Kanthara: ‘ಕಾಂತಾರ’ ಸಿನಿಮಾ ನೋಡುತ್ತಿದ್ದಂತೆ ಮಹಿಳೆ ಮೇಲೆ ಆವಾಹನೆಯಾದ ದೈವ! ವಿಡಿಯೋ ವೈರಲ್

ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ಪ್ರಸ್ತುತಿ ಈ ಚಿತ್ರದಲ್ಲಿದೆ. ಇನ್ನು ಈ ಸಿನಿಮಾ ಕಂಡ ಪ್ರತಿಯೊಬ್ಬರೂ ಊಹೆಗೂ ನಿಲುಕದಂತಹ ಅಭಿನಯ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಕ್ಲೈಮ್ಯಾಕ್ಸ್ ನ 15 ರಿಂದ 20 ನಿಮಿಷ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವಂತೆ ದೃಶ್ಯಗಳನ್ನು ಚಿತ್ರೀಕರಿಸಿಲಾಗಿದೆ.

Written by - Bhavishya Shetty | Last Updated : Oct 1, 2022, 11:07 PM IST
    • ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆ
    • ನಡೆದಿರುವುದು ಮಂಗಳೂರಿನಲ್ಲಿ ಪಿವಿಆರ್ ಮಾಲ್ ನಲ್ಲಿ
    • ಈ ಘಟನೆಯ ವಿಡಿಯೋವನ್ನು ಯಾರೂ ಸೆರೆಹಿಡಿಯುವ ಪ್ರಯತ್ನ ಮಾಡಿಲ್ಲ
Kanthara: ‘ಕಾಂತಾರ’ ಸಿನಿಮಾ ನೋಡುತ್ತಿದ್ದಂತೆ ಮಹಿಳೆ ಮೇಲೆ ಆವಾಹನೆಯಾದ ದೈವ! ವಿಡಿಯೋ ವೈರಲ್ title=
Kantara movie

‘ಕಾಂತಾರ’ ಸಿನಿಮಾ ಪ್ರೇಕ್ಷಕರನ್ನು ದಿಗ್ಭಮೆಗೊಳಿಸಿದೆ. ಈ ಸಿನಿಮಾ ಸ್ಯಾಂಡಲ್ ವುಡ್ ನ ಮೈಲಿಗಲ್ಲು ಎಂದರೆ ತಪ್ಪಾಗಲ್ಲ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ, ರಿಷಬ್ ಶೆಟ್ಟಿ ಮನೋಜ್ಞ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದ ಸಿನಿಮಾ ಈ ‘ಕಾಂತಾರ’.

ಇದನ್ನೂ ಓದಿ: ಕಿಚ್ಚ ಸುದೀಪ್ ಮಗಳ ಧ್ವನಿಗೆ ಮರುಳಾದ ಫ್ಯಾನ್ಸ್‌ : ʼಸೋ ಕ್ಯೂಟ್‌ ವಾಯ್ಸ್‌ ಸಾನ್ವಿʼ..!

ತುಳುನಾಡಿನ ದೈವಾರಾಧನೆ ಮತ್ತು ಕಂಬಳದ ಪ್ರಸ್ತುತಿ ಈ ಚಿತ್ರದಲ್ಲಿದೆ. ಇನ್ನು ಈ ಸಿನಿಮಾ ಕಂಡ ಪ್ರತಿಯೊಬ್ಬರೂ ಊಹೆಗೂ ನಿಲುಕದಂತಹ ಅಭಿನಯ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಕ್ಲೈಮ್ಯಾಕ್ಸ್ ನ 15 ರಿಂದ 20 ನಿಮಿಷ ಪ್ರೇಕ್ಷಕರನ್ನು ನಿಬ್ಬೆರಗಾಗಿಸುವಂತೆ ದೃಶ್ಯಗಳನ್ನು ಚಿತ್ರೀಕರಿಸಿಲಾಗಿದೆ.

ಇದೀಗ ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾಗಿದೆ ಎಂದು ತಿಳಿದುಬಂದಿದೆ. ಸಿನಿಮಾದ ಕ್ಲೈಮಾಕ್ಸ್ ನೋಡುತ್ತಿದ್ದಂತೆ ದೈವ ಮೈಮೇಲೆ ಬಂದಂತೆ ಮಹಿಳೆ ವರ್ತಿಸಿದ್ದಾರೆ. ಈ ಘಟನೆ ನಡೆದಿರುವುದು ಮಂಗಳೂರಿನಲ್ಲಿ ಪಿವಿಆರ್ ಮಾಲ್ ನಲ್ಲಿ. ಆದರೆ ಈ ಘಟನೆಯ ವಿಡಿಯೋವನ್ನು ಯಾರೂ ಸೆರೆಹಿಡಿಯುವ ಪ್ರಯತ್ನ ಮಾಡಿಲ್ಲ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Kantara : ಕಾಂತಾರಾ ಸಿನಿಮಾ ಬಗ್ಗೆ ನಟ ಪ್ರಭಾಸ್‌ ಹೇಳಿದ್ದೇನು ನೋಡಿ.!

ಕಾಂತಾರ ಸಿನಿಮಾ ಬಿಡುಗಡೆಯಾಗಿ ಕೇವಲ 2 ದಿನಗಳಾಗಿದ್ದರೂ ಸಹ ಜಗತ್ತಿನಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾ ವೀಕ್ಷಿಸಿರುವ ಪ್ಯಾನ್ ಇಂಡಿಯಾ ಸ್ಟಾರ್ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News