ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..!

ಈಗಾಗಲೇ ಟೀಸರ್‌ ಹಾಗೂ ಹಾಡಿನ ಮೂಲಕ '777 ಚಾರ್ಲಿ' ದೊಡ್ಡ ಹೈಪ್ ಕ್ರಿಯೇಟ್‌ ಮಾಡಿತ್ತು. ಇದೀಗ ರಿಲೀಸ್‌ ಆಗಿರುವ '777 ಚಾರ್ಲಿ'ಯ ಟ್ರೈಲರ್‌ ಪ್ರೇಕ್ಷಕರನ್ನ ಸೆಳೆದಿಡುವಂತಿದೆ. ಇದು ಚಿತ್ರದ ಮೇಲಿನ ನಿರೀಕ್ಷೆಗಳನ್ನ ದುಪಟ್ಟು ಮಾಡಿದ್ದು, ಚಿತ್ರ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ದೇಶಾದ್ಯಂತ ಕಾಯುತ್ತಿದ್ದಾರೆ.

Written by - Malathesha M | Edited by - Bhavishya Shetty | Last Updated : May 16, 2022, 04:13 PM IST
  • 777 ಚಾರ್ಲಿ ಟ್ರೈಲರ್‌ ರಿಲೀಸ್‌
  • ಬಹುನಿರೀಕ್ಷಿತ ಪ್ಯಾನ್‌ ಇಂಡಿಯನ್‌ ಸಿನಿಮಾ
  • ಪ್ರೇಕ್ಷಕರ ಮನಗೆಲ್ಲುತ್ತಿದೆ ಸಿನಿಮಾ ಟ್ರೈಲರ್
ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..! title=
777 Charlie Trailer

ಒಂದು ಕಡೆ ಕನ್ನಡದಲ್ಲಿ ಮಾಸ್‌ ಸಿನಿಮಾಗಳು ಸೂಪರ್‌ ಹಿಟ್‌ ಆಗುತ್ತಿವೆ. ಇದೇ ಹೊತ್ತಲ್ಲಿ ಎಮೋಷನಲ್‌ ಕಹಾನಿ ಹೇಳಲು ಚಾರ್ಲಿ ಬಂದಿದ್ದಾನೆ. ಹೌದು, ಕನ್ನಡದ ಬಹುನಿರೀಕ್ಷಿತ ಮತ್ತೊಂದು ಪ್ಯಾನ್‌ ಇಂಡಿಯನ್‌ ಸಿನಿಮಾ '777 ಚಾರ್ಲಿ' ಟ್ರೈಲರ್‌ ಇಂದು ರಿಲೀಸ್‌ ಆಗಿದ್ದು, ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ. ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲು ಎಂಟ್ರಿ ಕೊಟ್ಟಿರುವ '777 ಚಾರ್ಲಿ'ಗೆ ಅಬ್ಬರದ ಸ್ವಾಗತ ಸಿಕ್ಕಿದೆ.

ಇದನ್ನು ಓದಿ: ನೀನಾಸಂ ಸತೀಶ್ ಅಭಿನಯದ "ಅಶೋಕ ಬ್ಲೇಡ್​"... ಇದರ ಕಥೆ ಏನು ಗೊತ್ತಾ!?

ಈಗಾಗಲೇ ಟೀಸರ್‌ ಹಾಗೂ ಹಾಡಿನ ಮೂಲಕ '777 ಚಾರ್ಲಿ' ದೊಡ್ಡ ಹೈಪ್ ಕ್ರಿಯೇಟ್‌ ಮಾಡಿತ್ತು. ಇದೀಗ ರಿಲೀಸ್‌ ಆಗಿರುವ '777 ಚಾರ್ಲಿ'ಯ ಟ್ರೈಲರ್‌ ಪ್ರೇಕ್ಷಕರನ್ನ ಸೆಳೆದಿಡುವಂತಿದೆ. ಇದು ಚಿತ್ರದ ಮೇಲಿನ ನಿರೀಕ್ಷೆಗಳನ್ನ ದುಪಟ್ಟು ಮಾಡಿದ್ದು, ಚಿತ್ರ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ದೇಶಾದ್ಯಂತ ಕಾಯುತ್ತಿದ್ದಾರೆ.

'ಪಪ್ಪಿ'ಯ ಕಥೆ: 
ಕನ್ನಡದಲ್ಲಿ ಡಿಫರೆಂಟ್‌ ಡಿಫರೆಂಟ್‌ ಸಿನಿಮಾಗಳನ್ನು ತೆರೆಗೆ ತರುವಲ್ಲಿ ರಕ್ಷಿತ್‌ ಶೆಟ್ಟಿ ಹೆಸರುವಾಸಿ. ಹೀಗೆ ಡಿಫರೆಂಟ್‌ ಸ್ಟೋರಿಗಳ ಮೂಲಕ ಕನ್ನಡ ಸಿನಿಮಾ ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿರುವ ರಕ್ಷಿತ್‌ ಶೆಟ್ಟಿ, ಈ ಬಾರಿ ಒಂದು ಪಪ್ಪಿಯ ಕಥೆ ಹೇಳಲು ಹೊರಟಿದ್ದಾರೆ. ಪ್ರೀತಿ, ಕಂಬನಿ, ಭಾವನೆಗಳ ಬೆಸುಗೆಯೇ '777 ಚಾರ್ಲಿ' ಎನ್ನಬಹುದು.

ಇದನ್ನು ಓದಿ: ಮಲೇಶಿಯಾದಲ್ಲಿ ಕನ್ನಡದ ಕಂಪು ಹರಿಸಿದ ಕನ್ನಡತಿ ʼಸಾನ್ವಿ ದೇಸಾಯಿʼ

ಕನ್ನಡ ಸಿನಿಮಾ ರಂಗದಲ್ಲಿ 'ಕೊರೊನಾ' ಗ್ರಹಣ ತೊಲಗಿ, ಹೊಸ ಮನ್ವಂತರ ಆರಂಭವಾಗಿದೆ. ಹೀಗಾಗಿ ಬಹುನಿರೀಕ್ಷಿತ ಸಾಲು ಸಾಲು ಕನ್ನಡ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಈ ಸಾಲಲ್ಲಿ ರಕ್ಷಿತ್‌ ಶೆಟ್ಟಿ ಅಭಿನಯದ '777 ಚಾರ್ಲಿ'  ಸಿನಿಮಾ ಕೂಡ ಇದ್ದು,  ಜೂನ್‌ 10ರಂದು ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News