ಬೆಂಗಳೂರು : ಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಆಕ್ಯುಪೆನ್ಸಿಗೆ ಅವಕಾಶ ರಾಜ್ಯ ಸರ್ಕಾರದ ಪರ್ಮಿಷನ್ ನೀಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ 50 : 50 ಗೆ ಅವಕಾಶ ನೀಡಿತ್ತು. ಈಗ ಈ ಆದೇಶವನ್ನ ವಾಪಸ್ ಪಡೆದಿದೆ.


COMMERCIAL BREAK
SCROLL TO CONTINUE READING

ನಾಳೆಯಿಂದ ಚಿತ್ರಮಂದಿರಗಳಲ್ಲಿ(Cinema Theatres) ಶೇ.100ರಷ್ಟು ಆಕ್ಯುಪೆನ್ಸಿ ಇರಲಿದೆ. ಇದರ ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯ ಮತ್ತು ಒಳಗಡೆ ತಿಂಡಿ, ತಿನ್ನಿಸುಗಳನ್ನ  ತಿನ್ನುಲು ಅನುಮತಿ ಇಲ್ಲ ಈ ನಿಯಮಗಳನ್ನೂ ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರದ ಸೂಚನೆಯಲ್ಲಿ ತಿಳಿಸಿದೆ.


ಇದನ್ನೂ ಓದಿ : ‘ಅಪ್ಪು’ ನೆನೆದು ಅಲ್ಲು ಅರ್ಜುನ್ ಭಾವುಕ; ಪವರ್‌ ಸ್ಟಾರ್‌ ಬಗ್ಗೆ ಹೇಳಿದ್ದೇನು ಗೊತ್ತಾ..?


ಸರ್ಕಾರದ ಈ ಆದೇಶಕ್ಕೋಸ್ಕರ ಸ್ಯಾಂಡಲ್‌ವುಡ್‌(Sandalwood) ಕಲಾವಿದರು ಕಾಯುತ್ತಿದ್ದರು. ಇದಕ್ಕಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿ ಮನವಿ ಕೂಡ ಸಲ್ಲಿಸಿದ್ದರು. ಕಡೆಗೂ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಆದೇಶ ನೀಡಿದೆ.


ಸದ್ಯ ರಿಲೀಸ್‌ಗೆ ರೆಡಿಯಾಗಿ ಓಲ್ಡ್ ಮಾಂಕ್, ಏಕ್ ಲವ್ ಯಾ, ತೋತಾಪುರಿ, ಪೋರ್ ವಾಲ್ಸ್ ಬೈಟು ಲವ್, ರೌಡಿ ಬೇಬಿ, ಸೇರಿ ಸಾಲು ಸಾಲು ಸಿನಿಮಾಗಳು ಕಾಯುತ್ತಿವೆ. ಈಗ ಪರ್ಮಿಷನ್‌ ಸಿಕ್ಕ ಬೆನ್ನಲ್ಲೇ  ಸಿನಿಮಾಗಳು ರಿಲೀಸ್‌ ಆಗಲಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.