Kareena Kapoor In Toxic: ಚಂದನವನದ ನಟ ರಾಕಿಂಗ್‌ ಸ್ಟಾರ್‌ ಯಶ್‌  ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲಕ್ಕೆ ಕಳೆದ ತಿಂಗಳು ತೆರೆ ಎಳೆದಿದ್ದು, ಸಣ್ಣ ಅಪ್‌ಡೇಟ್ ಕೇಳುತ್ತಿದ್ದವರಿಗೆ ಕ್ರೇಜಿ ನ್ಯೂಸ್ ಕೊಟ್ಟಿದ್ದರು. ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗೂ  ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿ, ಬಳಿಕ ಚಿತ್ರದಲ್ಲಿ ಮೂವರು ನಾಯಕಿಯರು ಎನ್ನುವ ಗುಸುಗುಸು ಶುರುವಾಯಿತು. ಅದರಲ್ಲಿ ಕರೀನಾ ಕಪೂರ್ ಒಬ್ಬರು ಎನ್ನಲಾಗಿತ್ತು. 


COMMERCIAL BREAK
SCROLL TO CONTINUE READING

ಹೌದು.. 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ನಟಿಸುತ್ತಾರೆ ಎನ್ನುವ ಚರ್ಚೆಯ ನಡುವೆ ಚಿತ್ರತಂಡ, "ಕರೀನಾ ಕಪೂರ್ ಖಾನ್ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಅಭಿಮಾನಿಗಳ ಉತ್ಸಾಹ ಮತ್ತು ಆಸೆಗಳನ್ನು ನಾವು ಅರ್ಥಮಾಡಿಕೊಂಡಿದ್ದರೂ, ನಟಿಯ ಮುಂದಿನ ಸಿನಿಮಾ ಮತ್ತು ಅದರ ತಾರಾ ಬಳಗದ ಮೇಲೆ ಕಾಯುವಂತೆ ಮಾಧ್ಯಮಗಳಿಗೆ ವಿನಂತಿಸುತ್ತೇವೆ. ಸುಖಾಸುಮ್ಮನೆ ಯಾವುದೇ ಊಹೆ ಊಹೆ ಮಾಡಬೇಡಿ. ಆದರೆ ಬಹಳ ಎಕ್ಸೈಟಿಂಗ್ ವಿಚಾರ ಕಾದಿದೆ. ಅಧಿಕೃತ ಮಾಹಿತಿಗಾಗಿ ಕಾಯಿರಿ ಎಂದು ವಿನಂತಿಸುತ್ತೇವೆ" ಎಂದು ಪ್ರತಿಕ್ರಿಯಿಸಿದೆ.


ಇದನ್ನೂ ಓದಿ: ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ? ಸದ್ಯ ಅಭಿಮಾನಿಗಳ ಸ್ವೀಟಿ ಈಕೆ


ಕೆಲ ದಿನಗಳ ಹಿಂದೆ ಕಾಫಿ ವಿತ್ ಕರಣ್ ಟಾಕ್‌ ಶೋನಲ್ಲಿ ಕರೀನಾ ಕಪೂರ್ ಹಾಗೂ ಆಲಿಯಾ ಭಟ್ ಅತಿಥಿಗಳಾಗಿ ಕಾಣಿಸಿಕೊಂಡಿದ್ದು, ರ್ಯಾಪಿಡ್ ಫೈಯರ್ ರೌಂಡ್‌ನಲ್ಲಿ ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎಂದು ಕರಣ್ ಜೋಹರ್ ಕೇಳಿದಾಗ, ತಕ್ಷಣ 'ಯಶ್' ಎಂದು ಬೆಬೋ ಹೇಳಿದ್ದು ವೈರಲ್ ಆಗಿತ್ತು. ಕರೀನಾ "ಎಲ್ಲರೂ ಸೂಪರ್.. ಆದ್ರೆ ನಾನು 'KGF' ಹುಡುಗಿ. ಹಾಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ" ಎಂದಿದ್ದರು. ಬಳಿಕ ನೀವು 'KGF' ಸಿನಿಮಾ ನೋಡಿದ್ದೀರಾ? ಎಂದು ನಿರೂಪಕ ಕರಣ್ ಕೇಳಿದಾಗ ಹೌದು ಎಂದು ಕರೀನಾ ತಲೆ ಆಡಿಸಿದ್ದರು. ಅದಕ್ಕೆ ಆಲಿಯಾ, ಸಣ್ಣ ಸಣ್ಣ ತುಣುಕುಗಳಾಗಿ ನೋಡ್ತಾರೆ ಎಂದಿದ್ದರು. 


ಕರೀನಾ ಅಂದು ಮಾತನಾಡಿದ್ದನ್ನು ಯಾರು ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ಕರೀನಾ ಕಪೂರ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬರೋಕೆ ಶುರುವಾಯಿತು. ಇದನ್ನು ನೋಡಿ ಅಂದು ಕರೀನಾ ಮಾತನಾಡಿದ್ದನ್ನು ಅಭಿಮಾನಿಗಳು ನೆನಪಿಸಿಕೊಂಡಿದ್ದರು. ಪರೋಕ್ಷವಾಗಿ ಬಾಲಿವುಡ್ ಬ್ಯೂಟಿ ಅಂದೇ ಸುಳಿವು ಕೊಟ್ಟಿದ್ದರು ಎನ್ನುವ ಚರ್ಚೆ ಶುರುವಾಯಿತು. ಇದೀಗ ಆಕೆಯ ತಂಡವೇ ಪ್ರತಿಕ್ರಿಯಿಸಿದೆ. 


ಇದನ್ನೂ ಓದಿ: ಒಂದು ಟೈಮಲ್ಲಿ ಬಾಡಿಶೇಮಿಂಗ್‌ಗೆ ಒಳಗಾದ 45 ವರ್ಷದ ನಟ.. ಇಂದು ಕಮಲ್, ದಳಪತಿ ರೇಂಜ್‌ಗೆ ಈತನ ಕ್ರೇಜ್‌


ದಿನದಿಂದ ದಿನಕ್ಕೆ 'ಟಾಕ್ಸಿಕ್' ಸಿನಿಮಾ ಬಹಳ ಕುತೂಹಲ ಮೂಡಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10 ರಂದು ಸಿನಿಮಾ ರಿಲೀಸ್‌ ಮಾಡುವುದಾಗಿಯೂ ಹೇಳಿರುವುದರ ಜೊತೆ, ಇದು ಡ್ರಗ್ಸ್ ಮಾಫಿಯಾ ಸುತ್ತಾ ಈ ಚಿತ್ರಕಥೆ ಸುತ್ತುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಸ್ಯಾಂಡಲ್‌ವುಡ್‌ ರಾಕಿಭಾಯ್‌ನ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.