ಬೆಂಗಳೂರು: 'ಕೆಜಿಎಫ್‌-2' ಸಿನಿಮಾ ಕನ್ನಡ ಸಿನಿಮಾ ರಂಗದ ಪಾಲಿಗೆ ಹೆಮ್ಮೆ. ಕನ್ನಡಿಗರ ಪಾಲಿಗೆ 'ಕೆಜಿಎಫ್‌-2' ಎಂದಿಗೂ ಮರೆಯಲಾಗದ ಸಿನಿಮಾ. ಇದು ಕನ್ನಡಿಗರಿಗೆ ಮಾತ್ರವಲ್ಲ ಪರಭಾಷೆಯ ಪ್ರೇಕ್ಷಕರನ್ನೂ ಆವರಿಸುತ್ತಿರುವ ಕನ್ನಡ ಸಿನಿಮಾ. ಅಂದಹಾಗೆ ಕರ್ನಾಟಕದಲ್ಲಿ ಪರಭಾಷೆ ಸಿನಿಮಾಗಳ ಹಾವಳಿ ಇದ್ದಂತಹ ಕಾಲ ಒಂದಿತ್ತು. ಆದರೆ ಈಗ ಕನ್ನಡ ಸಿನಿಮಾಗಳು ಬೇರೆ ರಾಜ್ಯದಲ್ಲಿ ದೊಡ್ಡ ಸದ್ದು ಮಾಡುವ ಕಾಲ ಕೂಡಿ ಬಂದಿದೆ. ಅಷ್ಟಕ್ಕೂ ಇದೆಲ್ಲಾ ಸಾಧ್ಯವಾಗಿದ್ದು 'ಕೆಜಿಎಫ್‌-2' ಸಿನಿಮಾದಿಂದ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ಕೆಜಿಎಫ್‌-2' ಬಗ್ಗೆ ಹಗುರವಾಗಿ ಮಾತನಾಡಿದ್ರಾ ಬಾಲಿವುಡ್‌ ನಟ ಶಾಹಿದ್‌ ಕಪೂರ್‌..!


ತೆಲುಗು ಪ್ರೇಕ್ಷಕರೇ ಹೆಚ್ಚಿರುವ ಜಾಗದಲ್ಲೂ 'ಕೆಜಿಎಫ್‌-2' ದೊಡ್ಡ ಹವಾ ಎಬ್ಬಿಸುತ್ತಿದೆ. ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 'ಕೆಜಿಎಫ್‌-2' ದಾಖಲೆ ಮೊತ್ತದ ಕಲೆಕ್ಷನ್‌ ಮಾಡುವ ನಿರೀಕ್ಷೆ ದಟ್ಟವಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ, ಕರ್ನಾಟಕಕ್ಕಿಂತಲೂ ತೆಲುಗು ಭಾಷಿಕರಿರುವ ಪ್ರದೇಶದಲ್ಲೇ 'ಕೆಜಿಎಫ್‌-2' ಹೆಚ್ಚಿನ ಕಲೆಕ್ಷನ್‌ ಮಾಡುವ ನಿರೀಕ್ಷೆ ಇದೆ. ಈ ಮೂಲಕ ಕನ್ನಡ ಸಿನಿಮಾ ಮೇಲೆ ತೆಲುಗು ಪ್ರೇಕ್ಷಕರು ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.


ಇದನ್ನೂ ಓದಿ: ನಾನು ಪ್ರಭಾಸ್‌ ಅಲ್ಲ, ಯಶ್..!‌ ಅಭಿಮಾನಿ ಪ್ರಶ್ನೆಗೆ ಯಶ್ ಖಡಕ್‌ ಉತ್ತರ..!


ಕನ್ನಡಿಗರ ಹೆಮ್ಮೆ..!


ಈ ಕುರಿತು ಅಂಕಿ-ಅಂಶ ಗಮನಿಸೋದಾದರೆ ಕರ್ನಾಟಕಕ್ಕಿಂತ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲೇ ಅತಿಹೆಚ್ಚು ಸ್ಕ್ರೀನ್‌ಗಳಲ್ಲಿ 'ಕೆಜಿಎಫ್‌-2' ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಇದೆ. ಏಕೆಂದರೆ ತೆಲುಗು ಸಿನಿಮಾಗಳ ಪ್ರಾಬಲ್ಯ ಇರುವ ಪ್ರದೇಶದಲ್ಲೂ 'ಕೆಜಿಎಫ್‌-2'ಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ಅತಿಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಲಿದೆ ಎಂಬ ವಿಶ್ವಾಸ ಅಭಿಮಾನಿಗಳದ್ದು.ಹೀಗಾಗಿ ಕಲೆಕ್ಷನ್‌ ವಿಚಾರದಲ್ಲಿ ದೊಡ್ಡ ದಾಖಲೆ ಬರೆಯಲು 'ಕೆಜಿಎಫ್‌-2' ಸಿದ್ಧವಾಗಿದೆ.


ಒಟ್ಟಾರೆ ಹೇಳೋದಾದರೆ 'ಕೆಜಿಎಫ್‌-2' ಕನ್ನಡಿಗರು ಎಂದಿಗೂ ಮರೆಯಲು ಆಗದ ಮತ್ತು ಮರೆತು ಹೋಗದ ಸಿನಿಮಾ ಎನ್ನಬಹುದು.ಕನ್ನಡ ಸಿನಿಮಾ ಮಾರುಕಟ್ಟೆಯನ್ನು ಜಗತ್ತಿಗೆ ವಿಸ್ತರಿಸುತ್ತಿರುವ 'ಕೆಜಿಎಫ್‌-2', ಜಗತ್ತಿನ ಮೂಲೆ ಮೂಲೆಯಲ್ಲೂ ರಿಲೀಸ್‌ ಆಗಲು ಸಿದ್ಧವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.