ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾ ಎರಡು ದಿನಗಳಲ್ಲಿ ಅಭೂತ ಪೂರ್ವ ₹300 ಕೋಟಿ ಗಳಿಸಿದೆ.ಗುರುವಾರದಂದು ಬಿಡುಗಡೆಯಾದ ಈ ಚಿತ್ರ ಹಿಂದಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.ಇದರ ಹಿಂದಿ ಆವೃತ್ತಿಯೂ ₹100 ಕೋಟಿ ಗಳಿಸಿದೆ.ಈ ಕುರಿತಾಗಿ ಚಲನಚಿತ್ರ ವ್ಯಾಪಾರ ವಿಶ್ಲೇಷಕ ಮನೋಬಾಲಾ ಶನಿವಾರದಂದು ಅಂಕಿ-ಅಂಶಗಳನ್ನು ಟ್ವೀಟ್ ಮಾಡಿದ್ದಾರೆ.
ಕೆಜಿಎಫ್ 2 ಅಭೂತಪೂರ್ವ ಎನ್ನುವಂತೆ ಹಿಂದಿ ಮಾರುಕಟ್ಟೆಯಲ್ಲಿ ಎರಡು ದಿನಗಳಲ್ಲಿ ಕ್ರಮವಾಗಿ 53.95 ಕೋಟಿ, 46.79 ಕೋಟಿ ರೂ ದಂತೆ ಒಟ್ಟು: ₹ 100.74 ಕೋಟಿ," ಗಳಿಸಿದೆ.ವಿಶ್ವದಾದ್ಯಂತ ಕೇವಲ ಎರಡು ದಿನಗಳಲ್ಲಿ 300 ಕೋಟಿ ರೂ ಗಳಿಸಿದೆ.
ಇದನ್ನೂ ಓದಿ : 'ಕೆಜಿಎಫ್-2' ಹಾಡಿಗೆ ಫ್ಯಾನ್ಸ್ ಫಿದಾ..! ಎಷ್ಟಾಯ್ತು ಗೊತ್ತಾ ವೀವ್ಸ್..?
#KGFChapter2 WW Box Office
ENTERS the PRESTIGIOUS ₹300 cr club in just 2 days.
Day 1 - ₹ 165.37 cr
Day 2 - ₹ 139.25 cr
Total - ₹ 304.62 crEXCELLENT HOLD.
In many circuits Day 2 fetched more than Day 1.#Yash #KGF2
— Manobala Vijayabalan (@ManobalaV) April 16, 2022
ಕೆಜಿಎಫ್: ಚಾಪ್ಟರ್ 2 ರಾಕಿ (ಯಶ್) ಎಂಬ ಅನಾಥ ವ್ಯಕ್ತಿ ಬಡತನದಿಂದ ಚಿನ್ನದ ಗಣಿಯ ರಾಜನಾಗುವ ಕಥೆಯನ್ನು ಈ ಚಿತ್ರವೂ ಹೇಳುತ್ತದೆ.ಈ ಚಿತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ.
#KGF2 [#Hindi] is a TSUNAMI... Hits the ball out of the stadium on Day 2... Trending better than ALL event films, including #Baahubali2 and #Dangal... Eyes ₹ 185 cr [+/-] in its *extended 4-day weekend*... Thu 53.95 cr, Fri 46.79 cr. Total: ₹ 100.74 cr. #India biz. OUTSTANDING. pic.twitter.com/nZZnYxe8vH
— taran adarsh (@taran_adarsh) April 16, 2022
ಕೆಜಿಎಫ್ ಚಿತ್ರದ ಯಶಸ್ಸು ಯಾವುದೇ ಗಡಿಗಳಿಗೆ ಸೀಮಿತವಾಗಿಲ್ಲ, ದೇಶದ ಎಲ್ಲಾ ಭಾಗಗಳಲ್ಲಿಯೂ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಪ್ರಮಾಣದಲ್ಲಿ ಕಲೆಕ್ಷನ್ ಮಾಡುತ್ತಿದೆ.ಈ ಚಿತ್ರವನ್ನು ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಮತ್ತು ಎಎ ಫಿಲ್ಮ್ಸ್ಮೂಲಕ ಚಿತ್ರವನ್ನು ಉತ್ತರ-ಭಾರತದ ಮಾರುಕಟ್ಟೆಗಳಲ್ಲಿ ಪ್ರಸ್ತುತಪಡಿಸಿದೆ.ಇದು ದಿಲ್ ಚಾಹತಾ ಹೈ, ಜಿಂದಗಿ ನಾ ಮಿಲೇಗಿ ದೊಬಾರಾ, ದಿಲ್ ಧಡಕ್ನೆ ದೋ, ಮತ್ತು ಗಲ್ಲಿ ಬಾಯ್ ಮುಂತಾದ ಸೂಪರ್ ಹಿಟ್‌ಗಳನ್ನು ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.