ಕೆಲವೇ ಹೊತ್ತಲ್ಲಿ ತೆರೆಯಲಿದೆ 'ರಾಕಿಭಾಯ್‌' ಸಾಮ್ರಾಜ್ಯದ ಹೆಬ್ಬಾಗಿಲು..!

Written by - Malathesha M | Edited by - Manjunath N | Last Updated : Apr 13, 2022, 09:39 PM IST
  • ಗರುಡ ಮರ್ಡರ್‌ ಬಳಿಕ ರಾಕಿಭಾಯ್‌ ಏನಾದ..? ರಾಕಿ ಕಥೆ ಏನಾಯ್ತು..? ಮಿಕ್ಕ ವಿಲನ್‌ ಗಳು ಎಲ್ಲೋದರು..?
  • ಹೀಗೆ ಸುಮಾರು 3 ವರ್ಷಕ್ಕೂ ಹೆಚ್ಚು ಕಾಲ ಜನರ ತಲೆಯಲ್ಲಿ ಇಂತಹ ಪ್ರಶ್ನೆಯ ಹುಳು ಓಡಾಡುತ್ತಲೇ ಇದೆ.
 ಕೆಲವೇ ಹೊತ್ತಲ್ಲಿ ತೆರೆಯಲಿದೆ 'ರಾಕಿಭಾಯ್‌' ಸಾಮ್ರಾಜ್ಯದ ಹೆಬ್ಬಾಗಿಲು..! title=

ಎಲ್ಲೆಲ್ಲೂ ಕೆಜಿಎಫ್‌ ಅಬ್ಬರ ಶುರುವಾಗಿದೆ. ಎಲ್ಲರ ಬಾಯಲ್ಲೂ ಕನ್ನಡ ಸಿನಿಮಾ ಪ್ರತಿಧ್ವನಿಸುತ್ತಿದೆ. ಜಗತ್ತಿನಾದ್ಯಂತ ಕೆಜಿಎಫ್‌ ಅಬ್ಬರ ಶುರು ಆಗಲು ಇನ್ನು ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಇನ್ನೇನು ಕೆಲವೇ ಹೊತ್ತಲ್ಲಿ ಜಗತ್ತಿನಾದ್ಯಂತ ರಾಕಿಭಾಯ್‌ ಅಬ್ಬರ ಶುರುವಾಗಲಿದೆ.

ಇದನ್ನೂ ಓದಿ: ಅಪ್ಪಿ ತಪ್ಪಿಯೂ ನೀವು ಕೆಜಿಎಫ್ 2 ಚಿತ್ರ ನೋಡುವಾಗ ಹೀಗೆ ಮಾಡದಿರಿ !

ಕನ್ನಡ ಸಿನಿಮಾಗಳಿಗೆ ಮಾಡರ್ನ್ ಜಗತ್ತಿನಲ್ಲಿ ವರ್ಲ್ಡ್‌ ಲೆವೆಲ್‌ ಮಾರ್ಕೆಟ್‌ ಕ್ರಿಯೇಟ್‌ ಮಾಡಿದ್ದೇ 'ಕೆಜಿಎಫ್‌'. ಹೀಗೆ 'ಕೆಜಿಎಫ್‌' ಚಾಪ್ಟರ್‌ 1 ದೊಡ್ಡ ಹಿಟ್‌ ಆದ ಬಳಿಕ 'ಕೆಜಿಎಫ್‌' ಚಾಪ್ಟರ್‌ 2ಗಾಗಿ ಜಗತ್ತೇ ಕಾಯುತ್ತಿದೆ. ಆದರೆ ಕೊರೊನಾ ಕಾರಣಕ್ಕೆ 'ಕೆಜಿಎಫ್‌-2' ರಿಲೀಸ್‌ ಡೇಟ್‌ ಸಾಕಷ್ಟು ಬಾರಿ ಬದಲಾಗಿತ್ತು. ಅಭಿಮಾನಿಗಳು ಉಸಿರು ಬಿಗಿ ಹಿಡಿದು ಸಿನಿಮಾ ನೋಡಲು ಕಾಯುತ್ತಿದ್ದರು. ಕಡೆಗೆ ಏಪ್ರಿಲ್‌ 14ರ ಡೇಟ್‌ ಫಿಕ್ಸ್‌ ಆಗಿತ್ತು. ಆ ದಿನ ಬಂದೇ ಬಿಟ್ಟಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ 'ಕೆಜಿಎಫ್‌' ಚಾಪ್ಟರ್‌ 2 ಬೆಳ್ಳಿ ತೆರೆಯನ್ನ ಬ್ಲಾಸ್ಟ್‌ ಮಾಡಲಿದೆ.

ಇದನ್ನೂ ಓದಿ: ಮೊದಲ ದಿನದಂದೇ ಆರ್ ಆರ್ ಆರ್ ದಾಖಲೆ ಧೂಳಿಪಟ ಮಾಡಲಿದೆ ಕೆಜಿಎಫ್ 2...!

ಕೌಂಟ್‌ಡೌನ್‌ ಸ್ಟಾರ್ಟ್..!
ರಾಕಿ ಭಾಯ್‌ ಕಥೆಯನ್ನ ಅರ್ಧವಷ್ಟೇ ಹೇಳಿದ್ದ 'ಕೆಜಿಎಫ್‌-1' ಇನ್ನರ್ಧ ಕಥೆಯನ್ನ ತನ್ನಲ್ಲೇ ಉಳಿಸಿಕೊಂಡಿತ್ತು. ಹೀಗೆ ಅರ್ಧ ಕಥೆಯನ್ನ ತನ್ನೊಟ್ಟಿಗೆ ಉಳಿಸಿಕೊಳ್ಳುವ ಜೊತೆಗೆ ನೂರಾರು ಕೋಟಿ ಅಭಿಮಾನಿಗಳ ತಲೆಯಲ್ಲಿ ಹುಳು ಓಡಾಡುವಂತೆ ಮಾಡಿದೆ.

ಗರುಡ ಮರ್ಡರ್‌ ಬಳಿಕ ರಾಕಿಭಾಯ್‌ ಏನಾದ..? ರಾಕಿ ಕಥೆ ಏನಾಯ್ತು..? ಮಿಕ್ಕ ವಿಲನ್‌ ಗಳು ಎಲ್ಲೋದರು..? ಹೀಗೆ ಸುಮಾರು 3 ವರ್ಷಕ್ಕೂ ಹೆಚ್ಚು ಕಾಲ ಜನರ ತಲೆಯಲ್ಲಿ ಇಂತಹ ಪ್ರಶ್ನೆಯ ಹುಳು ಓಡಾಡುತ್ತಲೇ ಇದೆ. ಆದ್ರೆ ಆ ಬಿಲಿಯನ್‌ ಡಾಲರ್‌ ಪ್ರಶ್ನೆಗೆ ಇನ್ನೇನು ಕೆಲವೇ ಹೊತ್ತಿನಲ್ಲಿ ಉತ್ತರ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News