಿ ನಟ ವಿದ್ಯಾಭರಣ title=

ಬೆಂಗಳೂರು : ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿಯೊಂದಿಗೆ ವಿಳ್ಯದೆಲೆ ಶಾಸ್ತ್ರ ಮುರಿದುಬೀಳುತ್ತಿದ್ದಂತೆ ತಮ್ಮ ತೇಜೋವಧೆ ಕಾರಣರಾದವರ ವಿರುದ್ಧ ಉದ್ಯಮಿ ನಟ, ವಿದ್ಯಾಭರಣ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ನಟಿ ವೈಷ್ಣವಿಗೌಡಯೊಂದಿಗೆ ವಿದ್ಯಾಭರಣ ನೊಂದಿಗೆ ವಿಳ್ಯದೆಲೆ ಶಾಸ್ತ್ರ ಆಗಿತ್ತು. ಸಮಾರಂಭದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿದ್ಯಾಭರಣ ಕುರಿತಂತೆ ಅಪಸ್ವರ ಕೇಳಿಬಂದಿತ್ತು‌. ಅಲ್ಲದೆ ಆತನ ಯುವತಿಯರೊಂದಿಗೆ ಅಕ್ರಮ ಸಂಬಂಧವಿದೆ ಎನ್ನುವ ರೀತಿಯ ಯುವತಿಯರಿಬ್ಬರ ಆಡಿಯೋ ಕರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯ ವೈಷ್ಣವಿ ತಮ್ಮ ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದಳು‌. ತಮ್ಮ ಚಾರಿತ್ರ್ಯವಧೆ ಕಾರಣರಾದವರ ವಿರುದ್ಧ ಕಮೀಷನರ್ ಕಚೇರಿಗೆ ಭೇಟಿ ನೀಡಿ ದೂರು ನೀಡಿದ್ದಾರೆ. 

ಇದನ್ನೂ ಓದಿ: ಕನ್ನಡಿಗನ ʼಕಾಂತಾರʼಕ್ಕೆ ದೊರೆತ ನ್ಯಾಯ : ʼವರಾಹ ರೂಪಂʼ ಹಾಡಿಗೆ ಇನ್ನಿಲ್ಲ ತಡೆ..!

ದೂರು ನೀಡಿದ ಬಳಿಕ ಮಾತನಾಡಿದ ವಿದ್ಯಾಭರಣ ನನ್ನ ವಿರುದ್ಧ ಇಲ್ಲಸಲ್ಲದ  ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಡಿಯೊ ಹರಿಬಿಡಲಾಗಿದೆ. ಇದು ಶುದ್ಧ ಸುಳ್ಳು‌ ಆಡಿಯೊದಲ್ಲಿ ಹೇಳಿರುವಂತೆ ನಾನು ತಪ್ಪು ಮಾಡಿಲ್ಲ. ನನ್ನ ಹಾಗೂ ಕುಟುಂಬದವರ ಘನತೆಗೆ ಧಕ್ಕೆಯಾಗಿದೆ. ಈ ಸಂಬಂಧ ಆಡಿಯೊ ವೈರಲ್ ಮಾಡಿದವರ ವಿರುದ್ಧ ದೂರು ನೀಡಲಾಗಿದ್ದು ಕಮೀಷನರ್ ಅವರು ಸುಬ್ರಮಣ್ಯಪುರ ಪೊಲೀಸರಿಗೆ ತನಿಖೆಗೆ ವಹಿಸಿದ್ದಾರೆ ಎಂದರು.

ನನಗೂ ವೈಷ್ಣವಿಗೂ 2016ರಿಂದಲೂ ಪರಿಚಯವಾಗಿತ್ತು. ನಾನು ನಟಿಸಿದ ಚಾಕಲೇಟ್ ಬಾಯ್ ಸಿನಿಮಾದಲ್ಲಿಯೂ ನಟಿಸಿದ್ದರು. ಇತ್ತೀಚೆಗೆ ಸಿನಿಮಾವೊಂದರ ಪ್ರೀಮಿಯರ್ ಶೋ ನಲ್ಲಿ ಮುಖಾಮುಖಿಯಾಗಿದ್ದೆವು. ಬಳಿಕ ಗುರು-ಹಿರಿಯರು ನಿಶ್ಚಯಿಸಿ ಕುಟುಂಬದವರ ಸಮ್ಮುಖ ಮೇರೆಗೆ  ವಿಳ್ಯದೆಲೆ ಶಾಸ್ತ್ರ (ಹೆಣ್ಣು ನೋಡುವ ಶಾಸ್ತ್ರ) ಗಟ್ಟಿಯಾಗಿತ್ತು. ಕಾರ್ಯಕ್ರಮದ ಪೋಟೊಸ್ ವೈರಲ್ ಆಗುತ್ತಿದ್ದಂತೆ ನನ್ನ  ವಿರುದ್ಧ ಹೊಟ್ಟೆ ಕಿಚ್ಚಿನಿಂದ ಮೂರನೇ ವ್ಯಕ್ತಿಯು ಇಲ್ಲಸಲ್ಲದ ಆರೋಪ ಮಾಡಿದ್ದಾರೆ‌.

ಇದನ್ನೂ ಓದಿ: Payal Rajput Photos : ಪಾಯಲ್‌ ಅಂದ ನೋಡಿ ಪಾಗಲ್‌ ಆದ ಪಡ್ಡೆ ಹೈ

 ಇದರಿಂದ ನನ್ನ ಘನತೆಗೆ  ಧಕ್ಕೆಯಾಗಿದೆ‌. ಯುವತಿ ವಿಚಾರವಾಗಿ ಹಿಂದೆ ತಪ್ಪು ಮಾಡಿದ್ದು ನಿಜ.‌ನಾನು ಮನುಷ್ಯನೇ.. ಆದರೆ ಆಗಿರುವ ತಪ್ಪನ್ನು ತಿದ್ದಿಕೊಂಡಿದ್ದೇನೆ‌. ನಾನು ಯಾರ ಹೆಸರು ಹೇಳಲು ಇಷ್ಟಪಡುವುದಿಲ್ಲ‌‌. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ವಿಳ್ಯದೆಲೆ ಶಾಸ್ತ್ರ ಆಗುವ ಮುನ್ನವೇ ಅರೋಪಿಸಬಹುದಿತ್ತು‌‌‌‌‌ ಆದರೆ ಈಗ್ಯಾಕೆ ಆರೋಪ ಮಾಡುತ್ತಿರುವುದು ಅನ್ನುವುದು ಗೊತ್ತಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುವೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News