90ರ ದಶಕದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಯಾರು ಗೊತ್ತಾ..! ಇಂದು ಅವರ ತಂಗಿ ಬಿಗ್ಸ್ಟಾರ್
Karisma Kapoor remuneration : ಗ್ಲಾಮರ್ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವುದು ಸುಲಭವಲ್ಲ. ಬಾಲಿವುಡ್‌ನಲ್ಲಿ ಸ್ಟಾರ್ ಆಗುವುದು ತುಂಬಾ ಕಠಿಣದ ಕೆಲಸ. 90ರ ದಶಕದಲ್ಲಂತೂ ಇದು ಹರಸಾಹಸವಾಗಿತ್ತು. ಇದರ ನಡುವೆಯೂ ನಟಿಯೊಬ್ಬರು ಹೋರಾಡಿ ತಮ್ಮ ಗುರಿಯನ್ನು ಮುಟ್ಟಿದ್ದರು.
Karisma Kapoor : ಪ್ರತಿದಿನ ಸಿನಿ ಜಗತ್ತಿಗೆ ಪ್ರವೇಶಿಸಿ ತಮ್ಮ ಗುರಿ ಸಾಧಿಸುವ ಕನಸಿನೊಂದಿಗೆ ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಗ್ಲಾಮರ್ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವುದು ಸುಲಭವಲ್ಲ. ಬಾಲಿವುಡ್‌ನಲ್ಲಿ ಸ್ಟಾರ್ ಆಗುವುದು ತುಂಬಾ ಕಠಿಣದ ಕೆಲಸ. 90ರ ದಶಕದಲ್ಲಂತೂ ಇದು ಹರಸಾಹಸವಾಗಿತ್ತು. ಇದರ ನಡುವೆಯೂ ನಟಿಯೊಬ್ಬರು ಹೋರಾಡಿ ತಮ್ಮ ಗುರಿಯನ್ನು ಮುಟ್ಟುವ ಮೂಲಕ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು.
ಹೌದು.. ದೊಡ್ಡ ಚಲನಚಿತ್ರ ಕುಟುಂಬಕ್ಕೆ ಸೇರಿದ್ದ ನಟಿಯೊಬ್ಬರು ಸೂಪರ್‌ಸ್ಟಾರ್ ಆಗುವ ಮೊದಲು ಕಠಿಣತೆ ಎದುರಿಸಿದ್ದರು. ನಾವು ಹೇಳುತ್ತಿರುವ ನಟಿ ಕರಿಷ್ಮಾ ಕಪೂರ್ ಬಗ್ಗೆ.. ಯಸ್.. ಒಂದು ಸಮಯದಲ್ಲಿ ಕರಿಷ್ಮಾ ಹಿಟ್ ಚಿತ್ರಗಳ ಮೂಲಕ ಬಿಟೌನ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ನಟಿ, ಆದ್ರೆ ಇಂದು ಬಾಲಿವುಡ್‌ನಿಂದ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ 10: JioCinema ದಲ್ಲಿವೆ ಹತ್ತು ಹಲವು ವಿಶೇಷಗಳು!
ಕರಿಷ್ಮಾ ಕಪೂರ್ 90 ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. ಚಲನಚಿತ್ರ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದರೂ ಸಹ ಅವರಿಗೆ ಬಾಲಿವುಡ್ ಪ್ರವೇಶಿಸುವುದು ಸುಲಭವಾಗಿರಲಿಲ್ಲ. ಕರಿಷ್ಮಾ ಕಪೂರ್ ನಟಿಯಾಗಲು ತನ್ನ ಕುಟುಂಬದ ವಿರುದ್ಧ ನಿಲ್ಲಬೇಕಾಯಿತು. ಯಾರ ಬೆಂಬಲವಿಲ್ಲದೆ ಬಾಲಿವುಡ್‌ನಲ್ಲಿ ತನಗಾಗಿ ಒಂದು ಜಾಗವನ್ನು ಗಿಟ್ಟಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾದರು ಎಂಬುದು ಗಮನಿಸಬೇಕಾದ ಸಂಗತಿ.
