'ಕೆಜಿಎಫ್‌-2' ಟಿಕೆಟ್‌ ಯಾವಾಗ ಸಿಗುತ್ತೆ..? ಬುಕಿಂಗ್‌ ಬಗ್ಗೆ ಇಲ್ಲಿದೆ ಡೀಟೇಲ್ಸ್..!

Written by - Malathesha M | Edited by - Manjunath N | Last Updated : Apr 7, 2022, 06:55 PM IST
  • 'ಕೆಜಿಎಫ್‌' ಚಾಪ್ಟರ್‌ 2 ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದರೆ, ಕನ್ನಡದ ಚಿತ್ರವೊಂದು ಜಗತ್ತಿನಾದ್ಯಂತ ದೊಡ್ಡ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.
'ಕೆಜಿಎಫ್‌-2' ಟಿಕೆಟ್‌ ಯಾವಾಗ ಸಿಗುತ್ತೆ..? ಬುಕಿಂಗ್‌ ಬಗ್ಗೆ ಇಲ್ಲಿದೆ ಡೀಟೇಲ್ಸ್..! title=

'ಕೆಜಿಎಫ್‌' ಚಾಪ್ಟರ್‌ 2 ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದರೆ, ಕನ್ನಡದ ಚಿತ್ರವೊಂದು ಜಗತ್ತಿನಾದ್ಯಂತ ದೊಡ್ಡ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಈಗ ಮತ್ತೊಂದು ದಾಖಲೆಗೂ 'ಕೆಜಿಎಫ್‌-2' ಚಾಪ್ಟರ್‌ 2 ಸಾಕ್ಷಿಯಾಗಿದ್ದು, ಟಿಕೆಟ್‌ ಪ್ರೀ ಬುಕಿಂಗ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಹಾಗಾದ್ರೆ ಡೇಟ್‌ಗೆ ಶುರುವಾಗುತ್ತೆ 'ಕೆಜಿಎಫ್‌-2' ಟಿಕೆಟ್‌ ಬುಕ್ಕಿಂಗ್‌ ಅನ್ನೋದರ ಡೀಟೇಲ್ಸ್‌ ಇಲ್ಲಿದೆ.

'ಕೆಜಿಎಫ್‌' ಚಾಪ್ಟರ್‌ 2 ಕನ್ನಡದ ಸಿನಿಮಾ ಎಂಬುದೇ ಕನ್ನಡಿಗರಿಗೆ ಹೆಮ್ಮೆ. ಹೀಗೆ 'ಕೆಜಿಎಫ್‌' ಚಾಪ್ಟರ್‌ 1 ದೊಡ್ಡ ಹಿಟ್‌ ಕಂಡ ಬಳಿಕ ಚಾಪ್ಟರ್‌ 2ಗೆ ಇಡೀ ಜಗತ್ತೇ ಕಾಯುತ್ತಿದೆ. ಇನ್ನೇನು 7 ದಿನಗಳಲ್ಲಿ 'ಕೆಜಿಎಫ್‌' ಚಾಪ್ಟರ್‌ 2 ಸಿಲ್ವರ್‌ ಸ್ಕ್ರೀನ್‌ ಮೇಲೆ ಘರ್ಜಿಸಲು ಶುರು ಮಾಡಲಿದೆ. ಈ ಹೊತ್ತಲ್ಲೇ ಅಭಿಮಾನಿಗಳು ಖುಷಿಪಡುವ ವಿಚಾರವೊಂದು ಹೊರ ಬಿದ್ದಿದೆ. ಅದೇನಪ್ಪ ಅಂದ್ರೆ, 'ಕೆಜಿಎಫ್‌-2 (KGF2)' ಟಿಕೆಟ್‌ ಬುಕಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ.

