ಸೈಫ್ ಜೊತೆಗಿನ ವಯಸ್ಸಿನ ಅಂತರದ ಟೀಕೆಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ಕರೀನಾ ಕಪೂರ್!!
Kareena Kapoor : ಒಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದ ಕರೀನಾ ಕಪೂರ್ ಇತ್ತೀಚೆಗೆ OTT ಅಂಗಳಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
Bollywood News : ಬಿ-ಟೌನ್‌ನ ಹಾಟ್ ಜೋಡಿಗಳಲ್ಲಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಜೋಡಿ ಕೂಡಾ ಒಂದು. ಇವರ ಅಭಿಮಾನಿಗಳು ಇವರಿಬ್ಬರ ಕೆಮಿಸ್ಟ್ರಿಯನ್ನು ಸಖತ್ ಇಷ್ಟಪಡುತ್ತಾರೆ. ಆದರೆ ಇದೇ ವಿಚಾರವಾಗಿ ಕರೀನಾ ಕಪೂರ್ ಟ್ರೋಲ್ ಕೂಡಾ ಆಗಿದ್ದಾರೆ.
ಹೌದು ಕರೀನಾ ಕಪೂರ್ ಖಾನ್ ತನ್ನ ಪತಿ ಸೈಫ್ ಅಲಿ ಖಾನ್ ಅವರ ನಡುವೆ 10 ವರ್ಷ ವಯಸ್ಸಿನ ಅಂತರವಿದೆ. ಈ ವಿಚಾರವಾಗಿ ಪದೇ ಪದೇ ಕರೀನಾ ಕಪೂರ್ ಟೀಕೆಗೆ ಒಳಗಾಗಿದ್ದರು. ಸದ್ಯ ಬಾಲಿವುಡ್ ನಟಿ ಕರೀನಾ ಈ ಬಗ್ಗೆ ಟ್ರೋಲ್ ಮಾಡುವವರಿಗೆ ಮತ್ತು ಟೀಕಿಸುವವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.
ಇದನ್ನೂ ಓದಿ-Dhruva Sarja: ಅಣ್ಣನ ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ ಮಾಡಿದ ಆಕ್ಷನ್ ಪ್ರಿನ್ಸ್...ಪೋಟೋಸ್ ನೋಡಿ
ಸದ್ಯ ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ "ವಯಸ್ಸು...ಜಾತಿ ಯಾವುದೂ ಮುಖ್ಯವಲ್ಲ. ಮೇಲಾಗಿ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ...ನಮ್ಮಿಬ್ಬರ ಮಧ್ಯ 10 ವರ್ಷ ವಯಸ್ಸಿನ ಅಂತರವಿದೆ ಆದರೆ ನಾವಿಬ್ಬರೂ ಅನ್ಯುನ್ಯವಾಗಿದೇವೆ..ನನ್ನನ್ನು ಅವರು ಒಪ್ಪಿಕೊಂಡಿದ್ದಾರೆ, ಅವರನ್ನು ನಾನು ಒಪ್ಪಿಕೊಂಡಿದ್ದೇನೆ...ಇಲ್ಲಿ ನಂಬಿಕೆ ಪ್ರೀತಿ ಮುಖ್ಯ ವಯಸ್ಸಲ್ಲ" ಎಂದು ಖಾರವಾಗಿ ಉತ್ತರಿಸಿದ್ದಾರೆ.
ಇನ್ನು ಇವರ ಸಿನಿಮಾ ವಿಚಾರಕ್ಕೆ ಬರುವುದಾದರೇ ಸದ್ಯ ನಟಿ ಕರೀನಾ ಕಪೂರ್ ಜೈದೀಪ್ ಅಹ್ಲಾವತ್ ಮತ್ತು ವಿಜಯ್ ವರ್ಮಾ ಅವರ ಜಾನೆ ಜಾನ್ ಸಿನಿಮಾ ಮೂಲಕ OTT ವೇದಿಕೆಗೆ ಪಾದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ-Kaatera : ಇವರು ಸಿನಿಮಾ ಮಾಡುವಾಗ ನಾನು ಲೈಟ್ ಬಾಯ್ ಆಗಿದ್ದೆ - ನಟ ದರ್ಶನ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.