ಚಿತ್ರ ನಿರ್ಮಾಪಕರ ಮೊದಲ ಆಯ್ಕೆ ಕರಿಷ್ಮಾ ಕಪೂರ್ ಆಗಿದ್ದ ಕಾಲವೊಂದಿತ್ತು. ಅವರು ಹೆಚ್ಚಾಗಿ ಡೇವಿಡ್ ಧವನ್ ಅವರೊಂದಿಗೆ ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕರಿಷ್ಮಾ ಒಮ್ಮೆ ಸಂದರ್ಶನವೊಂದರಲ್ಲಿ ತಾನು ರಾಜ್ ಕಪೂರ್ ಕುಟುಂಬಕ್ಕೆ ಸೇರಿದವಳಾಗಿದ್ದರೂ, ಬಾಲಿವುಡ್‌ನಲ್ಲಿ ಸಾಕಷ್ಟು ಕಷ್ಟಪಡಬೇಕಾಯಿತು ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: 80-90ರ ದಶಕದಲ್ಲಿ ಖ್ಯಾತಿ ಗಳಿಸಿದ ಭಾರತದ ಟಾಪ್ ಬಾಲಿವುಡ್ ನಟಿ ರೇಖಾ ಆಸ್ತಿ ಇಷ್ಟು ಕೋಟಿಯೇ?
ಕರಿಷ್ಮಾ 16ನೇ ವಯಸ್ಸಿನಲ್ಲಿ 'ಪ್ರೇಮ್ ಖೈದಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ರಾಜ್ ಕಪೂರ್ ಕುಟುಂಬದಿಂದ ಬಂದಿದ್ದರೂ ಕರಿಷ್ಮಾಗೆ ಸಿನಿ ಜಗತ್ತಿಗೆ ಪ್ರವೇಶಿಸುವುದು ಸುಲಭವಾಗಿರಲಿಲ್ಲ ಎಂದು ಕರಿಷ್ಮಾ ಸಹೋದರಿ ಕರೀನಾ ಕಪೂರ್ ಸಿಮಿ ಗ್ರೆವಾಲ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಕರೀನಾ ಪ್ರಕಾರ, ಬಾಲಿವುಡ್ ಪ್ರವೇಶಿಸುವ ಕರಿಷ್ಮಾ ನಿರ್ಧಾರವನ್ನು ಯಾರೂ ಬೆಂಬಲಿಸಿರಲಿಲ್ಲವಂತೆ.
ಕರಿಷ್ಮಾ ಕಪೂರ್ ಅವರ ನಟನಾ ವೃತ್ತಿಜೀವನದ ಬಗ್ಗೆ ನೋಡುವುದಾದ್ರೆ, 1996 ರಿಂದ 1999 ರವರೆಗೆ ಸಿನಿರಂಗವನ್ನು ಆಳಿದರು. ಕರಿಷ್ಮಾ 'ಸಾಜನ್ ಚಲೇ ಸಸುರಾಲ್', 'ಜೀತ್', 'ಕೃಷ್ಣ', 'ರಾಜಾ ಹಿಂದೂಸ್ತಾನಿ', 'ಹೀರೋ ನಂಬರ್ ಒನ್', 'ಬಿವಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಡ್ರೋನ್ ಪ್ರತಾಪ್ ಎಂಟ್ರಿ..! ಗೆದ್ದು ಬಾ ಎನ್ನುತ್ತಿದ್ದಾರೆ ಫ್ಯಾನ್ಸ್
ನಂಬರ್ ಒನ್', 'ಅಂದಾಜ್ ಅಪ್ನಾ ಅಪ್ನಾ' ಮತ್ತು 'ಜುಡ್ವಾ'. ಕರಿಷ್ಮಾ ಕಪೂರ್ 2007 ರವರೆಗೆ ಚಲನಚಿತ್ರಗಳಲ್ಲಿ ನಟಿಸಿದರು. ನಂತರ ಅವರು ಸಿನಿರಂಗದಿಂದ ದೂರವಾದರು. 2012 ರಲ್ಲಿ ಪುನರಾಗಮನಕ್ಕೆ ಪ್ರಯತ್ನಿಸಿದರು ಆದರೆ ಕಳೆದುಹೋದ ತನ್ನ ಸ್ಟಾರ್ಡಮ್ ಅನ್ನು ಮರಳಿ ಪಡೆಯಲು ನಟಿಗೆ ಸಾಧ್ಯವಾಗಲಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.