ಇದನ್ನೂ ಓದಿ: ಹಿಂದಿಯಲ್ಲಿ 'ರಾಕಿ'..! ಕನ್ನಡಕ್ಕಾಗಿ 'ಅಧೀರ'ನ ಪಾತ್ರ ಮಾಡಿದ ಸಂಜಯ್‌ ದತ್..!‌

ಟಿಕೆಟ್ ಬುಕಿಂಗ್ ಶುರು:

ಬಾಕ್ಸ್‌ ಆಫಿಸಲ್ಲಿ ಹೊಸ ದಾಖಲೆ ಬರೆಯಲು 'ಕೆಜಿಎಫ್‌-2' ಸಜ್ಜಾಗಿದ್ದು ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಇಷ್ಟೆಲ್ಲದರ ನಡುವೆ ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಏಪ್ರಿಲ್ 07 ರಿಂದಲೇ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಮತ್ತೊಂದು ಕಡೆ ಅಮೆರಿಕ ಸೇರಿದಂತೆ ಇತರೆ ಕೆಲ ದೇಶಗಳಲ್ಲಿ ಟಿಕೆಟ್ ಬುಕಿಂಗ್ ಏಪ್ರಿಲ್‌ 8ರಿಂದ ಶುರುವಾಗಲಿದೆ.

ಪ್ರೀ ಬುಕಿಂಗ್‌: 
ಇನ್ನು ಕರುನಾಡಲ್ಲಿ 'ಕೆಜಿಎಫ್ 2' ಸಿನಿಮಾದ ಟಿಕೆಟ್ ಪ್ರೀ ಬುಕಿಂಗ್ ಯಾವಾಗ ಶುರುವಾಗುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ 'ಕೆಜಿಎಫ್ 2' ಚಿತ್ರತಂಡ. ಅದೇನೆಂದರೆ ಯಶ್‌ ಅಭಿನಯದ, ಪ್ರಶಾಂತ್‌ ನೀಲ್‌ ನಿರ್ದೇಶನದ ಬಹುನಿರೀಕ್ಷಿತ  'ಕೆಜಿಎಫ್ 2' ಸಿನಿಮಾದ ಟಿಕೆಟ್‌ಗಳ ಪ್ರೀ ಬುಕಿಂಗ್‌ ಏಪ್ರಿಲ್ 10ರಿಂದ ಆರಂಭ ಆಗಲಿದ್ದು, ಕನ್ನಡಿಗರು ಏಪ್ರಿಲ್ 10ರಿಂದ 'ಕೆಜಿಎಫ್ 2' ಸಿನಿಮಾದ ಟಿಕೆಟ್‌ಗಳ ಪ್ರೀ ಬುಕಿಂಗ್‌ ಮಾಡಬಹುದಾಗಿದೆ.

ಇದನ್ನೂ ಓದಿ: KGF 2: ತೂಫಾನ್ ಬಳಿಕ ಮತ್ತೊಂದು ಲಿರಿಕಲ್‌ ಸಾಂಗ್‌ ರಿಲೀಸ್‌ ಮಾಡಿದ ಕೆಜಿಎಫ್‌2 ತಂಡ

ಕರ್ನಾಟಕ ಮಾತ್ರವಲ್ಲದೆ ಏಪ್ರಿಲ್ 10ರಿಂದ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲೂ 'ಕೆಜಿಎಫ್ 2' ಸಿನಿಮಾ ಟಿಕೆಟ್‌ಗಳ ಪ್ರೀ ಬುಕಿಂಗ್‌ ಶುರುವಾಗಲಿದೆ.ಸದ್ಯಕ್ಕೆ ಸುಮಾರು 6 ಸಾವಿರ ಸ್ಕ್ರೀನ್‌ಗಳಲ್ಲಿ 'ಕೆಜಿಎಫ್‌' ಚಾಪ್ಟರ್‌ 2 ರಿಲೀಸ್‌ ಆಗಲಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ದಟ್ಟವಾಗಿದೆ. ಹೀಗಾಗಿಯೇ ಇಡೀ ಜಗತ್ತಿನ ಕಣ್ಣು ಕನ್ನಡದ ಸಿನಿಮಾ 'ಕೆಜಿಎಫ್‌' ಚಾಪ್ಟರ್‌ 2 ಮೇಲೆ ಬಿದ್ದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News