Rashmika Mandanna: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್?

Rashmika Mandanna: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೌತ್ ನಟಿ. ಅವರ Instagram ಖಾತೆಯಲ್ಲಿನ ಇತ್ತೀಚಿನ ಬದಲಾವಣೆಯ ಪ್ರಕಾರ, ರಶ್ಮಿಕಾ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.  

Written by - Chetana Devarmani | Last Updated : Dec 13, 2022, 04:10 PM IST
  • ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ ಖಾತೆ
  • ಹ್ಯಾಕ್ ಆಯ್ತಾ ರಶ್ಮಿಕಾ ಇನ್‌ಸ್ಟಾಗ್ರಾಮ್‌?
Rashmika Mandanna: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್?   title=
ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೌತ್ ನಟಿ. ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ  ಯಶಸ್ಸಿನ ನಂತರ ಅವರ ಜನಪ್ರಿಯತೆಯು ಗಗನಕ್ಕೇರಿತು, ಇದರಲ್ಲಿ ಅವರು ಶ್ರೀವಲ್ಲಿ ಪಾತ್ರವನ್ನು ನಿರ್ವಹಿಸಿದರು. ನಟಿ ತನ್ನ Instagram ಖಾತೆಯಲ್ಲಿ ಆಗಾಗ ಫೋಟೋ ಅಥವಾ ವಿಡಿಯೋವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದು ಅವರ ಅಭಿಮಾಣಿಗಳ ಮೆಚ್ಚುಗೆಗೆ ಕೂಡ ಪಾತ್ರವಾಗುತ್ತವೆ. 

ಇದನ್ನೂ ಓದಿ : ಭಾರತ ವಿರೋಧಿ ವೆಬ್ ಸೀರಿಸ್, ಪಾಕ್‌ ಮೂಲದ OTT ಪ್ಲಾಟ್‌ಫಾರ್ಮ್‌ ಮೇಲೆ ನಿರ್ಬಂಧ

ಆದಾಗ್ಯೂ, ಅವರ Instagram ಖಾತೆಯಲ್ಲಿನ ಇತ್ತೀಚಿನ ಬದಲಾವಣೆಯ ಪ್ರಕಾರ, ರಶ್ಮಿಕಾ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂಬ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಸೋಮವಾರ, ಅಭಿಮಾನಿಗಳು ರಶ್ಮಿಕಾ ಅವರ Instagram ಬಯೋದಲ್ಲಿ ಅವರ ಹೆಸರು ಹಿಮ್ಮುಖ ಕ್ರಮದಲ್ಲಿ ಕಾಣಿಸಿಕೊಳ್ಳುವುದನ್ನು ಗಮನಿಸಿದರು. ಇದಾದ ಬಳಿಕ ಎಲ್ಲರೂ ರಶ್ಮಿಕಾ ಅವರ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್‌ ಆಗಿದೆ ಎಂದು ಭಾವಿಸಿದರು.

ಬಳಿಕ ಇದು ಹೆಣ್ಣು ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವ ಪ್ಲಮ್ ಪ್ರಾಜೆಕ್ಟ್ ಬ್ಲಾಕ್‌ಬೋರ್ಡ್ ಎಂಬ ಅಭಿಯಾನದ ಭಾಗವಾಗಿದೆ ಎಂದು ನಟಿ ರಶ್ಮಿಕಾ ಬಹಿರಂಗಪಡಿಸಿದರು. ತನ್ನ ಹೆಸರನ್ನು ಹಿಮ್ಮುಖ ಕ್ರಮದಲ್ಲಿರುವ ಬಯೋದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ ರಶ್ಮಿಕಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ಚಿಕ್ಕ ಹುಡುಗಿಯರು ಓದುವುದು ಹೇಗೆಂದು ತಿಳಿದಿಲ್ಲದಿದ್ದಾಗ ಅವರಿಗೆ ಹೇಗೆ ಅನಿಸುತ್ತದೆ. ಪ್ಲಮ್ ಗುಡ್‌ನೆಸ್ ಅದನ್ನು ಬದಲಾಯಿಸುವ ಉದ್ದೇಶದಲ್ಲಿದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ : Kantara 2 : ಕಾಂತಾರ 2 ಸಿನಿಮಾಕ್ಕೆ ಅಣ್ಣಪ್ಪ ಪಂಜುರ್ಲಿ ದೈವದಿಂದ ಅನುಮತಿ

ರಶ್ಮಿಕಾ ಅವರು ಅನೇಕ ಬಾರಿ ತಮ್ಮ ಹೇಳಿಕೆಗಳ ಮೂಲಕ ಟ್ರೋಲ್‌ ಆಗುತ್ತಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಅವರ ಕಾಂತಾರ ಕುರಿತು ತಮ್ಮ ಹೇಳಿಕೆಗಳಿಗಾಗಿ ಟ್ರೋಲ್‌ ಆದರು. ಆ ಬಳಿಕ ಕೇಳಿಬಂದ ಬ್ಯಾನ್‌ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವು ವಾರಗಳ ಹಿಂದೆ ರಿಷಬ್ ಶೆಟ್ಟಿ ಅವರ ಬ್ಲಾಕ್‌ಬಸ್ಟರ್ ಚಿತ್ರವನ್ನು ತಾನು ಇನ್ನೂ ನೋಡಿಲ್ಲ ಎಂದು ಹೇಳಿದ್ದರು. ಇದಾದ ನಂತರ ಟೀಕೆಗೆ ಗುರಿಯಾಗಿದ್ದರು. 

ಇದಾದ ಕೆಲದಿನಗಳ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಶ್ಮಿಕಾ, "ಚಿತ್ರ ಬಿಡುಗಡೆಯಾದ 2-3 ದಿನಗಳ ನಂತರ ನನಗೆ ಈ ಪ್ರಶ್ನೆ ಕೇಳಲಾಯಿತು. ಆಗ ನಾನು ನೋಡಿದ್ದಿಲ್ಲ. ಅದಕ್ಕೆ ಇಲ್ಲ ಎಂದೆ. ನಾನು ಈಗ ಸಿನಿಮಾ ವೀಕ್ಷಿಸಿದ್ದೇನೆ ಮತ್ತು ತಂಡಕ್ಕೆ ಸಂದೇಶವನ್ನೂ ಕಳುಹಿಸಿದ್ದೇನೆ. ಅವರು ಸಂದೇಶಕ್ಕಾಗಿ ನನಗೆ ಧನ್ಯವಾದವನ್ನೂ ಹೇಳಿದರು. ಒಳಗೆ ಏನಾಗುತ್ತಿದೆ ಎಂದು ಜಗತ್ತಿಗೆ ತಿಳಿದಿಲ್ಲ. ನಾವು ನಮ್ಮ ವೈಯಕ್ತಿಕ ಜೀವನದ ಮೇಲೆ ಕ್ಯಾಮೆರಾ ಇಟ್ಟುಕೊಂಡು ಅದನ್ನು ತೋರಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News