ಚಿಟ್ಟೆ ಬೆಡಗಿ ಹರ್ಷಿಕಾ ಟ್ರೆಡಿಷನಲ್ ಲುಕ್‌ಗೆ ಫ್ಯಾನ್ಸ್‌ ಫಿದಾ..!

ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಇನ್ನೂ ಫ್ಯಾರಿಸ್‌ ಟೂರ್‌ನ ಸವಿನೆನಪಿಲ್ಲೇ ಇದ್ದಾರೆ ಎನಿಸುತ್ತಿದೆ. ಕಾವೇರಿ ಕನ್ನಡ ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಫಾರಿನ್‌ಗೆ ಹಾರಿದ್ದ ಚಿಟ್ಟೆ, ಫ್ಯಾನ್ಸ್‌ಗಳಿಗಾಗಿ ಟ್ರೆಡಿಷನಲ್ ಲುಕ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Harshika Poonacha Photos : ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಇನ್ನೂ ಫ್ಯಾರಿಸ್‌ ಟೂರ್‌ನ ಸವಿನೆನಪಿಲ್ಲೇ ಇದ್ದಾರೆ ಎನಿಸುತ್ತಿದೆ. ಕಾವೇರಿ ಕನ್ನಡ ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಫಾರಿನ್‌ಗೆ ಹಾರಿದ್ದ ಚಿಟ್ಟೆ, ಫ್ಯಾನ್ಸ್‌ಗಳಿಗಾಗಿ ಟ್ರೆಡಿಷನಲ್ ಲುಕ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 /4

2008 ರಲ್ಲಿ ಪಿಯುಸಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಪರೂಪದ ಸಿರಿ ಕನ್ನಡಿಗರ ಫೇವರಿಟ್‌ ನಾಯಕಿ. ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರೋ ಕಾವೇರಿ ಕನ್ನಡ ಕೂಟಕ್ಕೆ ಗೆಸ್ಟ್ ಆಗಿ ಹೋಗಿದ್ದ ಹರ್ಷಿಕಾ ಬೆಂಗಳೂರಿನಿಂದ ಪ್ಯಾರಿಸ್‌ಗೆ ಹೋಗಿದ್ದರು.

2 /4

ಫ್ಯಾರಿಸ್‌ ಟೂರ್‌ ಮುಗಿಸಿ ನಂತರ ವಾಷಿಂಗ್ಟನ್ ಡಿಸಿಗೆ ಹೋಗಿ ಅಲ್ಲಿ ನಡೆದ ಕಾವೇರಿ ಕನ್ನಡ ಕೂಟ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ವಿದೇಶದಲ್ಲಿಯೂ ಸಹ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಚಿಟ್ಟೆಯ ಅಂದಕ್ಕೆ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

3 /4

ಇನ್ನು ಸಿನಿಮಾ ವಿಚಾರಕ್ಕೆ ಬರೋದಾದ್ರೆ ಕನ್ನಡದ ವೆಬ್‌ ಸಿರೀಸ್‌ನಲ್ಲಿ ಹರ್ಷಿಕಾ ಕಾಣಿಸಿಕೊಳ್ಳಲಿದ್ದಾರೆ. 10 ಎಪಿಸೋಡ್​ ಇರುವ ವೆಬ್​ ಸರಣಿಯ ಚಿತ್ರೀಕರಣದಲ್ಲೂ ಹರ್ಷಿಕಾ ತೊಡಗಿದ್ದಾರೆ. ಇತ್ತೀಚಿಗೆ ಅವರು ತಮ್ಮ ಪಾತ್ರದ ಒಂದು ಫೋಟೋವನ್ನ ಶೇರ್ ಮಾಡಿದ್ದರು.

4 /4

ನಿರ್ದೇಶಕ ನಂಜುಂಡೇ ಗೌಡರ ಕಾಸಿನಸರ ಚಿತ್ರದಲ್ಲಿ ಹರ್ಷಿಕಾ ಅದ್ಭುತ ರೋಲ್ ಒಂದನ್ನ ನಿರ್ವಹಿಸಿದ್ದಾರೆ. ನಾಯಕ ನಟ ವಿಜಯ್ ರಾಘವೇಂದ್ರ, ಹಿರಿಯ ನಟಿ ಉಮಾಶ್ರೀ ಅವರು ಈ ಚಿತ್ರದಲ್ಲಿದ್ದಾರೆ. ಈ ನಡುವೆ ಫ್ಯಾರಿಸ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.