Keerthy Suresh: ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿದ್ದ ಊಹಾಪೋಹಗಳು ನಿಜವಾಗಿವೆ. ಮಹಾನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಇತ್ತೀಚೆಗೆ ಕೀರ್ತಿ ಸುರೇಶ್‌ ಅವರ ಮದುವೆ ಸುದ್ದಿ, ಸಾಮಾಜಿಕ ಜಲಾತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಕೀರ್ತಿ ಸುರೇಶ್‌ ಮದುವೆಯಾಗಲಿದ್ದಾರೆ ಎನ್ನುವ ಊಹಾಪೋಹಗಲು ಕೇಳಿ ಬಂದಿದ್ದವು, ಆದರೆ ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ನಟಿ ಕೀರ್ತಿ ಸುರೇಶ್‌ ಅವರು ಇದೀಗ ತಮ್ಮ ಮದುವೆ ಹಾಗೂ ತಮ್ಮ ಸಂಬಂಧದ ಕುರಿತದ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.


ಹೌದು, ಸಿನಿಮಾ ಇಂಡಸ್ಟ್ರಿಯಲ್ಲಿ ಫೇಮ್‌ ಗಿಟ್ಟಿಸಿಕೊಂಡಿರುವ ಕೀರ್ತಿ ಸುರೇಶ್‌ ಅವರ ಮದುವೆ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ನಟಿ ಆಂಟೊನಿ ತಟ್ಟಿಲ್‌ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ, ಎಲ್ಲೆಡೆ ಚರ್ಚೆಯನ್ನುಂಟು ಮಾಡಿತ್ತು, ಡಿಸೆಂಬರ್‌ನಲ್ಲಿ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹೊರಬಂದಿತ್ತಾದರೂ, ಅಭಿಮಾನಿಗಳು ಇದನ್ನು ನಂಬಿರಲಿಲ್ಲ, ಆದರೆ ಇದೀಗ ಕೀರ್ತಿ ಸುರೇಶ್‌ ತಮ್ಮ ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಅನ್ನು ಶೇರ್‌ ಮಾಡುವ ಮೂಲಕ ಈ ಕುರಿತದ ಅದಿಕೃತ ಘೋಷಣೆಯನ್ನು ಮಾಡಿದ್ದಾರೆ.


ಆಂಟೊನಿ ಜೊತೆಯಲ್ಲಿನ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು 15 ಯಿಯರ್ಸ್‌ ಟು ಫಾರ್‌ ಎವರ್‌(15 years and counting ♾🧿) ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ವಿಷಯ ತಿಳಿದ ಸಾವಿ ಅಭಿಮಾನಿಗಳ ಹೃದಯ ಒಡೆದು ಚೂರಾಗಿದೆ.


ಮಲಯಾಳಂನ ಖ್ಯಾತ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಲಾ ಅವರ ಪುತ್ರಿ ಕೀರ್ತಿ ಸುರೇಶ್ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. . ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ಕಾಣಿಸಿಕೊಂಡರು. ಇದೀಗ ʻಬೇಬಿ ಜಾನ್‌ʼ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅವರು ಶೀಘ್ರವೇ ಮದುವೆಯಾಗಲಿರುವುದು ಅಭಿಮಾನಿಗಳಿಗೆ ಕುಷಿಯನ್ನುಂಟು ಮಾಡಿದೆ. ಕೀರ್ತಿ ಸುರೇಶ್‌ ಅವರನ್ನು ವಧುವಿನ ರೂಪದಲ್ಲಿ ನೋಡಲು ಫ್ಯಾನ್ಸ್‌ ಕಾತುರದಿಂದ ಕಾಯುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.