Kartik Aaryan on Kantara : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಓಟಿಟಿಯಲ್ಲಿ ಪ್ರಸಾರವಾಗಿ ಹಳೆಯ ಮಾತಾದರೂ ಸಹ ಜನರ ಮೈಂಡ್‌ನಿಂದ ಇನ್ನೂ ದೂರವಾಗಿಲ್ಲ. ಏಕೆಂದ್ರೆ ಕನ್ನಡಿನ ಅಬ್ಬರ ಹಾಗಿದೆ. ಭಾರತೀಯ ಸಿನಿ ಸ್ಟಾರ್‌ಗಳು ಸಹ ಕಾಂತಾರ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದು, ಮೊನ್ನೆ ಹೃತಿಕ್‌ ರೋಷನ್‌ ರಿಷಬ್‌ ಶೆಟ್ಟಿಯವರನ್ನು ಹಾಡಿ ಹೊಗಳಿದ್ದರು. ಇದೀಗ ಬಿಟೌನ್‌ ಬಾಯ್‌ ಕಾರ್ತಿಕ್‌ ಆರ್ಯನ್‌ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಾಂತಾರ ಸಿನಿಮಾ ದಕ್ಷಿಣ ಸಿನಿ ಜಗತ್ತಿನ ಬಾಕ್ಸ್ ಆಫೀಸ್‌ನ್ನು ಧೂಳಿ ಪಟ ಮಾಡಿದ್ದು ಅಷ್ಟೇ ಅಲ್ಲದೆ, ಚಿತ್ರದ ಹಿಂದಿ ಡಬ್ಬಿಂಗ್ ಆವೃತ್ತಿ ಅದ್ಭುತ ದಾಖಲೆಗಳನ್ನು ಸೃಷ್ಟಿಸಿದೆ. ಕಾಂತಾರ ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಕನ್ನಡಿಗನ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್‌ಸ್ಟಾರ್‌ ರಜನಿಕಾಂತ್‌ನಿಂದ ಕಮಲ್ ಹಾಸನ್ ಮತ್ತು ಎಸ್‌ಎಸ್ ರಾಜಮೌಳಿ ವರೆಗೂ ಕಾಂತಾರವನ್ನು ಮೆಚ್ಚಿಕೊಂಡಿದ್ದಾರೆ.


ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್?


ಅಲ್ಲದೆ, ಸ್ಟಾರ್‌ ನಟರು ಕಾಂತಾರರನ್ನು ಹೊಗಳುವುದನ್ನು ಇಂದಿಗೂ ನಿಲ್ಲಿಸಿಲ್ಲ. ಮೊನ್ನೆ ತಾನೆ ಹೃತಿಕ್ ರೋಷನ್ ಕೂಡ ಚಿತ್ರ ನೋಡಿ ಗೂಸ್ಬಂಪ್ಸ್ ಬಂದವು ಅಂತ ಹೇಳಿದ್ದರು. ಇದೀಗ ಬಿಟೌನ್‌ ಫ್ರೆಡ್ಡಿ ಸ್ಟಾರ್ ಕಾರ್ತಿಕ್ ಆರ್ಯನ್ ಕೂಡ ಕಾಂತಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡಿದ ಕಾರ್ತಿಕ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ, ʼನಾನು ಇಂತಹ ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು ನಟಿಸಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. 


ಕಾರ್ತಿಕ್ ಆರ್ಯನ್ ಅವರು ಇತ್ತೀಚೆಗೆ ಪ್ರಯೋಗಾತ್ಮಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ʼಧಮಾಕಾʼದಿಂದ ʼಫ್ರೆಡ್ಡಿʼಯವರೆಗೂ ಉತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೀಗ ಕಾಂತಾರಂತಹ ದೇಶಿ ಸಿನಿಮಾ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಕಾರ್ತಿಕ್ ಆರ್ಯನ್ ʼಶೆಹಜಾದಾʼ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ʼಸತ್ಯಪ್ರೇಮ್ ಕಿ ಕಥಾʼ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಜೊತೆ ನಟಿಸಲಿದ್ದಾರೆ. ಮಾಹಿತಿ ಪ್ರಕಾರ, ʼಹೇರಾ ಫೇರಿ 3ʼ ಸಿನಿಮಾ ಮಾಡ್ತಾರೆ ಅಂತ ಹೇಳಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.