'ಕೆಜಿಎಫ್‌-2' ಬಗ್ಗೆ ಹಗುರವಾಗಿ ಮಾತನಾಡಿದ್ರಾ ಬಾಲಿವುಡ್‌ ನಟ ಶಾಹಿದ್‌ ಕಪೂರ್‌..!

Written by - Malathesha M | Edited by - Manjunath N | Last Updated : Apr 9, 2022, 12:38 AM IST
  • 'ಕೆಜಿಎಫ್‌-2' ಸಿನಿಮಾ ಹಾಗೂ ಇತರ ಸಿನಿಮಾಗಳ ನಡುವೆ ಬಾಕ್ಸ್‌ ಆಫಿಸ್‌ ವಾರ್‌ ನಡೆಯುತ್ತಾ ಅನ್ನೋ ಗಾಸಿಪ್‌ ಜೋರಾಗಿದೆ.
  • ಈ ಮಧ್ಯೆ ಬಾಲಿವುಡ್‌ ನಟ ಶಾಹಿದ್‌ ಕಪೂರ್‌ 'ಕೆಜಿಎಫ್‌-2' ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.
  'ಕೆಜಿಎಫ್‌-2' ಬಗ್ಗೆ ಹಗುರವಾಗಿ ಮಾತನಾಡಿದ್ರಾ ಬಾಲಿವುಡ್‌ ನಟ ಶಾಹಿದ್‌ ಕಪೂರ್‌..! title=

'ಕೆಜಿಎಫ್‌-2' ಸಿನಿಮಾ ನೋಡಲು ಒಂದು ಕಡೆ ಇಡೀ ಜಗತ್ತು ಕಾಯುತ್ತಿದ್ದರೆ, ಮತ್ತೊಂದು ಕಡೆ 'ಕೆಜಿಎಫ್‌-2' ಸಿನಿಮಾ ಹಾಗೂ ಇತರ ಸಿನಿಮಾಗಳ ನಡುವೆ ಬಾಕ್ಸ್‌ ಆಫಿಸ್‌ ವಾರ್‌ ನಡೆಯುತ್ತಾ ಅನ್ನೋ ಗಾಸಿಪ್‌ ಜೋರಾಗಿದೆ. ಈ ಮಧ್ಯೆ ಬಾಲಿವುಡ್‌ ನಟ ಶಾಹಿದ್‌ ಕಪೂರ್‌ 'ಕೆಜಿಎಫ್‌-2' ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.

'ಕೆಜಿಎಫ್‌' ಚಾಪ್ಟರ್‌ 1 ರಿಲೀಸ್‌ ಆದ ವೇಳೆ ಸಾಲು ಸಾಲಾಗಿ ಬಾಲಿವುಡ್‌ ಸಿನಿಮಾಗಳು ಮಕಾಡೆ ಮಲಗಿದ್ದವು. ಹೀಗೆ ನೋಡೋದಾದ್ರೆ 'ಕೆಜಿಎಫ್‌' ಚಾಪ್ಟರ್‌ 1ಗಿಂತ ಇದೀಗ ರಿಲೀಸ್‌ ಆಗುತ್ತಿರುವ 'ಕೆಜಿಎಫ್‌' ಚಾಪ್ಟರ್‌ 2 ಭಾರಿ ಹವಾ ಎಬ್ಬಿಸಿದೆ. ಹೀಗಾಗಿ ಹಲವು ಬಿಗ್‌ ಬಜೆಟ್‌ ಸಿನಿಮಾಗಳನ್ನು ಮುಂದಕ್ಕೆ ಹಾಕಿದ್ದಾರೆ ಬಾಲಿವುಡ್‌ ಮಂದಿ. 'ಕೆಜಿಎಫ್‌' ಚಾಪ್ಟರ್‌ 2 ಎದುರು ಬರೋದಕ್ಕೆ ದೊಡ್ಡ ದೊಡ್ಡ ಚಿತ್ರಗಳು ಕೂಡ ಹಿಂದೆ-ಮುಂದೆ ನೋಡುವಾಗಲೇ ಹಿಂದಿ ಸಿನಿಮಾ 'ಜರ್ಸಿ' ಹಾಗೂ ತಮಿಳು ಸಿನಿಮಾ 'ಬೀಸ್ಟ್‌' ರಿಲೀಸ್‌ ಆಗುತ್ತಿವೆ. ಈ ಕುರಿತು ಮಾತನಾಡಿರುವ ಬಾಲಿವುಡ್‌ ನಟ ಹಾಗೂ 'ಜರ್ಸಿ' ಸಿನಿಮಾ ನಾಯಕ ಶಾಹಿದ್‌ ಕಪೂರ್‌, ನಮಗೆ 'ಕೆಜಿಎಫ್‌-2' ಎದುರಾಳಿ ಅಲ್ಲ ಎಂದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.

