ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲಿ ನೋಡಿದರೂ "ಕಾಂತಾರ" ಸಿನಿಮಾದೆ ಮಾತು. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿರುವ ಈ ಅದ್ಭುತ ಚಿತ್ರ ಬೇರೆ ಬೇರೆ ರಾಜ್ಯಗಳಲ್ಲಿ, ಆಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿ ಭಾಷೆಯಲ್ಲೂ "ಕಾಂತಾರ" ಚಿತ್ರ ತೆರೆ ಕಾಣುತ್ತಿದೆ. 


COMMERCIAL BREAK
SCROLL TO CONTINUE READING

ಒಳ್ಳೆಯ ಕಥಾವಸ್ತುವುಳ್ಳ ಚಿತ್ರವನ್ನು ಚಿತ್ರರಸಿಕರು ಮೆಚ್ಚಿಕೊಳ್ಳುತ್ತಾರೆ ಎನ್ನುವುದಕ್ಕೆ "ಕಾಂತಾರ" ಚಿತ್ರದ ಯಶಸ್ಸೇ ಸಾಕ್ಷಿ. ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಮನಮುಟ್ಟುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಉತ್ತಮ ಚಿತ್ರವನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು  ಹಾಗೂ ನಿರ್ದೇಶಿಸಿರುವ ರಿಷಬ್ ಶೆಟ್ಟಿ ಅವರಿಗೆ ನಿಜಕ್ಕೂ ಅಭಿನಂದನೆ ಸಲ್ಲಬೇಕು.


ಇದನ್ನೂ ಓದಿ- Kantara : ಕಾಂತಾರಾ ಸಿನಿಮಾ ಬಗ್ಗೆ ನಟ ಪ್ರಭಾಸ್‌ ಹೇಳಿದ್ದೇನು ನೋಡಿ.!


ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲಿ ನೋಡಿದರೂ "ಕಾಂತಾರ" ಸಿನಿಮಾದೆ ಮಾತು. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿರುವ ಈ ಅದ್ಭುತ ಚಿತ್ರ ಬೇರೆ ಬೇರೆ ರಾಜ್ಯಗಳಲ್ಲಿ, ಆಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿ ಭಾಷೆಯಲ್ಲೂ "ಕಾಂತಾರ" ಚಿತ್ರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2500 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ "ಕಾಂತಾರ" ಪ್ರದರ್ಶನವಾಗಲಿದೆ.


ಇದನ್ನೂ ಓದಿ- Kanthara: ‘ಕಾಂತಾರ’ ಸಿನಿಮಾ ನೋಡುತ್ತಿದ್ದಂತೆ ಮಹಿಳೆ ಮೇಲೆ ಆವಾಹನೆಯಾದ ದೈವ! ವಿಡಿಯೋ ವೈರಲ್


ಹೊಂಬಾಳೆ ಫಿಲಂಸ್ ನಿರ್ಮಾಣದ "ಕೆ.ಜಿ.ಎಫ್ 2" ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಯಶಸ್ಸು ಗಳಿಸಿದ್ದು ಗಮನಾರ್ಹ. ಈಗ "ಕಾಂತಾರ" ಚಿತ್ರವನ್ನು ಅಧಿಕ ಸಂಖ್ಯೆಯ ಚಿತ್ರಮಂದಿಗಳಲ್ಲಿ ಬಿಡುಗಡೆ ಮಾಡುವ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ ಕನ್ನಡದ ಹೆಮ್ಮೆಯ ನಿರ್ಮಾಪಕ ವಿಜಯ್ ಕಿರಗಂದೂರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