ಬೆಂಗಳೂರು: ಕಾರ್ತಿಕ್‌ ಜಯ್‌ರಾಮ್‌.. ಕನ್ನಡದ ಕಿರುತೆರೆಯಲ್ಲಿ ತಮ್ಮ ವಿಭಿನ್ನ ನಟನೆಯಿಂದ ಮನೆಗೆದ್ದೋರು... ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ JK ಎಂದೇ ಫೇಮಸ್‌ ಆದವರು. ಅದರಲ್ಲೂ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆ ಅವ್ರ ಖಡಕ್‌ ಮಾತು ಅವ್ರ ಆಟಿಟ್ಯೂಡ್‌ ನೋಡಿ ಪ್ರತಿಯೊಬ್ಬರೂ ಫಿದಾ ಆಗಿದ್ರು. ಸೀರಿಯಲ್‌ನಲ್ಲಿ ತನ್ನ ಪತ್ನಿಯನ್ನು ಕರಿಯುತ್ತಿದ್ದ ರೀತಿ ಈಗ್ಲೂ ಜೆಕೆ ಅಭಿಮಾನಿಗಳ ಕಿವಿಯಲ್ಲಿ ಗುನುಗ್ತಿದೆ..


COMMERCIAL BREAK
SCROLL TO CONTINUE READING

ಅಗ್ನಿಸಾಕ್ಷಿ’, ‘ನಾಗಿಣಿ 2’ ‘ಸಿಯಾ ಕೆ ರಾಮ್’ ಹೀಗೇ  ಮುಂತಾದ ಧಾರಾವಾಹಿಗಳಲ್ಲಿ ಕಾರ್ತಿಕ್‌ ಜಯ್‌ರಾಮ್‌ ವಿಶೇಷ ಪಾತ್ರಗಳ ಮೂಲಕ ರಂಜಿಸಿದ್ದಾರೆ.. ಅದರಲ್ಲೂ ಜೆಕೆ ಕನ್ನಡ ಮಾತ್ರದಲ್ಲದೆ ಪರಭಾಷೆಯಲ್ಲೂ ಮಿಂಚಿದ್ದು ಅಲ್ಲಿ ಕೂಡಾ ಅಭಿಮಾನಿಗಳನ್ನು ಹೊಂದಿದ್ದಾರೆ....


 ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..!


ಇನ್ನು ಕಾರ್ತಿಕ್‌ ಜಯರಾಮ್‌ ಕನ್ನಡ ಸೀರಿಯಲ್‌ಗಳಲ್ಲಿ ಮಾತ್ರವಲ್ಲದೆ ಕನ್ನಡ ಬಿಗ್‌ಬಾಸ್‌ ಸೀಸನ್‌ 5ರಲ್ಲಿ ರನ್ನರ್‌ಅಪ್‌ ಆಗಿ ಮಿಂಚಿದ್ರು. ಬೆಳ್ಳಿತೆರೆಯಲ್ಲಿ ಕೆಂಪೇಗೌಡ, ವಿಷ್ಣುವರ್ಧನ, ಜರಾಸಂಧ, ವರದನಾಯಕ, ವಿಸ್ಮಯ, ಆ ಕರಾಳ ರಾತ್ರಿ, ಮೇ 1st, ಪುಟ 109, ಓ ಪುಷ್ಪ ಐ ಹೇಟ್ ಟಿಯರ್ಸ್ ಹೀಗೆ ಸಾಕಷ್ಟು ಚಿತ್ರಗಳಲ್ಲಿ  ಕಾರ್ತಿಕ್ ಜಯಾರಾಮ್ ಅಭಿನಯಿಸಿದ್ದಾರೆ.


ಇ‌ನ್ನು ಅಪರ್ಣಾ ಸಮಂತಾ ಬಗ್ಗೆ ಹೇಳೋದಾದ್ರೆ ಇವ್ರು ಫ್ಯಾಶನ್ ಡಿಸೈನರ್.ಫ್ಯಾಶನ್ ಲೋಕದಲ್ಲಿ ಅಪರ್ಣಾ ಸಮಂತಾ ಒಳ್ಳೆಯ  ಹೆಸರುಗಳಿಸಿದ್ದಾರೆ.


ಒಟ್ಟಿನಲ್ಲಿ ಕಾರ್ತಿಕ್‌ ಹಾಗೂ ಅಪರ್ಣಾ ಬಗ್ಗೆ ಒಂದಿಷ್ಟು ಊಹಾಪೊಹಗಳು ಮನೆ ಮಾಡಿದ್ದು, ಸದ್ಯದಲ್ಲೇ ಎಲ್ಲದಕ್ಕೂ ಬ್ರೇಕ್‌ ಸಿಗಲಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