ಇದನ್ನೂ ಓದಿ: ‘ಅಧಿಕಾರವಿಲ್ಲದೆ ನಿರುದ್ಯೋಗಿಯಾಗಿರುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’

ಫ್ಯಾಮಿಲಿ ಕಥೆ..!

'ಕೆಜಿಎಫ್‌-2' ರಿಲೀಸ್‌ ಬಗ್ಗೆ ಪ್ರತಿಕ್ರಿಯೆ ನೀಡರುವ ಬಾಲಿವುಡ್‌ ನಟ ಶಾಹಿದ್‌ ಕಪೂರ್‌, 'ಜರ್ಸಿ' ಫ್ಯಾಮಿಲಿ ಸ್ಟೋರಿ ಹೊಂದಿದೆ. ಹಾಗೇ 'ಕೆಜಿಎಫ್‌-2' ಹಾಗೂ 'ಬೀಸ್ಟ್‌' ಸಿನಿಮಾಗಳು ನಮ್ಮ ಕಥೆಗಿಂತ ಭಿನ್ನವಾಗಿವೆ. ಜೊತೆಗೆ 'ಜರ್ಸಿ' ಉತ್ತರ ಭಾರತದ ಸಿನಿಮಾ ಆಗಿರುವ ಕಾರಣ ಯಾವುದೇ ಸಮಸ್ಯೆ ಇಲ್ಲ. ಹಾಗೇ ಈ ಹಿಂದೆ ಕೂಡ ಹಲವು ಬಿಗ್‌ ಬಜೆಟ್‌ ಸಿನಿಮಾಗಳು ಒಟ್ಟಿಗೆ ರಿಲೀಸ್‌ ಆಗಿ ಗೆದ್ದಿವೆ ಎಂದು ಉದಾಹರಣೆ ನೀಡಿದ್ದಾರೆ ನಟ ಶಾಹಿದ್‌ ಕಪೂರ್‌.

ಇದನ್ನೂ ಓದಿ: "ದುಡ್ಡು ಹಾಳಾದ್ರೆ ಹೇಗೋ ಸಂಪಾದಿಸಬಹುದು, ಆದರೆ ವ್ಯಕ್ತಿತ್ವವನ್ನು ಹೇಗೆ ಸಂಪಾದಿಸೋದು?" ಅದಿತಿ ಹೀಗೆ ಹೇಳಿದ್ದೇಕೆ? 

'ಜರ್ಸಿ' ಚಿತ್ರದಲ್ಲಿ ನಟ ಶಾಹಿದ್‌ ಕಪೂರ್‌ ಕ್ರಿಕೆಟ್‌ ಕಥೆ ಹೇಳಲು ಹೊರಟಿದ್ದು, ಮತ್ತೊಂದ್ಕಡೆ ಬಿಗ್‌ ಬಜೆಟ್‌ ಸಿನಿಮಾಗಳು ಜರ್ಸಿ ಎದುರು ರಿಲೀಸ್‌ ಆಗುತ್ತಿವೆ. ಇದು ಬಾಕ್ಸ್‌ ಆಫಿಸ್‌ ಫೈಟ್‌ಗೆ ದಾರಿ ಮಾಡಿ ಕೊಡುತ್ತಾ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಎದುರಾಗಿದೆ. ತಮಿಳು ಸಿನಿಮಾ 'ಬೀಸ್ಟ್‌' ಏಪ್ರಿಲ್‌ 13ಕ್ಕೆ ರಿಲೀಸ್‌ ಆದರೆ, ಮರುದಿನ ಅಂದರೆ ಏಪ್ರಿಲ್‌ 14ಕ್ಕೆ 'ಕೆಜಿಎಫ್‌-2' ರಿಲೀಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News