KGF 2 Box Office Collection : ಗಲ್ಲಾಪೆಟ್ಟಿಗೆಯಲ್ಲಿ ನಿಲ್ಲುತ್ತಿಲ್ಲ ರಾಕಿ ಭಾಯ್ ಕಲೆಕ್ಷನ್ ಹವಾ!
ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲೂ ರಾಕಿ ಭಾಯ್ ಸೆಲೆಬ್ರೇಷನ್ ಜೋರಾಗೆ ಮುಂದುವರೆಯುತ್ತಿದೆ. ಇದೀಗ `ಕೆಜಿಎಫ್ 2` ಚಿತ್ರದ ಕಲೆಕ್ಷನ್ ಬಗ್ಗೆ ಹೊಸ ಮಾಹಿತಿಯೊಂದು ಹೊರಬಿದ್ದಿದೆ.
KGF Chapter 2 Box Office Collection : 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಿಡುಗಡೆಯಾಗಿ ಸುಮಾರು 42 ದಿನಗಳು ಕಳೆದರೂ ಬಾಕ್ಸ್ ಆಫೀಸ್ ನಲ್ಲಿ ಅದರ ಕಲೆಕ್ಷನ್ ಹವಾ ನಿಲ್ಲುತ್ತಿಲ್ಲ. ಪ್ರತಿದಿನ ಈ ಸಿನಿಮಾ ಗಳಿಕೆ ಮಾಡುತ್ತಲೆ ಇದೆ. ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲೂ ರಾಕಿ ಭಾಯ್ ಸೆಲೆಬ್ರೇಷನ್ ಜೋರಾಗೆ ಮುಂದುವರೆಯುತ್ತಿದೆ. ಇದೀಗ 'ಕೆಜಿಎಫ್ 2' ಚಿತ್ರದ ಕಲೆಕ್ಷನ್ ಬಗ್ಗೆ ಹೊಸ ಮಾಹಿತಿಯೊಂದು ಹೊರಬಿದ್ದಿದೆ.
ವಿಶ್ವಾದ್ಯಂತ ಕೋಟಿ ಕೋಟಿ ಬಾಚಿದ ಕೆಜಿಎಫ್ ಚಾಪ್ಟರ್ 2
ಕುತೂಹಲಕಾರಿಯಾದ ಸಂಗಾತಿಯಂದರೆ, 'ಕೆಜಿಎಫ್ ಚಾಪ್ಟರ್ 2' ಅನ್ನು OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆ ಮಾಡಲಾಗಿದೆ, ಆದರೂ ಜನ ಅದನ್ನು ಚಿತ್ರಮಂದಿರಗಳಲ್ಲಿ ನೋಡಲು ಇಷ್ಟ ಪಡುತ್ತಿದ್ದಾರೆ.
ಇದನ್ನೂ ಓದಿ : Shocking News: ನಟಿಯನ್ನು ಗುಂಡಿಕ್ಕಿ ಕೊಂದ ಉಗ್ರರು..!
ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ ಬ್ಯುಸಿನೆಸ್ ಅನಾಲಿಸ್ಟ್ ಮನೋಬಾಲಾ ವಿಜಯಬಾಲನ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ವಿಶ್ವಾದ್ಯಂತ 1229 ಕೋಟಿ ಕಲೆಕ್ಷನ್ ಮಾಡಿದೆ. ‘ಕೆಜಿಎಫ್ ಚಾಪ್ಟರ್ 2’ ಐದನೇ ವಾರದವರೆಗೆ 1210 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಆರನೇ ವಾರದಲ್ಲಿ ಸುಮಾರು 17 ಕೋಟಿ ರೂಪಾಯಿ ಗಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಜಯ್ ದೇವಗನ್ ನಟಿಸಿದ 'ರನ್‌ವೇ 34', ಟೈಗರ್ ಶ್ರಾಫ್ 'ಹೀರೋಪಂತಿ 2', ರಣವೀರ್ ಸಿಂಗ್ 'ಜಯೇಶ್‌ಭಾಯ್ ಜೋರ್ದಾರ್' ಮತ್ತು ಕಾರ್ತಿಕ್ ಆರ್ಯನ್ ನಟಿಸಿದ 'ಭೂಲ್ ಭುಲೈಯಾ 2' ದೊಡ್ಡ ದೊಡ್ಡ ಸಿನಿಮಾಗಳಿಗೆ ರಾಕಿ ಭಾಯ್ ಬಿಸಿ ತಟ್ಟಿದೆ.
ಇದನ್ನೂ ಓದಿ : "ವೀರ ಕಂಬಳ" ಚಿತ್ರಕ್ಕೆ ಕಥೆಯೇ ಹೀರೋ... ಸಿಹಿ ಸುದ್ದಿ ಕೊಟ್ಟ ರಾಜೇಂದ್ರ ಸಿಂಗ್ ಬಾಬು!
ಕೆಜಿಎಫ್ ಚಾಪ್ಟರ್ 2 ನಲ್ಲಿ ಸ್ಟಾರ್ ನಟರ ತಾರಾಗಣ
'ಕೆಜಿಎಫ್ ಚಾಪ್ಟರ್ 2' ಸಿನಿಮಾವನ್ನು ಪ್ರಶಾಂತ್ ನೀಲ್ ಚಿತ್ರದ ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತು ಪ್ರಕಾಶ್ ರಾಜ್ ಮುಂತಾದ ತಾರೆಯರು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಅವರು ವಿಲನ್ ಅಧೀರ ಪಾತ್ರದಲ್ಲಿ ನಟಿಸಿದ್ದು, ಸಾಕಷ್ಟು ಮೆಚ್ಚುಗೆ ಗಳಿಸಿದೆ. ಯಶ್ ಮತ್ತು ಪ್ರಶಾಂತ್ ನೀಲ್ ಶೀಘ್ರದಲ್ಲೇ 'ಕೆಜಿಎಫ್ ಚಾಪ್ಟರ್ 3' ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.