ರಾಹುಲ್ ಗಾಂಧಿ ಜೊತೆ ಕರೀನಾ ಡೇಟಿಂಗ್ : ಇಂದಿಗೂ ಈಡೇರಿಲ್ಲ ಬೇಬೋ ಮಹದಾಸೆ..!
Kareena Kapoor Rahul Gandhi Date : ಬೇಬೋ ಕರೀನಾ ಕಪೂರ್ ಬಾಲಿವುಡ್ ಸ್ಟಾರ್ ನಟಿಯರಲ್ಲಿ ಒಬ್ಬರು. ತಮ್ಮ ನೇರ ಮಾತುಗಳಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಚೆಲುವೆ ಇದುವರೆಗೂ ಯಾರದೇ ಮಾತುಗಳಿಗೆ ತಲೆಕೆಡಿಸಿಕೊಂಡಿಲ್ಲ. ಟ್ರೋಲ್‌ಗಳಿಗೂ ಕಿವಿಗೊಡದ ದಿವಾ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೀಗ ಕರೀನಾ ಹಳೆಯ ಹೇಳಿಕೆಯ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡುವ ಆಸೆಯನ್ನು ಹೊರಹಾಕಿದ್ದಾರೆ.
Kareena Kapoor Rahul Gandhi Date : ಬೇಬೋ ಕರೀನಾ ಕಪೂರ್ ಬಾಲಿವುಡ್ ಸ್ಟಾರ್ ನಟಿಯರಲ್ಲಿ ಒಬ್ಬರು. ತಮ್ಮ ನೇರ ಮಾತುಗಳಿಂದಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಚೆಲುವೆ ಇದುವರೆಗೂ ಯಾರದೇ ಮಾತುಗಳಿಗೆ ತಲೆಕೆಡಿಸಿಕೊಂಡಿಲ್ಲ. ಟ್ರೋಲ್‌ಗಳಿಗೂ ಕಿವಿಗೊಡದ ದಿವಾ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೀಗ ಕರೀನಾ ಹಳೆಯ ಹೇಳಿಕೆಯ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡುವ ಆಸೆಯನ್ನು ಹೊರಹಾಕಿದ್ದಾರೆ.
ಹೌದು ಬಾಲಿವುಡ್ ಬೆಡಗಿ ಕರೀನಾ ಕಪೂರ್ ಡೈರೆಕ್ಟ್ ಟು ಡೈರೆಕ್ಟ್. ತುಟಿಮೇಲೆ ಬಂದ ಯಾವುದೇ ಮಾತನ್ನ ಹಿಡಿದಿಟ್ಟು ಕೊಳ್ಳುವುದಿಲ್ಲ. ನೇರವಾಗಿ ಹೇಳಿ ಬಿಡುತ್ತಾರೆ. ಇಂತಹ ಹಲವು ಹೇಳಿಕೆಗಳೇ ವಿವಾದಗಳಿಗೆ ಕಾರಣಗಳೂ ಸಹ ಆಗಿದ್ದವರು. ಉದಾಹರಣೆಗೆ, ಸ್ವಜನಪಕ್ಷಪಾತದ ಬಗ್ಗೆ ಮಾತನಾಡುವಾಗ ಅವರು ಒಮ್ಮೆ, ʼನನ್ನ ಸಿನಿಮಾಗಳನ್ನು ನೋಡಬೇಡಿ, ನೋಡುವಂತೆ ಯಾರೂ ನಿಮ್ಮನ್ನು ಬಲವಂತಪಡಿಸಲ್ಲ. ತಾನು ಸ್ತ್ರೀವಾದಿಯಲ್ಲ, ನಾನೂ ಒಬ್ಬ ಮಹಿಳೆ ಎಂದು "ನಾನು ಸಮಾನತೆಯನ್ನು ನಂಬುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಮನುಷ್ಯಳು ಎಂದು ಹೇಳಿದ್ದ ಮಾತು ಸಖತ್ ಸುದ್ದಿಯಾಗಿತ್ತು.
