‘ಆರ್​ಆರ್​ಆರ್​’ (RRR) ಸಿನಿಮಾ ರಿಲೀಸ್‌ ಗೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇದೆ.  ಸ್ಟಾರ್‌ ಡೈರೆಕ್ಟರ್‌ ರಾಜಮೌಳಿ (Rajamouli) ಸಿನಿಮಾ ಅಂದ್ರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಯಾಕಂದ್ರೆ ರಾಜಮೌಳಿ ಅವರು ಸಿನಿಮಾದಲ್ಲಿ ಮಾಯಾಲೋಕವನ್ನೇ ಸೃಷ್ಟಿ  ಮಾಡಿ ಬಿಡ್ತಾರೆ. ಇವಬರ ಎಲ್ಲಾ ಸಿನಿಮಾಗಳು ತುಂಬಾ ರಿಚ್‌ ಆಗಿ ಮೂಡಿ ಬರುತ್ತವೆ. ಸಖತ್‌ ಟ್ವಿಸ್ಟ್‌ ಮತ್ತು ಟರ್ನ್‌ ಗಳನ್ನ ಇವರ ಸಿನಿಮಾಗಳಲ್ಲಿ ಕಣ್ತುಂಬಿಕೊಳ್ಳಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:Seva Das: ಏಪ್ರಿಲ್ ಒಂದರಂದು ಬಂಜಾರ ಭಾಷೆಯ "ಸೇವಾ ದಾಸ್" ಸಿನಿಮಾ ರಿಲೀಸ್‌


ಬಹುನಿರೀಕ್ಷಿತ ‘ಆರ್​ಆರ್​ಆರ್​’ ಸಿನಿಮಾದ  ಕ್ರೇಜ್​ ದಿನದಿನವೂ ಹೆಚ್ಚುತ್ತಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್​ ಚರಣ್ ​ ಮತ್ತು ಜ್ಯೂ. ಎನ್​ಟಿಆರ್​ (Junior NTR) ಅಭಿನಯಿಸಿದ್ದಾರೆ. ಈ ಸಿನಿಮಾಗಾಗಿ ಇಡೀ ವಿಶ್ವವೇ ಎದುರು ನೋಡುತ್ತಿದೆ.ನಾಯಕಿಯಾಗಿ ಆಲಿಯಾ ಭಟ್​ (Alia Bhatt) ಅಭಿನಯಿಸಿದ್ದಾರೆ. ಮಾರ್ಚ್ 25ರಂದು ‘ಆರ್​ಆರ್​ಆರ್​’ ಸಿನಿಮಾ ತೆರೆಗೆ ಬರುತ್ತಿದೆ


ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ ಮತ್ತು ಪೋಸ್ಟರ್​ಗಳು ಭಾರಿ ಹೈಪ್​ ಸೃಷ್ಟಿ ಮಾಡಿವೆ. ಮೊನ್ನೆಯಷ್ಟೇ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್​ ಇವೆಂಟ್ ಕಾರ್ಯಕ್ರಮ ಕೂಡ ನಡೆದಿದೆ. ಮಾರ್ಚ್ 25ಕ್ಕೆ ‘ಆರ್​ಆರ್​ಆರ್​’ ಇಡೀ ವಿಶ್ವದಾದ್ಯಂತ ರಿಲೀಸ್​ ಆಗಲಿದೆ. ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. 


ತ್ರಿಬಲ್‌ ಆರ್‌ ಸಿನಿಮಾವನ್ನ ಕನ್ನಡಿಗರು ಕೂಡ ನೋಡಬೇಕೆಂದು ತುದಿಗಾಲಲ್ಲಿ ನಿಂತು ಕಾದಿದ್ದರು. ಅದ್ಯಾಕೋ ಏನೋ ಇದೀಗ ಈ ಸಿನಿಮಾದ ಬಗ್ಗೆ ಬೇರೆ ಬೇರೆ ಕಾರಣಗಳಿಂದ ಮುನಿಸಿಕೊಂಡಿದ್ದಾರೆ. ಇದೀಗ ಕನ್ನಡಿಗರ ಸಿಟ್ಟಿಗೆ ರೀಸನ್‌ ಏನಪ್ಪಾ ಅಂದ್ರೆ ತ್ರಿಬಲ್‌ ಆರ್‌ ಸಿನಿಮಾದ ಟಿಕೆಟ್‌ ರೊಕ್ಕ . ಹೌದು ಈ ಸಿನಿಮಾದ ಟಿಕೆಟ್‌ ಬೆಲೆ ಕೇಳಿ ಕನ್ನಡಿಗರು ಗರಂ ಆಗಿದ್ದಾರೆ.


