ಬೆಂಗಳೂರು: ಏಪ್ರಿಲ್ 14 ರಂದು ಯಶ್ ಅಭಿನಯದ ಕೆಜಿಎಫ್ 2 ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ ನಲ್ಲಿ ಎಲ್ಲಾ ದಾಖಲೆಯನ್ನು ಧೂಳಿಪಟ ಮಾಡುತ್ತಿದೆ.ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ಈಗ ದೇಶದ ಎಲ್ಲಾ ಭಾಗಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ.ಆ ಮೂಲಕ ಈ ವಾರಾಂತ್ಯದ ಹೊತ್ತಿಗೆ ಹೊಸ ದಾಖಲೆಯನ್ನು ನಿರ್ಮಿಸಲು ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೆಜಿಎಫ್ 2 ಸುನಾಮಿಗೆ ಬೆಚ್ಚಿದ ಬಾಲಿವುಡ್...!


ದೇಶದ ಬಹುತೇಕ ಭಾಗಗಳಲ್ಲಿ ಈ ಸಿನಿಮಾವದ ಪ್ರದರ್ಶನಗಳ ಸಂಖ್ಯೆಯನ್ನು ವಿತರಕರು ಹೆಚ್ಚಿಸಲು ಮುಂದಾಗಿದ್ದಾರೆ.ಹಿಂದಿ ಆವೃತ್ತಿಯಲ್ಲಂತೂ ಈ ಸಿನಿಮಾ ಕೇವಲ ಎರಡೇ ದಿನಗಳಲ್ಲಿ 100 ಕೋಟಿ ರೂ ಗಳಿಸಿದ ಕೀರ್ತಿಗೆ ಪಾತ್ರವಾಗಿದೆ.ಆ ಮೂಲಕ ಈ ಸಾಧನೆಯನ್ನು ಮಾಡಿದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್ 2 ಚಿತ್ರ ಪಾತ್ರವಾಗಿದೆ.


ಕೆಜಿಎಫ್‌-2 ಗೆ ತಲೈವಾ ಫಿದಾ...ದೇಶಾದ್ಯಂತ ನಟ ನಟಿಯರಿಂದ ಪ್ರಶಂಸೆಯ ಸುರಿಮಳೆ..!


ಬಾಕ್ಸ್ ಆಫೀಸ್ ಇಂಡಿಯಾದ ವರದಿಯ ಪ್ರಕಾರ, ಚಿತ್ರದ ಹಿಂದಿ ಆವೃತ್ತಿಯು ಮೂರನೇ ದಿನಕ್ಕೆ 42.9 ಕೋಟಿ ಗಳಿಸುವ ಮೂಲಕ ಹಿಂದಿ ಭಾಷೆಯೊಂದರಲ್ಲೇ ಈ ಕೆಜಿಎಫ್ 2 ಬರೋಬ್ಬರಿ 143 ಕೋಟಿ ರೂಗಳಿಸಿದೆ.ಈ ವಾರಾಂತ್ಯದ ವೇಳೆಗೆ ಚಿತ್ರವು 180 ಕೋಟಿ ರೂಪಾಯಿ ಗಡಿ ದಾಟುವ ನಿರೀಕ್ಷೆ ಇದೆ.ಈ ಚಿತ್ರದ ಹವಾ ಕೇವಲ ಭಾರತೀಯ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿಲ್ಲ ವಿದೇಶಗಳಲ್ಲಿಯೂ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ.ಸಿನಿ ಮಾರುಕಟ್ಟೆ ವಿಶ್ಲೇಷಕ ಮನೋಬಾಲಾ ಅವರು ಈ ಚಿತ್ರ ಕೇವಲ ಮೂರು ದಿನಗಳಲ್ಲಿ ವಿಶ್ವಾದಾದ್ಯಂತ 419 ಕೋಟಿ ರೂ ಕಲೆಕ್ಷನ್ ಮಾಡಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಕೆಜಿಎಫ್ 2 ಚಿತ್ರವು ರಾಕಿಭಾಯ್ ಕೋಲಾರ ಗೋಲ್ಡ್ ಫೀಲ್ಡ್ಸ್ ಅನ್ನು ತನ್ನ ಸ್ವಾಧೀನಕ್ಕೆ ವಶಪಡಿಸಿಕೊಂಡ ನಂತರದ ಕಥೆಯನ್ನು ಅನುಸರಿಸುತ್ತಿದೆ.ಈ ಚಿತ್ರವು ಎಲ್ಲ ವಿಭಾಗಳಲ್ಲಿಯೂ ಶ್ರೀಮಂತವಾಗಿರುವ ಕಾರಣ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ ಮತ್ತು ರವೀನಾ ಟಂಡನ್ ನಟಿಸಿದರೆ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್, ಜಾನ್ ಕೊಕ್ಕೆನ್ ಮತ್ತು ಸರಣ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.