ಇದನ್ನೂ ಓದಿ: VRL ಸಾಮ್ರಾಜ್ಯದ ವಿಜಯ ಸಂಕೇಶ್ವರ್ ಅವರ ಜೀವನ ಬಲುರೋಚಕ..ಹೇಗಿದೆ ಗೊತ್ತಾ "ವಿಜಯಾನಂದ" ಸಿನಿಮಾ...?
ಕರೀನಾ 2000 ರಲ್ಲಿ ರೆಫ್ಯೂಜ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಭಿಷೇಕ್ ಬಚ್ಚನ್ ಜೊತೆ ನಟಿಸಿದ್ದರು. ಸಿನಿಮಾ ಹಿಟ್ ಆದ ಬಳಿಕ ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರಿಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಸಂಭಾಷಣೆಯ ಸಮಯದಲ್ಲಿ, ಕರೀನಾಗೆ ನಿರೂಪಕ ನೀವು ಯಾವ ಸೆಲೆಬ್ರಿಟಿಗಳೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಎಂಬ ಪ್ರಶ್ನೆಯನ್ನು ಕೇಳಿದ್ದರು.
ಅದಕ್ಕೆ ಉತ್ತರಿಸಿದ ಕಪೂರ್, "ನಾನು ಇದನ್ನು ಹೇಳಬೇಕೇ, ಅಂತ ನಕ್ಕರು, ಅಲ್ಲದೆ, ಹೇಳಿದ್ರೆ ವಿವಾದಾತ್ಮಕವಾಗುತ್ತೆ, ಅಂತ ಕೊನೆಗೂ ರಾಹುಲ್ ಗಾಂಧಿ ಅವರ ಹೆಸರು ಹೇಳಿದ್ದರು. ಅಲ್ಲದೆ, ನಾನು ಅವರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇನೆ, ನಾನು ಅವರ ಫೋಟೋಗಳನ್ನು ನೋಡುತ್ತಿದ್ದೇನೆ... ಅಲ್ಲದೆ, ಅವರ ಜೊತೆ ಮಾತನಾಡಬೇಕು. ನಾನು ಸಿನಿಮಾ ಕುಟುಂಬದಿಂದ ಬಂದವಳು, ಅವರು ರಾಜಕೀಯ ಕುಟುಂಬದಿಂದ ಬಂದವರು. ಆದ್ದರಿಂದ, ಬಹುಶಃ ಇಂಟರೆಸ್ಟಿಂಗ್ ವಿಚಾರಗಳು ತಿಳಿದುಕೊಳ್ಳಲು ಡೇಟಿಂಗ್ ಮಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ನಾನಾ.. ಜೀವನನಾ ಅಂತ ನೋಡೇ ಬಿಡ್ತೀನಿ.. ಇಟ್ಸ್ ಮೈ ಚಾಲೆಂಜ್ : ಗುಡುಗಿದ ವೈಷ್ಣವಿಗೌಡ
ಇನ್ನು ಇತ್ತೀಚಿಗೆ ವೈರಲ್ ಆದ ವಿಡಿಯೋ ಬಗ್ಗೆ ಕ್ಯಾಚ್‌ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಕೇಳಲಾಯಿತು. ಆಗ ಅವರು, "ಇದು ತುಂಬಾ ಹಳೆಯ ವಿಡಿಯೋ. ಈಗಲೂ ಒಂದು ದಿನ, ನಾನು ಅವರನ್ನು ಆತಿಥಿಯಾಗಿ ನಮ್ಮ ಮನೆಗೆ ಬರಮಾಡಿಕೊಳ್ಳಲು ಇಷ್ಟಪಡುತ್ತೇನೆ. ನಾನು ಅವರನ್ನು ಪ್ರಧಾನಿಯಾಗಿ ನೋಡಲು ಬಯಸುತ್ತೇನೆ, ಆದರೆ, ನಾನು ಅವರೊಂದಿಗೆ ಡೇಟಿಂಗ್ ಮಾಡಲು ಖಂಡಿತವಾಗಿಯೂ ಬಯಸುವುದಿಲ್ಲ ಎಂದು ಕರೀನಾ ಕಪೂರ್ ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.