ಈಗಾಗಲೇ ಟಿಕೆಟ್​ ಬುಕ್ಕಿಂಗ್​ ಕೂಡ ಓಪನ್​ ಆಗಿದೆ. ಟಿಕೆಟ್​ ಬುಕ್​ ಮಾಡೋಣ ಅಂತ ಅಂದುಕೊಂಡವರಿಗೆ ಬಿಗ್​ ಶಾಕ್​ ಎದುರಾಗಿದೆ. ‘ಆರ್​​ಆರ್​​ಆರ್​’ (RRR) ಸಿನಿಮಾದ ಒಂದು ಟಿಕೆಟ್​ಬೆಲೆ ಕಂಡು ಸಿನಿರಸಿಕರು ಸುಸ್ತಾಗಿದ್ದಾರೆ. ಕಾರಣ ಸಿಂಗಲ್​ ಸ್ಕ್ರೀನ್​ ಥಿಯೇಟರ್​ಗಳಲ್ಲೇ ಒಂದು ಟಿಕೆಟ್​ ಬೆಲೆ 500 ಹಾಗೂ 400 ರೂಪಾಯಿ ಇದೆ. ಸಿಂಗಲ್​ ಸ್ಕ್ರೀನ್​​ಗಳಿಗೆ ಇಷ್ಟು ಬೆಲೆಯಿದ್ದರೆ, ಇನ್ನೂ ಮಾಲ್​ಗಳಲ್ಲಿ ಒಂದು ಟಿಕೆಟ್​ ಬೆಲೆ ಏನಿಲ್ಲ ಅಂದರು ಕನಿಷ್ಠ 800 ರಿಂದ ಸಾವಿರ ರೂಪಾಯಿ ಇರಲಿದೆ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.


ಇದನ್ನೂ ಓದಿ:ಕಂಬಳಿಹುಳ ಸಿನಿಮಾದ ಫಸ್ಟ್ ಝಲಕ್ ಬಿಡುಗಡೆ ಮಾಡಿದ ನಟ ಶ್ರೀಮುರುಳಿ


ಆಂಧ್ರ, ತೆಲಂಗಾಣದಲ್ಲಿ ಮಾತ್ರ 1 ಟಿಕೆಟ್​ಗೆ 100, 120 ರೂ. ಇದೆ. ಕರ್ನಾಟಕದಲ್ಲಿ ಮಾತ್ರ ಯಾಕೆ ಈ ಲೆವೆಲ್ಲಿಗೆ ಟಿಕೆಟ್‌ ಬೆಲೆ ಜಾಸ್ತಿ ಇದೆ ಅನ್ನೋದು ನಿಜಕ್ಕೂ ದೊಡ್ಡ ಪ್ರಶ್ನೆಯಾಗಿದೆ. ಆಂಧ್ರ ಹಾಗೂ ತೆಲಂಗಾಣ ಸರ್ಕಾರ ಸಿನಿಮಾ ಟಿಕೆಟ್​​ಗಳಿಗೆ ಫಿಕ್ಸ್​ ಪ್ರೈಸ್​ ಇಟ್ಟಿದ್ದಾರೆ.  ಕರ್ನಾಟಕದಲ್ಲಿ ವಿತರಕರು  ಏರ್ರಾಬಿರ್ರಿ ಟಿಕೆಕ್ ರೇಟ್ ಜಾಸ್ತಿ ಮಾಡಿದ್ದಾರೆ. ಕರ್ನಾಟಕದಲ್ಲಿ ಟಿಕೆಟ್ ದರ ಹೆಚ್ವಿಸಿರುವುದಕ್ಕೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಹಾಗೂ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್​.ಎಂ.​ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಟಿಕೆಟ್​ ದರ ಇಳಿಸುವಂತೆ ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದಾರೆ.


ನಮ್ಮ ವಿತರಕರು ಪರಭಾಷ ಚಿತ್ರಗಳಿಗೆ ಮನಸೋಇಚ್ಛೆ ಹಣ ಕೊಟ್ಟು ತರುತ್ತಾರೆ. ಕರ್ನಾಟಕ  ಪರಭಾಷ ಚಿತ್ರಗಳಿಗೆ ಗೋಮಾಳವಾಗಿ ಬಿಟ್ಟಿದೆ. ಎರಡೇ ದಿನಗಳಲ್ಲಿ ಬಂಡವಾಳ ರಿಕವರಿ ಮಾಡೊ ಉದ್ದೇಶದಿಂದ ಹಗಲು ದರೋಡೆ ಮಾಡ್ತಾರೆ. ಪರಭಾಷ ಚಿತ್ರಗಳು ಕನ್ನಡ ಚಿತ್ರರಂಗದ ಮೇಲೆ ದಬ್ಬಾಳಿಕೆ ಮಾಡ್ತಾರೆ. ಸರ್ಕಾರ ಈ ಕೂಡಲೆ ಟಿಕೆಟ್ ದರಗಳ ಹೆಚ್ಚಳಕ್ಕೆ ಬ್ರೇಕ್  ಹಾಕಬೇಕು 150,200, ಟಿಕೆಟ್ ದರ ನಿಗದಿ ಮಾಡಿ ಆದೇಶ ಹೊರಡಿಸ ಬೇಕು ಎಂದು  ಸಾರಾ ಗೋವಿಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.