Kareena Kapoor In Toxic Film: ಸ್ಯಾಂಡಲ್‌ವುಡ್‌ ನಟ ರಾಕಿಂಗ್ ಸ್ಟಾರ್ ಯಶ್​ ನಟಿಸಲಿರುವ ಟಾಕ್ಸಿಕ್‌ ಚಿತ್ರದಲ್ಲಿ ಬಾಲಿವುಡ್​  ನಟಿ ಕರೀನಾ ಕಪೂರ್  ಅಭಿನಯಿಸುವುದರ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿತ್ತು. ಸದ್ಯ ಈ ವಿಷಯದ ಬಗ್ಗೆ ಸ್ವತಃ ಬಿಟೌನ್‌ ಬೆಡಗಿ ಕರೀನಾ ಕಪೂರ್ ಮಾತಾಡಿದ್ದಾರೆ. ​ ಸೌತ್ ಸಿನಿಮಾದಲ್ಲಿ ಕರೀನಾ ಕಪೂರ್ ನೋಡಲು ಅಭಿಮಾನಿಗಳ ಕೂಡ ಕಾತುರದಿಂದ ಕಾಯ್ತಿದ್ದು, ಈ ನಡುವೆ ನಟಿ ಸೌತ್​ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುತ್ತಿರುವುದರ ಬಗ್ಗೆ ಸ್ಪಷನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬಾಲಿವುಡ್‌ ನಟಿ ಕರೀನಾ ಕಪೂರ್‌,  ಬಾಲಿವುಡ್‌ ಬ್ಲೈಡ್ಸ್‌ ಗಾಸಿಪ್‌ ಶೇರ್ ಮಾಡಿರುವ ವಿಡಿಯೋವೊಂದರಲ್ಲಿ "ನಾನು ಬಿಗ್ ಬಜೆಟ್​ ಸೌತ್ ಸಿನಿಮಾ ಮಾಡುತ್ತಿದ್ದೇನೆ. ಸದ್ಯ ಆ ಸಿನಿಮಾ ಭಾರತದಾದ್ಯಂತ ಸದ್ದು ಮಾಡ್ತಿದೆ. ನಾನು ಎಲ್ಲಿ ಶೂಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಇದೇ ಮೊದಲ ಬಾರಿಗೆ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನನ್ನ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಲು ಕಾಯ್ತಿದ್ದೇನೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: ದಂತದ ಬೊಂಬೆ ನೀತಾ ಅಂಬಾನಿ ನಿಜವಾದ ವಯಸ್ಸೆಷ್ಟು ಗೊತ್ತೇ.. ಈ ಅಂದಕ್ಕೆ ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !


ಇದಕ್ಕೂ ಎರಡು ತಿಂಗಳ ಹಿಂದೆಯಷ್ಟೇ ಕರೀನಾ ಕಪೂರ್‌ ಯಶ್ ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿತ್ತು. ಈ ಸಿನಿಮಾದ ನಿರ್ಮಾಪಕರು ಕೂಡ ಕರೀನಾ ಜೊತೆ ಮಾತುಕತೆ ನಡೆಸಿದ್ದು, ಇದೀಗ ಈ ನಟಿ ಸಹ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬಿಟೌನ್‌ ಬೋಲ್ಡ್‌ ಸುಂದರಿ ಕರೀನಾ ಕಪೂರ್ ಟಾಕ್ಸಿಕ್ ಚಿತ್ರದ ಹೆಸರು ಹೇಳದೆ ದಕ್ಷಿಣ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದರ ಬಗ್ಗೆ ಖಚಿತ ಮಾಹಿತಿಯನ್ನು ನೀಡಿದ್ದಾರೆ.


ಶೀಘ್ರದಲ್ಲೇ ಟಾಕ್ಸಿಕ್ ಸಿನಿಮಾ ಡೈರೆಕ್ಟರ್ ಗೀತು ಮೋಹನ್‌ ದಾಸ್ ಬಾಲಿವುಡ್ ನಟಿ ಕರೀನಾ ಕಪೂರ್​ ಸಿನಿತಂಡ ಸೇರ್ಪಡೆ ಬಗ್ಗೆ  ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಟಾಕ್ಸಿಕ್ ಚಿತ್ರದ ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದ್ದು, ಈ ಸಿನಿಮಾದ ಟೀಸರ್‌ ನೋಡಿದ ಫ್ಯಾನ್ಸ್‌ ಬೆಟ್ಟದಷ್ಟು ಭರವಸೆ  ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ನಟ ಯಶ್‌ ಹಿಂದೆದೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾವನ್ನು 2025 ರಲ್ಲಿ ಏಪ್ರಿಲ್​ ನಲ್ಲಿ ರಿಲೀಸ್ ಮಾಡುವುದಾಗಿ ಘೋಷಣೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.