'ಕೆಜಿಎಫ್‌' ಸಿನಿಮಾ ಟೀಂ ಏನನ್ನೇ ಅಪ್‌ಡೇಟ್‌ ಮಾಡಿದ್ರೂ ಅದೀಗ ದೊಡ್ಡ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದೆ. ಅದು ಟ್ರೇಲರ್‌ ಆಗಿರಲಿ, ಸಾಂಗ್‌ ಆಗಿರಲಿ. 'ಕೆಜಿಎಫ್‌' ಬಗ್ಗೆ ಏನೇ ಸುದ್ದಿ ಬಂದರೂ ಟ್ರೆಂಡ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಇದೇ ರೀತಿ ನಿನ್ನೆ ರಿಲೀಸ್‌ ಆಗಿದ್ದ 'ಕೆಜಿಎಫ್‌' ಚಾಪ್ಟರ್‌ 2 ಸಿನಿಮಾದ 2ನೇ ಹಾಡು ಎಲ್ಲೆಲ್ಲೂ ವೈರಲ್‌ ಆಗುತ್ತಿದೆ. ಅಮ್ಮನಿಗಾಗಿ ಬರೆದಿರುವ 'ಗಗನ ನೀ' ಮದರ್‌ ಸೆಂಟಿಮೆಂಟ್‌ ಸಾಂಗ್‌ ಜಗತ್ತಿನಾದ್ಯಂತ ವೈರಲ್‌ ಆಗುತ್ತಿದೆ.


'ಕೆಜಿಎಫ್‌' ಚಾಪ್ಟರ್‌ 2 ಸಿನಿಮಾ ಇನ್ನೇನು ತೆರೆಗೆ ಅಪ್ಪಳಿಸಲಿದೆ.  'ಕೆಜಿಎಫ್‌' ಚಾಪ್ಟರ್‌ 1 ಕಣ್ತುಂಬಿಕೊಂಡಿದ್ದ ಕನ್ನಡಿಗರು ಹಾಗೂ ಜಗತ್ತಿನ ಪ್ರತಿಯೊಬ್ಬ ಸಿನಿಮಾ ಪ್ರೇಮಿಗೂ ಏಪ್ರಿಲ್‌ 14 ಎಂದೂ ಮರೆಯಲಾಗದ ದಿನ. ಯಾಕಂದ್ರೆ ಇದೇ ದಿನ  'ಕೆಜಿಎಫ್‌' ಚಾಪ್ಟರ್‌ 2 ಸಿಲ್ವರ್‌ ಸ್ಕ್ರೀನ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ. ಇದಕ್ಕೂ ಮೊದಲು ರಿಲೀಸ್‌ ಆಗುತ್ತಿರುವ  'ಕೆಜಿಎಫ್‌' ಚಾಪ್ಟರ್‌ 2 (KGF Chapter 2) ಸಿನಿಮಾದ ಸಾಂಗ್‌ಗಳು ಎಲ್ಲೆಲ್ಲೂ ವೈರಲ್‌ ಆಗುತ್ತಿವೆ. ಕೇಳುಗರಲ್ಲಿ ಭಾವನಾತ್ಮಕ ಬಂಧ ಸೃಷ್ಟಿಸುತ್ತಿವೆ.


ಇದನ್ನೂ ಓದಿ: 'ಕೆಜಿಎಫ್‌-2' ಟಿಕೆಟ್‌ ಯಾವಾಗ ಸಿಗುತ್ತೆ..? ಬುಕಿಂಗ್‌ ಬಗ್ಗೆ ಇಲ್ಲಿದೆ ಡೀಟೇಲ್ಸ್..!


