Salman Khan : ಬಾಲಿವುಡ್‌ ಬಾದ್‌ ಷಾ ಸಲ್ಲುಗೆ ಬಂತು ಮತ್ತೊಂದು ಜೀವ ಬೆದರಿಕೆ ಕರೆ 

Salman Khan: ಇತ್ತಿಚೇಗೆ ಸಿನಿಮಾ ತಾರೆಯರಿಗೆ ಬೆದರಿಕೆ ಕರೆಗಳು  ಹೆಚ್ಚಾಗುತ್ತಿವೆ. ಇದೀಗ ಬಾಲಿವುಡ್‌ ಬಾದ್‌ ಷಾ ಸಲ್ಮಾನ್ ಖಾನ್ ಮುಂಬರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೈಲರ್ ಅನ್ನು  ಏಪ್ರಿಲ್ 10 ರಂದು ಬಿಡುಗಡೆ ಮಾಡಿ ಮನೆ ಹೊರಟ ಇದರ ಬೆನ್ನಲೇ ಸಲ್ಲು ಗೆ ಜೀವ ಬೆದರಿಕೆ ಕರೆ ಬಂದಿದೆ.     

Written by - Zee Kannada News Desk | Last Updated : Apr 11, 2023, 05:05 PM IST
  • ಬಾಲಿವುಡ್‌ ಬಾದ್‌ ಷಾ ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ ಕರೆ
  • ಏಪ್ರಿಲ್ 30 ರಂದು ಸಲ್ಮಾನ್‌ನನ್ನು ಮುಗಿಸುವುದಾಗಿ ಕರೆ
  • ಈ ಹಿಂದೆಯೊಮ್ಮೆ ಬೆದರಿಕೆ ಇ-ಮೇಲ್
Salman Khan : ಬಾಲಿವುಡ್‌ ಬಾದ್‌ ಷಾ ಸಲ್ಲುಗೆ ಬಂತು ಮತ್ತೊಂದು ಜೀವ ಬೆದರಿಕೆ ಕರೆ  title=

Salman Khan: ಇತ್ತಿಚೇಗೆ ಸಿನಿಮಾ ತಾರೆಯರಿಗೆ ಬೆದರಿಕೆ ಕರೆಗಳು  ಹೆಚ್ಚಾಗುತ್ತಿವೆ. ಇದೀಗ ಬಾಲಿವುಡ್‌ ಬಾದ್‌ ಷಾ ಸಲ್ಮಾನ್ ಖಾನ್ ಗೂ ಜೀವ ಬೆದರಿಕೆ ಕರೆ ಬಂದಿದೆ. ಪ್ರಕರಣ ಸಂಬಂಧ ಏಪ್ರಿಲ್ 30 ಕ್ಕೆ  ಸಲ್ಮಾನ್ ಖಾನ್ ನನ್ನು ಮುಗಿಸುವುದಾಗಿ ಫೋನ್ ನಲ್ಲಿ ಮತ್ತೆ ಕೊಲೆ ಬೆದರಿಕೆಗಳು ಬಂದಿವೆ.

ಸಲ್ಲು ಮುಂಬರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೈಲರ್  ಅನ್ನು ಏಪ್ರಿಲ್ 10 ರಂದು ಬಿಡುಗಡೆ ಮಾಡಿ ಮನೆ ಹೊರಟಿದ್ದಾರೆ.  ಇದರ ಬೆನ್ನಲೇ ಅಪರಿಚಿತ ವ್ಯಕ್ತಿಯೊಬ್ಬ ಮುಂಬೈ ಪೊಲೀಸ್ ಠಾಣೆಗೆ ಕರೆ ಮಾಡಿ ಸಲ್ಮಾನ್‌ ನನ್ನು ಮುಗಿಸುತ್ತೇವೆ ಎಂದು  ಕೊಲೆ ಬೆದರಿಕೆ ಹಾಕಿದ್ದಾರೆ. 

ಇದನ್ನೂ ಓದಿ: ತನ್ನ ವಿರುದ್ಧ ಸುದ್ದಿ ಪ್ರಸಾರ ಮಾಡಬಾರದು: ಕೋರ್ಟ್ ಮೊರೆ ಹೋದ ನಟ ಕಿಚ್ಚ ಸುದೀಪ್

ನಟನಿಗೆ ಈ ಹಿಂದೆ ಒಮ್ಮೆಯೂ ಬೆದರಿಕೆ ಕರೆ ಬಂದಿತ್ತು ಎಂಬ ಸುದ್ದಿ ಇದೆ. ಇದೀಗ ಮತ್ತೆ ಕೊಲೆ ಬೆದರಿಕೆ ಕರೆ ಬಂದಿದೆ. ಕರೆ  ಮಾಡಿದ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ, ಏಪ್ರಿಲ್ 30 ರಂದು ಸಲ್ಮಾನ್‌ನನ್ನು ಮುಗಿಸುವುದಾಗಿ ಹೇಳಿ,   ತನ್ನನ್ನು ಜೋಧ್‌ಪುರದ ಗೋರಕ್ಷಕ ರಾಕಿ ಭಾಯ್ ಎಂದು ಫೋನ್‌ನಲ್ಲಿ ಹೇಳಿಕೊಂಡಿದ್ದಾನೆಂದು ಪೊಲೀಸ್‌ ಮಾಹಿತಿ ನೀಡಿವೆ. 

ಇದನ್ನೂ ಓದಿ: Rakhi Sawant: ರಾಖಿ ಸಾವಂತ್‌ಗೆ ಬಲವಂತದಿಂದ ಲಿಪ್ ಕಿಸ್ ಮಾಡಿದ್ದ ಸಿಂಗರ್! ಹೈಕೋರ್ಟ್ ಮೆಟ್ಟಿಲೇರಿದ ಗಾಯಕ

ಈ ಬಗ್ಗೆ ಕ್ರಮ ಕೈಗೊಂಡ ಪೊಲೀಸರು ಕರೆ ಮಾಡಿದವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಬೆದರಿಕೆ ಕರೆ ಮಾಡಿದ ವ್ಯಕ್ತಿ ಅಪ್ರಾಪ್ತ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕರೆಯಲ್ಲಿ ಯಾವುದೇ ಗಂಭೀರತೆ ಇಲ್ಲ. ಯಾಕೆ ಹೀಗೆ ಮಾಡಿದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ಮಾರ್ಚ್ 18, 2022 ರಂದು, ಸಲ್ಮಾನ್ ಅವರ ಮ್ಯಾನೇಜರ್ ಪ್ರಶಾಂತ್ ಗುಂಜಾಲ್ಕರ್ ಅವರಿಗೆ ಬೆದರಿಕೆ ಇ-ಮೇಲ್ ಕಳುಹಿಸಲಾಗಿತ್ತು. ನಟನೊಂದಿಗೆ ಮಾತನಾಡಬೇಕೆಂದು ಕೇಳಿಕೊಂಡಿದ್ದಾನೆ. ರೋಹಿತ್ ಗಾರ್ಗ್  ಎಂಬ ಹೆಸರಿನಲ್ಲಿ ಈ ಮೇಲ್ ಬಂದಿತ್ತು . ಈ ಪ್ರಕರಣ ಸಂಬಂಧ  ಇನ್ನಷ್ಟು ತನಿಖೆ ಮುಂದುವರಿಸಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News