ಮುಂಬೈ: ವಿಶ್ವದಾದ್ಯಂತ ಕೆಜಿಎಫ್ 2 ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ನಾಗಲೋಟದಲ್ಲಿ ಮುನ್ನುಗುತ್ತಿದೆ, ಆ ಮೂಲಕ ಭಾರತೀಯ ಸಿನಿ ಜಗತ್ತಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ಚಿತ್ರದ ಯಶಸ್ಸಿನ ಬಗ್ಗೆ ಸಂತಸಗೊಂಡಿರುವ ಬಾಲಿವುಡ್ ನ ಹಿರಿಯ ನಟ ಸಂಜಯ್ ದತ್ ಈಗ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡ ತಮ್ಮ ಅಧೀರಾ ಪಾತ್ರದ ಮೂಲಕ ಕೆಜಿಎಫ್ 2 ಚಿತ್ರಕ್ಕೆ ಎಂಟ್ರಿಕೊಟ್ಟ ಸಂಜಯ್ ದತ್ ತಮ್ಮ ಕಡಕ್ ಲುಕ್ ನಿಂದ ಪ್ರೇಕ್ಷಕರನ್ನು ಗಮನ ಸೆಳೆಯುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ:ಅಣ್ಣಾವ್ರ ಹುಟ್ಟುಹಬ್ಬ ಹಿನ್ನೆಲೆ : ಮಹಾತ್ಕಾರ್ಯಕ್ಕೆ ಮುಂದಾದ ಅಶ್ವಿನಿ


ಈಗ ಚಿತ್ರವು ಜಗತ್ತಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನಲೆಯಲ್ಲಿ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿರುವ ಸಂಜಯ್ ದತ್ ಅವರು "ಕೆಲವು ಚಲನಚಿತ್ರಗಳು ಯಾವಾಗಲೂ ಇತರ ಚಿತ್ರಗಳಿಗಿಂತ ಹೆಚ್ಚು ವಿಶೇಷವಾದವುಗಳಾಗಿವೆ. ಪ್ರತಿ ಬಾರಿ, ನಾನು ನನ್ನ ಕಂಫರ್ಟ್ ಝೋನ್‌ನಿಂದ ನನ್ನನ್ನು ತಳ್ಳುವ ಚಲನಚಿತ್ರವನ್ನು ಹುಡುಕುತ್ತೇನೆ.ಅಂತಹ ಚಿತ್ರವಾಗಿ ನನಗೆ ಕೆಜಿಎಫ್ 2 ಚಿತ್ರವು ಒಲಿದಿತ್ತು, ಅದು ನಂಗೆ ನನಗೆ ನನ್ನ ಸ್ವಂತ ಸಾಮರ್ಥ್ಯ ಮತ್ತು ಅದನ್ನು ಉತ್ಸಾಹಪೂರಕವಾಗಿ ಮಾಡಬಹುದು ಎನ್ನುವುದನ್ನು ನೆನಪಿಸಿತು.ಇನ್ನೂ ಕೊನೆಯದಾಗಿ ಸಿನಿಮಾ ಉತ್ಸಾಹದ ಉತ್ಪನ್ನವಾಗಿರುವುದೇಕೆ ಎನ್ನುವುದನ್ನು ಅರಿತುಕೊಳ್ಳುವಂತೆ ಮಾಡಿತು. ಪ್ರತಿ ಬಾರಿ ಜೀವನವು ಆಶ್ಚರ್ಯಕರವಾದಾಗ, ಅದಕ್ಕಿಂತ ಉತ್ತಮವಾಗಿ ಮಾಡಲು ನಿಮ್ಮಲ್ಲಿ ಸಾಮಾರ್ಥ್ಯವಿದೆ ಎಂದು ಚಲನಚಿತ್ರವು ಯಾವಾಗಲೂ ನೆನಪಿಸುತ್ತದೆ.ನನ್ನ ಅಭಿಮಾನಿಗಳು, ಕುಟುಂಬ ಮತ್ತು ಹಿತೈಷಿಗಳಿಗೆ ಪ್ರೀತಿಯ ವಂದನೆಗಳು.ಅವರೆಲ್ಲರೂ ಕೂಡ ನನಗೆ ಒಂದು ರೀತಿ ನನ್ನ ಶಕ್ತಿಯ ಆಧಾರಸ್ತಂಭಗಳಾಗಿದ್ದರು."ಎಂದು ಬರೆದುಕೊಂಡಿದ್ದಾರೆ. 


ಈ ನಟಿ ಜೊತೆಗಿನ ರೋಮ್ಯಾನ್ಸ್ ವಿಚಾರದಲ್ಲಿ ಸುದ್ದಿಯಾದ ಹೃತಿಕ್ ರೋಶನ್...!


ಈಗ ಸಂಜಯ್ ದತ್ ಅವರು ಅವರು ರಣಬೀರ್ ಕಪೂರ್ ಮತ್ತು ವಾಣಿ ಕಪೂರ್ ಅವರೊಂದಿಗೆ ಶಂಶೇರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಅಷ್ಟೇ ಅಲ್ಲದೆ ಅವರು ಅಕ್ಷಯ್ ಕುಮಾರ್, ಸೋನು ಸೂದ್ ಮತ್ತು ಮಾನುಷಿ ಛಿಲ್ಲರ್ ಅವರೊಂದಿಗೆ ಪೃಥ್ವಿರಾಜ್ ಚಿತ್ರದಲ್ಲಿ ನಟಿಸಲಿದ್ದಾರೆ.ಸಂಜಯ್ ದತ್ ವೃತ್ತಿಜೀವನಕ್ಕೆ ಬಹುದೊಡ್ಡ ಯಶಸ್ಸು ತಂದುಕೊಟ್ಟ 'ಕೆಜಿಎಫ್-2' ಮೇಕಿಂಗ್ ಕಂಡು ಪ್ರತಿಯೊಬ್ಬ ಪ್ರೇಕ್ಷಕರು ವಾವ್ಹ್ ಎಂದಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಈಗ ಕೆಜಿಎಫ್ 2 ಚಿತ್ರಕ್ಕೆ ತಲೆಬಾಗಿದೆ.ಒಂದು ಕಾಲದಲ್ಲಿ 100 ಕೋಟಿ ರೂ.ಗಳಿಸುವಲ್ಲಿ ಕಷ್ಟಪಡಬೇಕಾಗಿದ್ದ ಕನ್ನಡ ಸಿನಿಮಾ ಈಗ ಕೆಜಿಎಫ್ ಚಿತ್ರದ ಮೂಲಕ 1000 ಕೋಟಿ ರೂ.ಗಳಿಸುವತ್ತ ಮುನ್ನುಗುತ್ತಿದೆ.