10 ಮಿಲಿಯನ್‌ ವೀವ್ಸ್
ಅಂದಹಾಗೆ 'ಕೆಜಿಎಫ್‌' ಚಾಪ್ಟರ್‌ 2 ಹಾಡುಗಳ ಬಗ್ಗೆ ಹೇಳುವ ಮೊದಲು 'ಕೆಜಿಎಫ್‌' ಚಾಪ್ಟರ್‌ 1 ಸಾಂಗ್‌ ಬಗ್ಗೆ ಮಾತನಾಡಲೇಬೇಕು.ಯಾಕಂದ್ರೆ 'ಕೆಜಿಎಫ್‌' ಚಾಪ್ಟರ್‌ 1 ಹಾಡುಗಳು ಸೂಪರ್‌ ಹಿಟ್‌ ಆಗಿದ್ದವು. ಸಿನಿಮಾದಷ್ಟೇ ಸಾಂಗ್ಸ್‌ ಕೂಡ ಜನರನ್ನ ಹಿಡಿದಿಟ್ಟಿದ್ದವು. ಇದೀಗ 'ಕೆಜಿಎಫ್‌' ಚಾಪ್ಟರ್‌ 2 ಚಿತ್ರ ಕೂಡ ಇದೇ ರೀತಿ ತನ್ನ ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ.ನಿನ್ನೆ ತಾನೆ ರಿಲೀಸ್‌ ಆಗಿದ್ದ 'ಕೆಜಿಎಫ್‌' ಚಾಪ್ಟರ್‌ 2 ಸಿನಿಮಾದ 2ನೇ ಹಾಡು 'ಗಗನ ನೀ' ಮದರ್‌ ಸೆಂಟಿಮೆಂಟ್‌ ಸಾಂಗ್‌ ಎಲ್ಲೆಲ್ಲೂ ವೈರಲ್‌ ಆಗುತ್ತಿದೆ. ರಿಲೀಸ್‌ ಆದ ಒಂದೇ ದಿನದಲ್ಲಿ 10 ಮಿಲಿಯನ್‌ ವೀವ್ಸ್‌ ಗಡಿಯನ್ನ ದಾಟಿದೆ.


ಇದನ್ನೂ ಓದಿ: Career: ಅಮೃತ್ ಮುನ್ನಡೆ ಯೋಜನೆಯಡಿ ಉಚಿತ ಕೋರ್ಸ್ : ಅರ್ಜಿ ಆಹ್ವಾನ


ಭಾರತದ ಸಿನಿಮಾ ಅದರಲ್ಲೂ ಕನ್ನಡ ಸಿನಿಮಾ (Sandalwood) ಒಂದು ಇಡೀ ಜಗತ್ತು ತಿರುಗಿ ನೋಡುವಂತೆ ಮಾಡುತ್ತಿದೆ. 'ಕೆಜಿಎಫ್‌' ಚಾಪ್ಟರ್‌ 1 ಮೂಡಿಸಿದ್ದ ಹೈಪ್‌ನ 10 ಪಟ್ಟು ಹೆಚ್ಚು 'ಕೆಜಿಎಫ್‌' ಚಾಪ್ಟರ್‌ 2 ಮೂಡಿಸಿದೆ. ಈ ಮೂಲಕ ಮತ್ತೆ ಬ್ಲಾಕ್‌ ಬಸ್ಟರ್‌ ಸಿನಿಮಾ ನೀಡಲು 'ಕೆಜಿಎಫ್‌' ಟೀಂ ಸಜ್ಜಾಗಿದೆ. ಈ ನಡುವೆ ಶುಭಾರಂಭ ಎನ್ನುವಂತೆ ಮೊದಲಿಗೆ ತೂಫಾನ್‌ ಸಾಂಗ್‌ ಹಿಟ್‌ ಆಗಿತ್ತು. ಬಳಿಕ ರಿಲೀಸ್‌ ಆದ 'ಕೆಜಿಎಫ್‌' ಚಾಪ್ಟರ್‌ 2 ಟ್ರೈಲರ್‌ ಇವತ್ತಿಗೂ ದೊಡ್ಡ ಹೈಪ್‌ ಕ್ರಿಯೇಟ್‌ ಮಾಡುತ್ತಿದೆ. ಇದರ ಜೊತೆ ಜೊತೆಗೆ ನಿನ್ನೆ ರಿಲೀಸ್‌ ಮಾಡಲಾಗಿದ್ದ 'ಗಗನ ನೀ' ಮದರ್‌ ಸೆಂಟಿಮೆಂಟ್‌ ಸಾಂಗ್‌ ಕೇಳುಗರ ಕಣ್ಣಲ್ಲೀ ನೀರು ತರಿಸುತ್ತಿದೆ. ಭಾವನಾತ್ಮಕ ಬೆಸುಗೆ ಬೆಸೆಯುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.