ಮಂಗಳೂರು: 2022ರಲ್ಲಿ ಇಡೀ ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿನೋಡುವಂತೆ ಮಾಡಿ ಇತಿಹಾಸ ಸೃಷ್ಟಿಸಿದ "ಕಾಂತಾರ" ಸಿನಿಮಾವು ಇದೀಗ 'ತುಳು' ಭಾಷೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.ಇದು ಕರ್ನಾಟಕದ ತುಳುನಾಡಿನ ಪ್ರಾಂತ್ಯದಲ್ಲಿ ನಡೆಯುವ ದೈವಾರಾಧನೆ, ಭೂತಕೋಲ, ಕಂಬಳ, ಇತ್ಯಾದಿ ಸಂಭ್ರಮಗಳ ಹಿನ್ನೆಲೆಯಲ್ಲಿ ಆಧರಿಸಿದ  ಕಥೆಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Prashant Sambargi : ಬಿಗ್‌ ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ಕಿರುತೆರೆಗೆ ಎಂಟ್ರಿ 


ತುಳುನಾಡಿನ ಹೊಸ ವರ್ಷ 'ಬಿಸು' ಹಬ್ಬದ ಪ್ರಯುಕ್ತ ಪ್ರೇಕ್ಷಕರು ಹೊತ್ತು ಕೊಂಡಾಡಿದ  ಹೆಮ್ಮೆಯ ಸಿನಿಮಾ  "ಕಾಂತಾರ" ತುಳು ಭಾಷೆಯಲ್ಲಿ ಏಪ್ರಿಲ್ 15 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


ಕಾಂತಾರ ಒಂದು ದಂತಕಥೆ ಈ ಕನ್ನಡ ಚಲನಚಿತ್ರವನ್ನು ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿದ ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.


ಇದನ್ನೂ ಓದಿ: Salman Khan : ಬಾಲಿವುಡ್‌ ಬಾದ್‌ ಷಾ ಸಲ್ಲುಗೆ ಬಂತು ಮತ್ತೊಂದು ಜೀವ ಬೆದರಿಕೆ ಕರೆ 


ಈ ಚಿತ್ರದಲ್ಲಿ  ರಿಷಬ್ ಭೂತಕೋಲ ಕಲಾವಿದನಾಗಿ ನಟಿಸಿದ್ದಾರೆ. ಈ ಸಿನಿಮಾ ಮೂಲತಃ ಸಂಪೂರ್ಣ ಕರಾವಳಿ ಭಾಗದ ಕಥೆ,ಭಾಷೆ ಆಧರಿತ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಕಾಡಿನ ರಕ್ಷಣೆ, ವರ್ಗಗಳ  ತಾರತಮ್ಯ  ಉಳ್ಳವರು ಇಲ್ಲದವರ ನಡುವಿನ ಸಂಘರ್ಷ , ಅಧಿಕಾರಿ ಹಾಗೂ ಸಾಮಾನ್ಯ ವರ್ಗದವರ  ಜಂಜಾಟವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.


ಇದೀಗ ಮತ್ತೆ ತುಳು ಭಾಷೆಯಲ್ಲಿ ಡಬ್‌ ಆಗಿ ಮತ್ತೆ ನಾಳೆ ಪ್ರಸಾರವಾಗಲಿದೆ.  ಸಿನಿಮಾದಲ್ಲಿ ಶಿವ ಎಂಬ ಪಾತ್ರದಲ್ಲಿ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ,  ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಸೇರಿದಂತೆ ಅನೇಕರು ನಟಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.