ಜಾನ್ವಿ ಜೊತೆ ವಿಜಯ್‌ ಡೇಟಿಂಗ್‌ ಅಂತೆ : ಆಗಿದ್ರೆ ರಶ್ಮಿಕಾ ಗತಿ ಹೇಗೆ ದೇವ್ರು...!

Janhvi Kapoor dating : ಬಹುಷಃ ನೆಟ್ಟಿಗರು ಖಾಲಿ ಕುಳಿತುಕೊಳ್ಳಲ್ಲ ಅನ್ಸುತ್ತೆ ಯಾವಾಗಾದ್ರೂ ಒಂದೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಹುಟ್ಟು ಹಾಕುತ್ತಲೇ ಇರುತ್ತಾರೆ. ಇಷ್ಟು ದಿನ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಗ್ಗೆ ಗಾಸಿಪ್​​​ಗಳು ಕೇಳಿ ಬರುತ್ತಿದ್ದವು. ಇದೀಗ ಹೊಸ ವಿಚಾರವೊಂದು ಬಯಲಿಗೆ ಒಂದಿದ್ದು, ಬಾಲಿವುಡ್‌ ಸುಂದರಿ ಜಾನ್ವಿ ಕಪೂರ್‌ ಜೊತೆ ವಿಜಯ್‌ ದೇವರಕೊಂಡ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

Written by - Krishna N K | Last Updated : Dec 8, 2022, 04:40 PM IST
  • ಇಷ್ಟು ದಿನ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಗ್ಗೆ ಗಾಸಿಪ್​​​ಗಳು ಕೇಳಿ ಬರುತ್ತಿದ್ದವು
  • ಇದೀಗ ಹೊಸ ವಿಚಾರವೊಂದು ಬಯಲಿಗೆ ಒಂದಿದೆ, ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ
  • ಬಾಲಿವುಡ್‌ ಸುಂದರಿ ಜಾನ್ವಿ ಕಪೂರ್‌ ಜೊತೆ ವಿಜಯ್‌ ದೇವರಕೊಂಡ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ
 ಜಾನ್ವಿ ಜೊತೆ ವಿಜಯ್‌ ಡೇಟಿಂಗ್‌ ಅಂತೆ : ಆಗಿದ್ರೆ ರಶ್ಮಿಕಾ ಗತಿ ಹೇಗೆ ದೇವ್ರು...! title=

janhvi kapoor vijay devarakonda dating : ಬಹುಷಃ ನೆಟ್ಟಿಗರು ಖಾಲಿ ಕುಳಿತುಕೊಳ್ಳಲ್ಲ ಅನ್ಸುತ್ತೆ ಯಾವಾಗಾದ್ರೂ ಒಂದೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಹುಟ್ಟು ಹಾಕುತ್ತಲೇ ಇರುತ್ತಾರೆ. ಇಷ್ಟು ದಿನ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬಗ್ಗೆ ಗಾಸಿಪ್​​​ಗಳು ಕೇಳಿ ಬರುತ್ತಿದ್ದವು. ಇದೀಗ ಹೊಸ ವಿಚಾರವೊಂದು ಬಯಲಿಗೆ ಒಂದಿದ್ದು, ಬಾಲಿವುಡ್‌ ಸುಂದರಿ ಜಾನ್ವಿ ಕಪೂರ್‌ ಜೊತೆ ವಿಜಯ್‌ ದೇವರಕೊಂಡ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇಷ್ಟು ದಿನ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನೆಟ್ಟಿಗರು ಗುಸುಗುಸು ಮಾತಾಡಿಕೊಳ್ಳುತ್ತಿದ್ದರು. ಇವರಿಬ್ಬರದ್ದು ಸ್ನೇಹನಾ..? ಪ್ರೀತಿನಾ..? ಅಂತ ಪ್ರಶ್ನೆ ಮಾಡುತ್ತಿದ್ದರು. ಇದೀಗ ಹೊಸ ವಾರ್ತೆಯನ್ನು ಹೊತ್ತು ತಂದಿರುವ ನೆಟಿಜನ್ಸ್‌ ಇವರಿಬ್ಬರ ಅಭಿಮಾನಿಗಳಿಗೆ ಗೊಂದಲ ಉಂಟುಮಾಡಿದ್ದಾರೆ. ಅಲ್ಲದೆ, ರಶ್ಮಿಕಾ ಮತ್ತು ವಿಜಯ್‌ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿದ್ರು, ಒಟ್ಟಿಗೆ ಪಾರ್ಟಿಗಳಲ್ಲೂ ಕಾಣಿಸಿಕೊಂಡ್ರು. ಕದ್ದು ಮುಚ್ಚಿ ಜಾಲಿ ಟ್ರಿಪ್​ಗೆ ಹೋಗಿ ಬಂದ್ರೂ ಸಹ ಇದವರೆಗೂ ಅವರಿಬ್ಬರು ತಮ್ಮ ಸಂಬಂಧದ ಬಗ್ಗೆ ಇನ್ನೂ ಕ್ಲಾರಿಟಿ ಕೊಟ್ಟಿಲ್ಲ.

