Kili Paul Performance on KGF Chapter 2 : ತಾಂಜಾನಿಯಾದ ಕಿಲಿ ಪೌಲ್ ಇತ್ತೀಚಿನ ದಿನಗಳಲ್ಲಿ ಇಂಡಿಯಾದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾರತೀಯ ಸಿನಿಮಾ ಹಾಡುಗಳಿಗೆ ಡಾನ್ಸ್ ಮತ್ತು ಲಿಪ್-ಸಿಂಕ್‌ ವೀಡಿಯೊಗಳನ್ನು ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಇವರು ಮಾಡು ಶಾರ್ಟ್ ವಿಡಿಯೋಗಳನ್ನ ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಈ ವಿಡಿಯೋಗಳ ಮೂಲಕ ತಾಂಜಾನಿಯಾದ ಕಿಲಿ ಪೌಲ್ ಇಂದು ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಕಿಲಿ ಪೌಲ್ KGF-2 ಸಿನಿಮಾದ ಡೈಲಾಗ್‌ ವಿಡಿಯೋ ರೀಲ್‌


ಕಿಲಿ ಪೌಲ್ ಗೆ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳು ಅಂದ್ರೆ ಇಷ್ಟ. ಅದಕ್ಕಾಗಿಯೇ ಕಿಲಿ ಪ್ರತಿದಿನ ಟಾಲಿವುಡ್‌ನ ಸೂಪರ್‌ಹಿಟ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನಮ್ಮ ಕನ್ನಡದ ಬಹುನಿರೀಕ್ಷಿತ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ 'ಭೂತ' ಕಿಲಿ ಪಾಲ್‌ಗೆ ಅಂಟಿಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಿದೆ. ಕಿಲಿ ಪೌಲ್ ವಿಭಿನ್ನ ಶೈಲಿಯಲ್ಲಿ ಚಿತ್ರದ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ್ದಾರೆ.


ಇದನ್ನೂ ಓದಿ : Alia-Ranbir Marriage: ʼಕಪೂರ್‌ʼ ಮನೆ ಸೊಸೆಯಾದ ಆಲಿಯಾ ಭಟ್‌


ಕಿಲಿ ಪೌಲ್ ಸಿನಿಮಾ ಡೈಲಾಗ್ ಗೆ ಲಿಪ್ ಸಿಂಕ್ ಜೊತೆಗೆ ಆಕ್ಟಿಂಗ್ ಕೂಡ ಮಾಡಿದ್ದಾರೆ. ಈ ಮೂಲಕ ಇಂಟರ್ನೆಟ್ ಬಳಕೆದಾರರ ಮನ ಗೆದ್ದಿದ್ದಾರೆ. ಸಾಮಾನ್ಯವಾಗಿ ಸಾಂಪ್ರದಾಯಿಕ ಮಸಾಯಿ ಬಟ್ಟೆಯಲ್ಲಿ ವಿಡಿಯೋ ಶೇರ್ ಮಾಡುವ ಕಿಲಿ ಈ ವಿಡಿಯೋದಲ್ಲಿ ವಿಭಿನ್ನವಾದ ಉಡುಗೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಕಿಲಿ 'ಕೆಜಿಎಫ್ ಚಾಪ್ಟರ್ 2' ನ ಸೂಪರ್ ಹಿಟ್  ಡೈಲಾಗ್‌ಗೆ ಲಿಪ್ ಸಿಂಕ್‌ಗಾಗಿ ಸೂಟ್ ಧರಿಸಿದ್ದಾರೆ. ಕಿಲಿ ಸೂಟ್‌ಬೂಟ್‌ನಲ್ಲಿ ಸಖತ್ ಹ್ಯಾಂಡ್ ಸಮ್ ಆಗಿ ಕಂಡಿದ್ದಾರೆ. ವಿಡಿಯೋ ನೋಡಿ.. 


Santeqniki