Karishma Kapoor Divorce Story: 90ರ ದಶಕದಲ್ಲಿ ತನ್ನ ಸೌಂದರ್ಯದಿಂದಲೇ ಅದೆಷ್ಟೋ ಹೃದಯಗಳನ್ನು ಮಿಡಿಯುವಂತೆ ಮಾಡಿದ ನಟಿ ಕರಿಷ್ಮಾ ಕಪೂರ್, ವೈಯಕ್ತಿಕ ಬದುಕಿನಲ್ಲಿ ತುಂಬಾ ದುರದೃಷ್ಟವಂತೆ. ಅಂದು ಅತಿ ಹೆಚ್ಚು ಸಂಭಾವನೆ ಪಡೆಯುವ ಅಗ್ರಗಣ್ಯ ನಟಿಯರಲ್ಲಿ ಇವರೂ ಒಬ್ಬರಾಗಿದ್ದರು. ಕರಿಷ್ಮಾ ಕಪೂರ್ ತನ್ನ ಕುಟುಂಬದ ವಿರುದ್ಧ ಹೋರಾಡಿ ನಟನೆಯ ಜಗತ್ತಿಗೆ ಕಾಲಿಟ್ಟಿದ್ದರು. ಕಾಲಿಟ್ಟಿದ್ದೇ ತಡ, ಬಾಲಿವುಡ್’ನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹೊಸ ವರ್ಷದ ಹೊಸ್ತಿಲಲ್ಲಿ ಕೊರೊನಾ ಕಾಟ: ಕರುನಾಡಿಗೂ ಕಾಲಿಟ್ಟ JN-1 ಪ್ರಕರಣ


ಕರಿಷ್ಮಾ ತನ್ನ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನದಿಂದ ಆಗಾಗ್ಗೆ ಮುಖ್ಯಾಂಶದಲ್ಲಿರುತ್ತಾರೆ. ಸೆಪ್ಟೆಂಬರ್ 29, 2003 ರಂದು ಕರಿಷ್ಮಾ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಆದರೆ, ಮದುವೆಯಾದ ಕೆಲವು ವರ್ಷಗಳ ನಂತರ, ಅವರ ಸಂಬಂಧವು ಹದಗೆಡಲು ಪ್ರಾರಂಭಿಸಿತು. 13 ವರ್ಷಗಳ ಸುದೀರ್ಘ ದಾಂಪತ್ಯ ವಿಚ್ಛೇದನ ಪಡೆಯುವ ಮೂಲಕ ಕೊನೆಯಾಯಿತು. ಈ ಸಂದರ್ಭದಲ್ಲಿ ಕರಿಷ್ಮಾ, ಸಂಜಯ್ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದರು.


ಸಂಜಯ್ ಕಪೂರ್ ಜೊತೆಗಿನ ಮದುವೆಗೂ ಮುನ್ನ ಕರಿಷ್ಮಾ ಕಪೂರ್ ಹೆಸರು ನಟ ಅಭಿಷೇಕ್ ಬಚ್ಚನ್ ಜೊತೆ ಕೇಳಿಬಂದಿತ್ತು. ವರದಿಗಳ ಪ್ರಕಾರ, ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಲ್ಲದೆ, ಶೀಘ್ರದಲ್ಲೇ ಮದುವೆಯಾಗುವ ಯೋಚನೆ ಇತ್ತು. ಆದರೆ ಆ ವರದಿಗಳಿಗೆ ಯಾವುದೇ ಆಧಾರವಿಲ್ಲ. ಇದಾದ ಬಳಿಕ ಕರಿಷ್ಮಾ 2003 ರಲ್ಲಿ ಉದ್ಯಮಿ ಸಂಜಯ್ ಕಪೂರ್ ಅವರನ್ನು ವಿವಾಹವಾದರು. ಅಭಿಷೇಕ್ ಮತ್ತು ಕರಿಷ್ಮಾ ಸಂಬಂಧ ಮುರಿದು ಬೀಳಲು ನಟಿಯ ತಾಯಿ ಬಬಿತಾ ಕಾರಣ ಎಂಬ ಮಾತೂ  ಇವೆ. ಆ ದಿನಗಳಲ್ಲಿ ಅಭಿಷೇಕ್ ವೃತ್ತಿಜೀವನ ಸರಿಯಾಗಿ ನಡೆಯುತ್ತಿರಲಿಲ್ಲ, ಬಚ್ಚನ್ ಕುಟುಂಬದ ಆರ್ಥಿಕ ಸ್ಥಿತಿಯೂ ಚೆನ್ನಾಗಿರಲಿಲ್ಲ ಎನ್ನಲಾಗಿದೆ. ಇದೇ ಕಾರಣದಿಂದ ಬಬಿತಾ ತನ್ನ ಮಗಳು ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬೇಕೆಂದು ಬಯಸಿದ್ದರು. ತಾಯಿಯ ಸಲಹೆಯಂತೆ ಕರಿಷ್ಮಾ ಸಂಜಯ್’ನನ್ನು ಮದುವೆಯಾದರು.