ಇದನ್ನೂ ಓದಿ: Keerthy Suresh: ಕಾಸ್ಟಿಂಗ್ ಕೌಚ್ ಬಗ್ಗೆ ಆಘಾತಕಾರಿ ಸಂಗತಿ ಬಿಚ್ಚಿಟ್ಟ ನಟಿ ಕೀರ್ತಿ ಸುರೇಶ್‌

ಇನ್ನು ಈಗಿರುವಾಗ ವಿಜಯ್ ದೇವರಕೊಂಡ ಜೊತೆ ಮತ್ತೊಂದು ನಟಿಯ ಹೆಸರು ತಳಕು ಹಾಕಿಕೊಂಡಿದೆ. ಅರ್ಜುನ್ ರೆಡ್ಡಿ ಮತ್ತು ದಡಕ್‌ ಬೆಡಗಿ ನಡುವೆ ಸಂಥಿಂಗ್‌ ಸಂಥಿಂಗ್ ನಡೀತಿದೆ ಅಂತ ಬಣ್ಣ ಬಣ್ಣದ ಮಾತುಗಳು ನೆಟ್ಟಿಗರ ಬಾಯಿಂದ ಕೇಳಿ ಬರುತ್ತಿವೆ. ಇಂತಹ ರೂಮರ್​ ತುಂಬಾ ದಿನಗಳ ಹಿಂದಿನಿಂದಲೂ ನಡೆಯುತ್ತಿದ್ದರೂ, ಇದೀಗ ಮತ್ತಷ್ಟು ಚುರುಕು ಪಡೆದುಕೊಂಡಿವೆ. ಇದಕ್ಕೆ ಕಾರಣ ಎನ್ನುವಂತೆ ಜಾಹ್ನವಿ ಕಪೂರ್​ಗೆ ವಿಜಯ್ ದೇವರಕೊಂಡ ಕ್ರಶ್ ಅಂದ ಸ್ವತಃ ಶ್ರೀದೇವಿ ಮಗಳು ತುಂಬಾ ಸಲ ಇಂಟರ್​ವ್ಯೂನಲ್ಲಿ ಹೇಳಿಕೊಂಡಿದ್ದಾರೆ.

ಚಾನ್ಸ್ ಸಿಕ್ರೆ ಅವ್ರ ಜೊತೆ ಉಚಿತವಾಗಿ ಸಿನಿಮಾ ಮಾಡ್ತೀನಿ ಅಂತಾನೂ ಜಾನ್ವಿ ಈ ಹಿಂದೆ ಹೇಳಿದ್ದರು. ಅಲ್ಲದೆ ಅನೇಕ ಸಂದರ್ಶನಗಳಲ್ಲಿ ದೇವರಕೊಂಡ ಬಗ್ಗೆ ಕೇಳಿದಾಗಲೂ ಜಾನ್ವಿ ನಾಚಿ ನೀರಾಗಿದ್ದೂ ಉಂಟು. ಆದ್ರೆ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈ ಎಲ್ಲಾ ಮಾತುಗಳ ಮಧ್ಯೆ ದೇವರಕೊಂಡ ತಾಯಿ ಮತ್ತು ಜಾಹ್ನವಿ ಕಪೂರ್ ಭೇಟಿ ಮಾಡಿರೋದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಮದುವೆ ತಯಾರಿ ಏನಾದ್ರೂ ನಡಿತಿದೆಯಾ ಅಂತ ನೆಟ್ಟಿಗರು ಗುಸುಗುಟ್ಟುತ್ತಿದ್ದಾರೆ. ಅಲ್ಲದೆ, ಕೆಲವರು ಹೀಗಾದ್ರೆ ರಶ್ಮಿಕಾ ಗತಿ ಹೇಗೆ ಅಂತ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್‌ ಖಾನ್‌ ಜೊತೆ ಪೂಜಾ ಡೇಟಿಂಗ್‌ : ಕೊನೆಗೂ ಸಲ್ಲುಗೆ ಸಿಕ್ಕಳು ಸುಂದರ ಸಖಿ 

ಅಷ್ಟಕ್ಕೂ ಈ ಭೇಟಿ ಯಾಕೆ.? ಎಲ್ಲಿ ಮೀಟ್ ಮಾಡಿದ್ರು? ಯಾವಾಗ ಭೇಟಿ ಮಾಡಿದ್ರು ಎಂಬುವುದನ್ನು ತಿಳಿದುಕೊಳ್ಳಲು ನೆಟಿಜನ್ಸ್‌ ಟೋಟಲಿ ಕ್ಯೂರಿಯಸ್ ಆಗಿದ್ದಾರೆ. ರಿಸೆಂಟ್​ ಆಗಿ ಮಿಲಿ ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದ್​ ಬಂದಿದ್ದ ಜಾಹ್ನವಿ, ವಿಜಯ್ ದೇವರಕೊಂಡ ಮನೆಗೆ ಭೇಟಿ ಕೊಟ್ಟಿದ್ದರು. ಆಗ ತೆಗಿದಿರೋ ಫೋಟೋ ಇದು ಎನ್ನಲಾಗಿದೆ. ಇನ್ನೊಂದು ವರದಿಯಂತೆ ಮುಂಬೈನಲ್ಲಿ ಪಾರ್ಟಿವೊಂದರಲ್ಲಿ ದೇವರಕೊಂಡ ತಮ್ಮ ತಾಯಿಯ ಜೊತೆ ಬಂದಿದ್ದರು. ಆಗ ಕ್ಲಿಕ್ಕಿಸಿರೋ ಫೋಟೋ ಅಂತ ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಈ ಫೋಟೋವಿನ ಒಳಗುಟ್ಟು ರಹಸ್ಯವಾಗಿಯೇ ಉಳಿದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News