Katrina Vicky Wedding: ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಈ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಲವು ವಿಷಯಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.  ಆದರೆ ಈ ನಡುವೆ ಅಭಿಮಾನಿಗಳಿಗೆ ನಿರಾಸೆ ಮೂಡಿಸುವಂತಹ ಸುದ್ದಿಯೂ ಬರುತ್ತಿದೆ. ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಅವರ ಹತ್ತಿರದ ಸಂಬಂಧಿಯೊಬ್ಬರು ಇಂತಹದ್ದೊಂದು ವಿಷಯವನ್ನು ಬಹಿರಂಗಪಡಿಸಿ ಅಚ್ಚರಿ ಮೂಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಮದುವೆಗೆ ಸಂಬಂಧಿಸಿದಂತೆ ಸಸ್ಪೆನ್ಸ್ ಇನ್ನೂ ಉಳಿದಿದೆ. ಕೆಲವರು ವಿಕ್ಕಿ-ಕತ್ರಿನಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಕೆಲವರು ಈ ಮದುವೆಯನ್ನು ನಿರಾಕರಿಸುತ್ತಿದ್ದಾರೆ. ಅದೇ ರೀತಿ, ವಿಕ್ಕಿ ಕೌಶಲ್ ಅವರ ಸಂಬಂಧಿಯೊಬ್ಬರು ಮದುವೆಯ ಬಗ್ಗೆ ಮಹತ್ವದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ವಿಕ್ಕಿ ಮತ್ತು ಕತ್ರಿನಾ ಮದುವೆಯಾಗುತ್ತಿಲ್ಲ ಎಂದು ವಿಕ್ಕಿಯ ಕಸಿನ್ ಸಹೋದರಿಯೊಬ್ಬರು ತಿಳಿಸಿದ್ದಾರೆ. 


ಇದನ್ನೂ ಓದಿ- Katrina Kaif: ಅಕ್ಷಯ್ ಕುಮಾರ್‌ಗೆ ರಾಖಿ ಕಟ್ಟಲು ಬಯಸಿದ್ದ ಕತ್ರಿನಾ ಕೈಫ್, ಕಾರಣ ಏನು ಗೊತ್ತಾ?


ವಾಸ್ತವವಾಗಿ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ (Vicky Kaushal- Katrina Kaif Wedding) ಬಗ್ಗೆ ಇಬ್ಬರು ಸ್ಟಾರ್‌ಗಳಿಂದಲೂ ಅಥವಾ ಅವರ ಕುಟುಂಬದಿಂದಲೂ ಯಾವುದೇ ಮಾಹಿತಿ  ಹೊರಬಿದ್ದಿಲ್ಲ. ಈ ಜೋಡಿ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ ಎಂದು ಗಾಳಿಸುದ್ದಿಯಷ್ಟೇ ಹರಿದಾಡುತ್ತಿದೆ. 


ನಟಿ ಕತ್ರಿಕಾ ಕೈಫ್ ಜೊತೆಗಿನ ನಿಶ್ಚಿತಾರ್ಥದ ಬಗ್ಗೆ ಕೊನೆಗೂ ಮೌನ ಮುರಿದ ವಿಕ್ಕಿ ಕೌಶಾಲ್..!


ವಿಕ್ಕಿ ಕೌಶಲ್ ಸೋದರ ಸಂಬಂಧಿ ಡಾ.ಉಪಾಸನಾ ಮಾತನಾಡಿ, 'ಮದುವೆಯ ಸಿದ್ಧತೆಯಿಂದ ಹಿಡಿದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಸುದ್ದಿಗಳು ಕೇವಲ ವದಂತಿ. ಇವರಿಬ್ಬರು ಮದುವೆ ಆಗುತ್ತಿಲ್ಲ. ಇವೆಲ್ಲವೂ ನಿಮ್ಮ ಮಾಧ್ಯಮದಲ್ಲಿ ರೂಮರ್‌ಗಳು. ಅಂತಹ ಘಟನೆಗಳು ನಡೆದರೆ, ಅವರು ಅದನ್ನು ಘೋಷಿಸುತ್ತಾರೆ. ಬಾಲಿವುಡ್‌ಗೆ ಸಂಬಂಧಿಸಿದಂತೆ ಆಗಾಗ್ಗೆ ಹಲವು ವದಂತಿಗಳು ಹರಡುತ್ತಲೇ ಇರುತ್ತವೆ.  ಇತ್ತೀಚೆಗೆ ನಾನು ನನ್ನ ಸಹೋದರನೊಂದಿಗೆ ಮಾತನಾಡಿದ್ದೇನೆ. ಈ ವಿಷಯದ ಬಗ್ಗೆ ನಾನು ಬೇರೆ ಏನನ್ನೂ ಪ್ರತಿಕ್ರಿಯಿಸಲು ಬಯಸುವುದಿಲ್ಲ, ಆದರೆ ಸದ್ಯಕ್ಕೆ ಮದುವೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.