ಸಂಜಯ್ ಕಪೂರ್ ಜೊತೆ ಮದುವೆಯಾದ ಕೇವಲ ಎರಡು ವರ್ಷಗಳ ನಂತರ, ಕರಿಷ್ಮಾ ಮಗಳು ಸಮೈರಾ ಕಪೂರ್’ಗೆ ಜನ್ಮ ನೀಡಿದರು. ಇದಾದ ಬಳಿಕ 2010ರಲ್ಲಿ ಪುತ್ರ ಕಿಯಾನ್ ಕಪೂರ್ ಜನಿಸಿರು. ಆದರೆ, ಮಗ ಹುಟ್ಟುವ ಮುನ್ನವೇ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ವಿವಾದ ಕುಟುಂಬದೊಳಗಷ್ಟೇ ಕೇಳಿಬಂದಿತ್ತು. ಆದರೆ ಕಿಯಾನ್ ಹುಟ್ಟಿದ ನಂತರ, ಕರಿಷ್ಮಾ ಕಪೂರ್ ಸಂಜಯ್ ಕಪೂರ್’ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಅಲ್ಲದೆ ಅವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು


“ಸಂಜಯ್ ಕಪೂರ್ ಹಲವು ಬಾರಿ ನನ್ನನ್ನು ಥಳಿಸಿದ್ದಾರೆ. ಥಳಿಸಿದ ಗಾಯಗಳನ್ನು ಮರೆಮಾಚಲು ನಾನು ಮೇಕಪ್ ಮಾಡುತ್ತಿದ್ದಳು. ಅಷ್ಟೇ ಅಲ್ಲ ಹನಿಮೂನ್‌’ನಲ್ಲಿ ಸ್ನೇಹಿತನ ಜೊತೆ ಮಲಗುವಂತೆ ಒತ್ತಾಯಿಸಿದ್ದ” ಕರಿಷ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದರು.


ಇದನ್ನೂ ಓದಿ: ಕಿತ್ತಳೆ ಜ್ಯೂಸ್ ಕುಡಿದರೆ ದೂರವಾಗುತ್ತೆ ಈ ಕಾಯಿಲೆಗಳು… ಸಿಗುತ್ತೆ ಈ 5 ಅದ್ಭುತ ಪ್ರಯೋಜನಗಳು


ಕರಿಷ್ಮಾ ಕಪೂರ್ ಸಂಜಯ್ ಕಪೂರ್ ಅವರ ಎರಡನೇ ಪತ್ನಿ. ಸಂಜಯ್ ಅವರ ಮೊದಲ ಮದುವೆಯು ಫ್ಯಾಷನ್ ಡಿಸೈನರ್ ನಂದಿತಾ ಮಹತಾನಿ ಅವರೊಂದಿಗೆ ನಡೆದಿತ್ತು. ಇನ್ನು ಕರಿಷ್ಮಾದಿಂದ ಬೇರ್ಪಟ್ಟ ಸಂಜಯ್ ತನ್ನ ಮೂರನೇ ಹೆಂಡತಿಯಾಗಿ ಪ್ರಿಯಾ ಸಚ್‌ದೇವ್‌’ನನ್ನು ಅವರನ್ನು ವರಿಸಿದ್ದರು. ಅಂದಹಾಗೆ ಸಂಜಯ್ ಕರಿಷ್ಮಾಗೆ ಜೀವನಾಂಶವಾಗಿ 14 ಕೋಟಿ ರೂ. ನೀಡಿದ್ದಾರೆ. ಅಲ್ಲದೆ, ವಿಚ್ಛೇದನದ ಎಂಟು ವರ್ಷಗಳ ನಂತರವೂ ಇಬ್ಬರೂ ಮಕ್ಕಳ ಪೋಷಣೆಗಾಗಿ ತಿಂಗಳಿಗೆ 10 ಲಕ್ಷ ರೂ. ನೀಡಬೇಕಿತ್ತು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