ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಖುಷ್ಬೂ : ನಿಜಕ್ಕೂ ಆಗಿದ್ದೇನು..?
ಹಿರಿಯ ನಟಿ ಹಾಗೂ ಹಾಲಿ ಬಿಜೆಪಿ ನಾಯಕಿ ಖುಷ್ಬೂ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನಳಾಗಿರುವ ಕುಶ್ಬೂ ಫೋಟೋ ಟ್ರೆಂಡಿಂಗ್ ಆಗಿದೆ. ಆದರೆ ಅಕ್ಟೋಬರ್ 5 ರಂದು ಆಕೆ ಹಾಕಿದ್ದ ಟ್ವೀಟ್ ಈಗ ವೈರಲ್ ಆಗುತ್ತಿದೆ.
ಬೆಂಗಳೂರು : ಹಿರಿಯ ನಟಿ ಹಾಗೂ ಹಾಲಿ ಬಿಜೆಪಿ ನಾಯಕಿ ಖುಷ್ಬೂ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆಸ್ಪತ್ರೆಯ ಬೆಡ್ ಮೇಲೆ ಪ್ರಜ್ಞಾಹೀನರಾಗಿ ಮಲಗಿರುವ ಖುಷ್ಬೂ ಅವರ ಫೋಟೋಗಳು ಟ್ರೆಂಡಿಂಗ್ ಆಗಿದೆ. ಆದರೆ ಅಕ್ಟೋಬರ್ 5 ರಂದು ಅವರು ಹಾಕಿದ್ದ ಟ್ವೀಟ್ ಈಗ ವೈರಲ್ ಆಗುತ್ತಿದೆ.
ಬೆನ್ನು ನೋವು ಜಾಸ್ತಿಯಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಕಾರಣದಿಂದಾಗಿ, ಅವರು ಪ್ರಸ್ತುತ ಬೆಡ್ ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಎಲ್ಲರಿಗೂ ತಡವಾಡಿ ದಸರಾ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಕ್ಷಮೆ ಇರಲಿ ಎಂದು ತಮ್ಮ ಫ್ಯಾನ್ಸ್‌ಗಳಲ್ಲಿ ವಿಡಿಯೋ ಮಾಡಿ ಕೇಳಿಕೊಂಡಿದ್ದರು. ಸದ್ಯ ಆ ವಿಡಿಯೋ ವೈರಲ್ ಆಗಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂಬ ತಪ್ಪು ಸಂದೇಶಗಳು ಹರಿದಾಡುತ್ತಿವೆ.
ಇದನ್ನೂ ಓದಿ: Kantara : ‘ಕಾಂತಾರ’ ನೋಡಿ ರಿಷಬ್‌ಗೆ ಸುದೀರ್ಘ ಪತ್ರ ಬರೆದ ಸುದೀಪ್
ಕೆಲವು ದಿನಗಳಿಂದ ಬೆನ್ನುಮೂಳೆಯ ಸಮಸ್ಯೆ ನನ್ನನ್ನು ಕಾಡುತ್ತಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ನಾನು ಮನೆಗೆ ಬಂದಿದ್ದೇನೆ. ಒಂದು ಅಥವಾ ಎರಡು ದಿನಗಳಲ್ಲಿ ನಾನು ದೈನಂದಿನ ಕರ್ತವ್ಯಗಳನ್ನು ಪುನರಾರಂಭಿಸುತ್ತೇನೆ ಎಂದು ಖುಷ್ಬೂ ಅವರು ಟ್ವೀಟ್ ಮಾಡಿದ್ದಾರೆ. ಇನ್ನು ಖುಷ್ಬೂ ಅವರ ಆರೋಗ್ಯ ಕುರಿತು ನೆಗಟಿವ್ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸದ್ಯ ತಮ್ಮ ಆರೋಗ್ಯದ ಕುರಿತು ಸ್ವತಃ ಖುಷ್ಬೂ ಅವರೇ ಸ್ಪಷ್ಟತೆ ನೀಡಬೇಕಿದೆ
ಸದ್ಯ ಖುಷ್ಬೂ ಅವರು ಸಿನಿಮಾ, ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ತೆಲುಗು ಜಬರ್ದಸ್ತ್ ಶೋನಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಲಿವುಡ್‌ನಲ್ಲೂ ಖುಷ್ಬೂ ಸ್ಮಾಲ್ ಸ್ಕ್ರೀನ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕುಷ್ಬೂ ಅವರು ಆಡಾಲ್ಲು ಮೀಕು ಜೋಹಾರ್ಲು ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