KGF 2 Booking: `ಕೆಜಿಎಫ್ 2` ಸಿನಿಮಾಗೆ ಬುಕ್ಕಿಂಗ್ ಆರಂಭ.. ದಾಖಲೆ ಬರೆದ ಯಶ್ ಸಿನಿಮಾ
KGF 2 Booking: ಸಿನಿಮಾದ ಟ್ರೇಲರ್, ಸಾಂಗ್, ಟೀಸರ್ ಎಲ್ಲವೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ಕೆಜಿಎಫ್2 ಸಿನಿಮಾ ತಂಡ ದಿನದಿಂದ ದಿನಕ್ಕೆ ಪ್ರಚಾರದ ವೇಗವನ್ನು ಹೆಚ್ಚಿಸುತ್ತಲೇ ಇದೆ. ಟ್ರೇಲರ್ ರಿಲೀಸ್ ಆದ ಬಳಿಕ ದಾಖಲೆ ಬರೆದಿದ್ದ ಕೆಜಿಎಫ್ ಚಾಪ್ಟರ್ 2, ಇದೀಗ ಟಿಕೆಟ್ ಬುಕಿಂಗ್ ವಿಚಾರದಲ್ಲಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ.
ಎಲ್ಲೆಲ್ಲೂ ಸದ್ಯ ಕೆಜಿಎಫ್2 (KGF Chapter 2) ಹವಾ ಬಲು ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ಕೆಲವೇ ಕೆಲವು ದಿನಗಳು ಬಾಕಿ ಇವೆ. ಈ ಕಾರಣಕ್ಕೆ ಇಡೀ ಚಿತ್ರತಂಡ ಉತ್ತರ ಭಾರತದಿಂದ ಭರ್ಜರಿ ಪ್ರಚಾರ ಆರಂಭಿಸುತ್ತಿದೆ.
ಇದನ್ನೂ ಓದಿ: ತಮ್ಮನ್ನು ಬದಲಿಸಿದ ವ್ಯಕ್ತಿಯ ಬಗ್ಗೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹೇಳಿದ್ದೇನು ಗೊತ್ತೇ?
ಸಿನಿಮಾದ ಟ್ರೇಲರ್, ಸಾಂಗ್, ಟೀಸರ್ ಎಲ್ಲವೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿವೆ. ಕೆಜಿಎಫ್2 ಸಿನಿಮಾ ತಂಡ ದಿನದಿಂದ ದಿನಕ್ಕೆ ಪ್ರಚಾರದ ವೇಗವನ್ನು ಹೆಚ್ಚಿಸುತ್ತಲೇ ಇದೆ. ಟ್ರೇಲರ್ (KGF 2 Trailer) ರಿಲೀಸ್ ಆದ ಬಳಿಕ ದಾಖಲೆ ಬರೆದಿದ್ದ ಕೆಜಿಎಫ್ ಚಾಪ್ಟರ್ 2, ಇದೀಗ ಟಿಕೆಟ್ ಬುಕಿಂಗ್ ವಿಚಾರದಲ್ಲಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ.
ಕನ್ನಡ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ನೋಡಲು ಇಡೀ ವಿಶ್ವವೇ ಕಾದು ಕೂತಿದೆ. ಬಿಡುಗಡೆಗೂ ಮೊದಲೇ ಕೆಜಿಎಫ್ 2 ಸಿನಿಮಾ ಹೊಸ ದಾಖಲೆ ಮಾಡಿದೆ. ಕೇವಲ 12 ಗಂಟೆಯಲ್ಲಿ ಈ ಚಿತ್ರದ ಟಿಕೆಟ್ಗಳು ಖರೀದಿಯಾಗಿವೆ.
ಹೀಗಾಗಿ ಚಿತ್ರತಂಡ ಮೊದಲು ಎಲ್ಲಿ ಬುಕ್ಕಿಂಗ್ ಶುರು ಮಾಡುತ್ತೆ ಎಂದು ಅಭಿಮಾನಿಗಳು (Yash Fans) ಕಾತುರದಿಂದ ಕಾಯುತ್ತಿದ್ದಾರೆ. ಈ ಅವಕಾಶ ಮೊದಲು ಯುಕೆ ಸಿನಿಪ್ರಿಯರಿಗೆ ಸಿಕ್ಕಿದೆ. ಯುಕೆ ವಿತರಕರು ಈಗಾಗಲೇ ಸಿನಿಮಾ ಬುಕ್ಕಿಂಗ್ ಆರಂಭ ಮಾಡಿದ್ದಾರೆ. ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಿದ್ದಂತೆ ದಾಖಲೆಯ ಮಟ್ಟದಲ್ಲಿ ಸೇಲ್ ಆಗಿವೆ.
ಇದನ್ನೂ ಓದಿ: 'ವಿಕ್ರಾಂತ್ ರೋಣ' ಟೀಸರ್ಗೆ ಬಾಲಿವುಡ್ ನಟ ರಿತೇಶ್ ದೇಶ್ಮುಖ್ ಫುಲ್ ಖುಷ್..!
ಯುಕೆ ವಿತರಕರು 'ಕೆಜಿಎಫ್ 2' (KGF 2 ticket booking) ಸಿನಿಮಾ ಬಿಡುಗಡೆಗೆ ಇನ್ನೂ 11 ದಿನಗಳು ಬಾಕಿ ಇರುವಾಗಲೇ ಟಿಕೆಟ್ ಬುಕಿಂಗ್ ಶುರುಮಾಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜನರು ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ. ಕೇವಲ 12 ಗಂಟೆಯಲ್ಲಿ ವಿದೇಶದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ. ಇದು ಕನ್ನಡ ಸಿನಿಮಾ ಮಟ್ಟಿಗೆ ದಾಖಲೆ ಎಂದೇ ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