ಬೆಂಗಳೂರು: ಯಶ್ ಅಭಿನಯದ 'ಕೆಜಿಎಫ್: 2' ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಪ್ರತಿ ದಿನವೂ ಹೊಸ ದಾಖಲೆಯನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ, ಅಷ್ಟರ ಮಟ್ಟಿಗೆ ಈ ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.ಈ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲಿಯೇ 720.31 ಕೋಟಿ ಗಳಿಸಿ ದೇಶಾದ್ಯಂತ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು.ಅದರ ಎರಡನೇ ವಾರದಲ್ಲಿ, ಇದು ಶುಕ್ರವಾರದ ವೇಳೆಗೆ ರೂ 776.58 ಕೋಟಿ ಗಳಿಸಿತು.ಈಗ ಈ ಸಿನಿಮಾ ಭಾನುವಾರದಂತ್ಯಕ್ಕೆ 800 ಕೋಟಿ.ರೂ ಅನ್ನು ದಾಟಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸಿನಿಮಾ ಮಾರುಕಟ್ಟೆ ವಿಶ್ಲೇಷಕ ಮನೋಬಾಲಾ ವಿಜಯ್ ಬಾಲನ್ ಅವರು ಈ ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಈಗ ಕೆಜಿಎಫ್ 2 ಚಿತ್ರವು 800 ಕೋಟಿ.ರೂ ಕ್ಲಬ್ ಸೇರುವ ಮೂಲಕ ಈ ಸಾಧನೆ ಮಾಡಿರುವ ಭಾರತದ ಏಳನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಈಗಿನ ಈ ಚಿತ್ರದ ಟ್ರೆಂಡ್ ನೋಡಿದರೆ.ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾ 1000 ಕ್ಲಬ್ ನ್ನು ಸುಲಭವಾಗಿ ಸೇರಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.


ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕಾರಣ ಹೊರತು ಕಾಂಗ್ರೆಸ್ ಅಲ್ಲ: ಡಿ.ಕೆ. ಶಿವಕುಮಾರ್


ಈ ಚಿತ್ರದ ಯಶಸ್ಸಿನ ನಂತರ ಯಶ್ ಅವರು ಎಲ್ಲಾ ಅಭಿಮಾನಿಗಳು ತೋರುತ್ತಿರುವ ಪ್ರೀತಿಗೆ ವಿಡಿಯೋ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದರು.ಇದರಲ್ಲಿ ಅವರು "ಇಡೀ ಕೆಜಿಎಫ್ ತಂಡದ ಪರವಾಗಿ ನಾನು ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.ನೀವು ಚಿತ್ರವನ್ನು ಆನಂದಿಸುತ್ತಿದ್ದೀರಿ ಮತ್ತು ಅದನ್ನು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಂತಿಮವಾಗಿ, ನಿಮ್ಮ ಹೃದಯವೇ ನನ್ನ ಟೆರಿಟರಿ ಎಂದು ನಾನು ಹೇಳಲು ಬಯಸುತ್ತೇನೆ! ಎಂದು ಹೇಳಿದ್ದರು. Today Petrol price : ವಾಹನ ಸವಾರರೆ ಗಮನಕ್ಕೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ, ನಿಮ್ಮ ನಗರದ ಬೆಲೆ ಇಲ್ಲಿ ಪರಿಶೀಲಿಸಿ


ಈಗಾಗಲೇ ಈ ಚಿತ್ರದ ಯಶಸ್ಸಿಗೆ ದೇಶ ಪ್ರಮುಖ ನಟರೆಲ್ಲರೂ ವಿಮರ್ಶಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.ತೆಲುಗು ನಟರಾದ ಜೂನಿಯರ್ ಎನ್ ಟಿಆರ್,ರಾಮ್ ಚರಣ್ ಅವರು ಕೆಜಿಎಫ್ ಚಿತ್ರ ದಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಇನ್ನೊಂದೆಡೆಗೆ ಬಾಲಿವುಡ್ ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಜಿಎಫ್ ಚಿತ್ರವು ಮುಂಬರುವ ದಿನಗಳಲ್ಲಿ ಬಾಲಿವುಡ್ ನಿರ್ದೇಶಕರಿಗೆ ನಿದ್ದೆಗೆಡಿಸುವಂತೆ ಮಾಡಲಿದೆ ಎಂದು ಹೇಳಿದ್ದರು.


'ಕೆಜಿಎಫ್: 2 ಚಿತ್ರವು ಏಪ್ರಿಲ್ 14, 2022 ರಂದು ರಾಷ್ಟ್ರವ್ಯಾಪಿ ಬಿಡುಗಡೆಯಾಗಿದ್ದು, ಈಗಾಗಲೇ ಈ ಚಿತ್ರವುಹಲವಾರು ಹೊಸ ದಾಖಲೆಗಳನ್ನು ಬರೆದಿದೆ.ಆ ಮೂಲಕ ಕನ್ನಡದ ಸಿನಿಮಾವೊಂದು ಈಗ ಜಾಗತಿಕವಾಗಿ ಸದ್ದು ಮಾಡುತ್ತಿದೆ.


ಇದನ್ನೂ ಓದಿ : Airbag in Two Wheelers: ಈಗ ದ್ವಿಚಕ್ರ ವಾಹನಗಳಲ್ಲೂ ಏರ್‌ಬ್ಯಾಗ್‌ನ ವೈಶಿಷ್ಟ್ಯ ಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.