Corona Cases in Karnataka: ಹೊಸ ವರ್ಷದ ಸಂಭ್ರಮಾಚರಣೆ ಮಧ್ಯೆ ರಾಜ್ಯದಲ್ಲಿ ಕೊರೊನಾ ಕಾಟ ಮುಂದುವರೆದಿದೆ. ಇದುವರೆಗೆ 34 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 31 ಸಕ್ರಿಯ ಪ್ರಕರಣ ಹಾಗೂ ಮೂವರ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ದಕ್ಷಿಣ ವಲಯ, ಪಶ್ಚಿಮ ವಲಯ ಹಾಗೂ ರಾಮನಗರದಲ್ಲಿ ತಲಾ ಒಬ್ಬರು ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿರ್ಬಂಧ: ಇಷ್ಟು ಗಂಟೆಯೊಳಗೆ ಪಬ್-ಬಾರ್ ಬಂದ್ ಆಗಲೇಬೇಕು!
ಬೆಂಗಳೂರಿನಲ್ಲಿ 20, ಮೈಸೂರು 4, ಮಂಡ್ಯ 3, ರಾಮನಗರ 1, ಬೆಂಗಳೂರು ಗ್ರಾಮಾಂತರ 1, ಕೊಡಗು 1, ಚಾಮರಾಜನಗರ 1 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಕೊರೊನಾ ಸೋಂಕಿತರ ಮಾನಿಟರ್ ಮಾಡಲು ಮಾರ್ಗಸೂಚಿ ಹೀಗಿದೆ.
- ಪ್ರಸ್ತುತ ಹೊಸ ಮಾರ್ಗಸೂಚಿ ಪ್ರಕಟವಾಗಿಲ್ಲ. ಹೀಗಾಗಿ ಈ ಹಿಂದಿನ ಮಾರ್ಗಸೂಚಿಯನ್ನೇ ಪಾಲಿಸಲಾಗುತ್ತಿದೆ.
- ಒಟ್ಟು ಏಳು ದಿನ ಹೋಂ ಐಸೋಲೇಷನ್’ನಲ್ಲಿ ಗುಣಲಕ್ಷಣಗಳು ಕಡಿಮೆ ಇರುವ ವ್ಯಕ್ತಿ ಇರಬೇಕಾಗುತ್ತದೆ.
-ಏಳು ದಿನಗಳ ಬಳಿಕ ಸೋಂಕಿತರಿಗೆ ಜ್ವರ ಇಲ್ಲದೇ ಇದ್ದರೆ ಹೋಂ ಐಸೋಲೇಷನ್ ಮುಕ್ತಾಯವಾಗುತ್ತದೆ.
- ಒಂದು ವೇಳೆ ಏಳು ದಿನದ ಬಳಿಕ ಹೋಂ ಐಸೊಲೇಷನ್’ನಲ್ಲಿರುವ ವ್ಯಕ್ತಿಗೆ ಜ್ವರ ಬಂದರೆ ಅಥವಾ ಇದ್ದರೆ ಸೋಂಕಿತರಿಗೆ ಟೆಸ್ಟಿಂಗ್ ಕಡ್ಡಾಯ
- ಸೋಂಕಿತ ವ್ಯಕ್ತಿಯ ಜೊತೆಗೆ ಟೆಲಿ ಕನ್ಸಲ್ಟಿಂಗ್ ಮಾಡಲಾಗುತ್ತದೆ.
- ಅಗತ್ಯಬಿದ್ದಲ್ಲಿ ಔಷಧ ಕಿಟ್ ಕಳಿಸಲಾಗುತ್ತಿದೆ
- ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ವಿವರ ಕಲೆ ಹಾಕಲಾಗುತ್ತೆ.
- ಸೋಂಕಿತ ವ್ಯಕ್ತಿಗೆ ಗುಣಲಕ್ಷಣಗಳು ಇಲ್ಲದೇ, ಅನ್ಯಕಾಯಿಲೆಯಿಂದ ಬಳಲುತ್ತಿದ್ದರೆ ನಿಗಾ ವಹಿಸಲಾಗುತ್ತದೆ
ಇದನ್ನೂ ಓದಿ: ನ್ಯೂ ಇಯರ್ ದಿನ ಟ್ರಾಫಿಕ್ ರೂಲ್ಸ್’ನಲ್ಲಿ ಬದಲಾವಣೆ… ಹೀಗಿರಲಿದೆ ನೋಡಿ ‘ಹೊಸ’ ನಿಯಮ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