Kantara Wins International Award: ಹೊಂಬಾಳೆ ಫಿಲಂಸ್‍ ನಿರ್ಮಾಣದಲ್ಲಿ ಮೂಡಿಬಂದಿರುವ, ರಿಷಭ್‍ ಶೆಟ್ಟಿ ತಾವೇ ನಿರ್ದೇಶಿಸಿ ನಟಿಸಿರುವ  ‘ಕಾಂತಾರ’ ಚಿತ್ರದ ಪೂರ್ವ ಭಾಗವಾದ 'ಕಾಂತಾರ – ಅಧ್ಯಾಯ 1', ಮೊನ್ನೆಯಷ್ಟೇ ಅದ್ಧೂರಿಯಾಗಿ ಆರಂಭಗೊಂಡಿದೆ. ಈ ಮಧ್ಯೆ ಕಾಂತಾರ ಚಿತ್ರ ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.


COMMERCIAL BREAK
SCROLL TO CONTINUE READING

ಹೌದು, ಇಡೀ ವಿಶ್ವವೇ ಕರುನಾಡಿನತ್ತ ತಿರುಗಿ ನೋಡುವಂತೆ ಮಾಡಿದ 'ಕಾಂತಾರ' ಇದೀಗ ನಿನ್ನೆಯಷ್ಟೇ (ನವೆಂಬರ್ 28, 2023) ಗೋವಾದಲ್ಲಿ ಮುಕ್ತಾಯವಾದ ಭಾರತದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹೊಂಬಾಳೆ ಫಿಲಂಸ್ ನಿರ್ಮಾಣದ, ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ಗಮನಾರ್ಹವಾಗಿ ಇದೇ ಮೊದಲ ಬಾರಿಗೆ  ಕನ್ನಡ ಚಿತ್ರವೊಂದು ಇಂಥದ್ದೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. 


ಇದನ್ನೂ ಓದಿ- ಲೀಲಾವತಿ ಆರೋಗ್ಯ ವಿಚಾರಿಸಿದ ಶಿವರಾಜ್‌ ಕುಮಾರ್‌


ವಾಸ್ತವವಾಗಿ, ಭಾರತದ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ  ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಒಟ್ಟು 15 ಚಿತ್ರಗಳು ಕಣದಲ್ಲಿದ್ದವು. ಈ ಸಿನಿಮಾಗಳ ಪೈಕಿ ನಮ್ಮ ಕರ್ನಾಟಕದ 'ಕಾಂತಾರ' ಸೇರಿದಂತೆ ಭಾರತದ ಒಟ್ಟು ಮೂರು ಸಿನಿಮಾಗಳು ಸಹ ಸ್ಪರ್ಧಾ ಕಣದಲ್ಲಿದ್ದವು. ಈ ವಿಭಾಗದಲ್ಲಿ ಉಳಿದೆಲ್ಲಾ ಚಿತ್ರಗಳನ್ನು ಹಿಂದಿಕ್ಕಿರುವ "ಕಾಂತಾರ" ಚಿತ್ರಕ್ಕೆ ತೀರ್ಪುಗಾರರ ವಿಶೇಷ ಪ್ರಶಸ್ತಿ ದೊರಕಿದೆ. ಈ ಪ್ರಶಸ್ತಿಯು ಪ್ರಮಾಣ ಪತ್ರ, ರಜತ ಮಯೂರ ಮತ್ತು 15 ಲಕ್ಷ ರೂ. ನಗದನ್ನು ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. 


ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ನಟ, ನಿರ್ದೇಶಕ ರಿಷಭ್ ಶೆಟ್ಟಿ, "ಕಳೆದ ಬಾರಿ ನಾವು ನಮ್ಮ ಸಿನಿಮಾದ ಪ್ರಚಾರಕ್ಕಾಗಿ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಬಂದಿದ್ದೆವು. ಇದೀಗ ಈ ಬಾರಿ ನಮ್ಮ ಚಿತ್ರ ಈ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಸ್ಪರ್ಧಿಸಿ, ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.  


ಇದನ್ನೂ ಓದಿ- Pooja Gandhi : ಮದುವೆಗೆ ಸಜ್ಜಾದ ನಟಿ ಪೂಜಾ ಗಾಂಧಿ ನಿಜವಾದ ವಯಸ್ಸೆಷ್ಟು ಗೊತ್ತೇ!


ರಿಷಭ್‍ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕನ್ನಡ ನಾಡಿನ ಪ್ರಸಿದ್ದ ಚಿತ್ರ 'ಕಾಂತಾರ' ಕಳೆದ ವರ್ಷ ಬಿಡುಗಡೆಯಾಗಿ ಅದ್ಭುತ ಯಶಸ್ಸು ಕಾಣುವುದರ ಜೊತೆಗೆ ಪ್ರೇಕ್ಷಕರ ಮನ ಮುಟ್ಟಿತ್ತು. ಬಳಿಕ ಈ ಸಿನಿಮಾ ಭಾರತದ ಇತರ ಭಾಷೆಗಳಿಗೂ ಸಹ ಡಬ್ ಆಗಿತ್ತು. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದು ಸಿನಿಮಾದಲ್ಲಿ ಅವರ ಲುಕ್ ನಿಂದಾಗಿ ಮೂಗುತಿ ಸುಂದರಿ ಎಂದೇ ಖ್ಯಾತಿ ಪಡೆದಿದ್ದಾರೆ. ಇನ್ನೂ ಅಚ್ಯುತ್‍ ಕುಮಾರ್, ಕಿಶೋರ್ ಮುಂತಾದವರು ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪ್ರಸಿದ್ದ ಕಾಂತಾರ ಸಿನಿಮಾಕ್ಕೆ ಅಜನೀಶ್‍ ಲೋಕನಾಥ್‍ ಅವರ ಸಂಗೀತ ಸಂಯೋಜನೆ ಇದ್ದು, ಅರವಿಂದ್‍ ಕಶ್ಯಪ್‍ ಛಾಯಾಗ್ರಹಣ ಮಾಡಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.