ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಕೆಜಿಎಫ್ 2 ಇಂದು ಅದ್ಧೂರಿಯಾಗಿ ಎಂಟ್ರಿಕೊಟ್ಟಿದೆ. ಮಧ್ಯರಾತ್ರಿಯಿಂದಲೇ ಜನ ಸಿನಿಮಾ ವೀಕ್ಷಿಸುತ್ತಿದ್ದಾರೆ. ಇದೊಂದು ಸಿನಿಮಾಗಾಗಿ ಕಾದು ಕಳೆದ 4 ವರ್ಷಗಳಿಂದ ಶಬರಿಯಂತೆ ಕಾದು ಕೂತಿದ್ದ ಅಭಿಮಾನಿಗಳಿಗೆ ಇಂದು ಕೊನೆಗೂ ಕೆಜಿಎಫ್‌2 ನೋಡುವ ಭಾಗ್ಯ ದೊರೆತಿದೆ. 


COMMERCIAL BREAK
SCROLL TO CONTINUE READING

ಕೆಜಿಎಫ್ ಚಾಪ್ಟರ್ 1ರ ಬಳಿಕ 'ಕೆಜಿಎಫ್ ಚಾಪ್ಟರ್ 2' ಬಗ್ಗೆ ಸಹಜವಾಗಿಯೇ ನಿರೀಕ್ಷೆ ಡಬಲ್‌ ಆಗಿತ್ತು. ಗರುಡನ ಕೊಲೆ.. ನರಾಚಿ ಲೋಕ.. ರಾಕಿಭಾಯ್‌ ಲುಕ್‌ನಿಂದಾಗಿ ಈ ಸಿನಿಮಾ ಹೈಪ್ ಪಡೆದುಕೊಂಡಿದೆ. ಕೆಜಿಎಫ್ 2  ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ಸಿನಿಮಾ ರಿಲೀಸ್‌ಗೂ ಮುನ್ನವೇ ಮುಂಗಡವಾಗಿ ಟಿಕೆಟ್‌ ಕಾದಿರಿಸಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ ಜನ ಇದೀಗ ಟ್ವಿಟರ್‌ನಲ್ಲಿ ರಿವೀವ್‌ ನೀಡಿದ್ದಾರೆ. 


ಇದನ್ನೂ ಓದಿ: ಕೆಜಿಎಫ್‌-2'ಗೆ ಶುಭಕೋರಿದ ಅಣ್ಣಾವ್ರ ಪುತ್ರ..! ಏನ್‌ ಹೇಳಿದ್ರು ದೊಡ್ಮನೆ ಕುಡಿ ರಾಘಣ್ಣ..?


ಮಧ್ಯರಾತ್ರಿಯಿಂದಲೇ ಕೆಜಿಎಫ್ 2 ಸಿನಿಮಾದ ಬಗ್ಗೆ ಟ್ವಿಟರ್‌ನಲ್ಲಿ  ನೆಟ್ಟಿಗರು ವಿಮರ್ಶೆ ನೀಡುತ್ತಿದ್ದಾರೆ. ಫಸ್ಟ್‌ ಹಾಫ್ ಈಗ ತಾನೇ ಮುಗೀತು. ಹೀರೊ ಇಂಟ್ರುಡಕ್ಷನ್ ಅದ್ಭುತವಾಗಿದೆ. ಆದರೆ, ಸಿಕ್ಕಾಪಟ್ಟೆ ಬಿಲ್ಡಪ್ ಇದೆ. ವಾವ್ಹ್ ಎಂಥಾ ಸಿನಿಮಾ. ಇಂಟರ್‌ವಲ್ ಅಂತೂ ಬೆಂಕಿ ಹತ್ತಿಸುವಂತಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ. 


 


KGF 2 Box Office:ಬಾಕ್ಸ್ ಆಫೀಸಿನಲ್ಲಿ ಇದು ವರೆಗೆ ಕೆಜಿಎಫ್2 ಕಲೆ ಹಾಕಿದ್ದೆಷ್ಟು?


ಈ ಸಿನಿಮಾದ ಬಗ್ಗೆ ಕೆಟ್ಟದಾಗಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ, ಇಲ್ಲಿವರೆಗೂ ಸಿನಿಮಾ ಸೂಪರ್ ಆಗಿದೆ. ಅದ್ಭುತವಾದ ಸಿನಿಮಾ. ಈ ಚಿತ್ರ ತಾಯಿ ಪ್ಲ್ಯಾಶ್ ಬ್ಯಾಕ್‌ನಿಂದ ಆರಂಭ ಆಗುತ್ತದೆ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಕೆಜಿಎಫ್ 2 ಸಿನಿಮಾ ಫಸ್ಟ್ ಹಾಫ್ ಅಂತೂ ಸಿಕ್ಕಾಪಟ್ಟೆ ಸಖತ್‌ ಆಗಿದೆ ಎಂದರೆ, ಮತ್ತೆ ಹಲವರಿಗೆ ರವಿ ಬಸ್ರೂರು ಹಿನ್ನೆಲೆ ಸಂಗೀತ ಮನ ಮುಟ್ಟಿದೆ.


ಈ ಎಲ್ಲ ಪಾಸಿಟಿವ್‌ ಟ್ವೀಟ್‌ಗಳ ಮಧ್ಯೆ ಟ್ವಿಟರ್‌ನಲ್ಲಿ ಕೆಜಿಎಫ್ 2 ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್ ಕೂಡ ಬಂದಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.