Kiara Sidharth : ಕಿಯಾರಾ - ಸಿದ್ಧಾರ್ಥ್ ಮದುವೆಯ ಫೋಟೋ ಲೀಕ್! ನೆಟ್ಟಿಗರು ಶಾಕ್!!
Kiara Advani - Sidharth Malhotra Wedding: ಬಾಲಿವುಡ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹವು ಪ್ರಸ್ತುತ ಬಲು ಚರ್ಚೆಯಲ್ಲಿರುವ ವಿಚಾರ. ಕಿಯಾರಾ-ಸಿದ್ಧಾರ್ಥ್ ಮದುವೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ, ಜೈಸಲ್ಮೇರ್‌ನ ಸೂರ್ಯಗಢ ಅರಮನೆಯು ಬಾಲಿವುಡ್ ಜೋಡಿಯ ವಿವಾಹದ ವಿಧಿವಿಧಾನಗಳಿಗೆ ಸಾಕ್ಷಿಯಾಗಿದೆ.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವಿವಾಹ : ಬಾಲಿವುಡ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹವು ಪ್ರಸ್ತುತ ಬಲು ಚರ್ಚೆಯಲ್ಲಿರುವ ವಿಚಾರ. ಕಿಯಾರಾ-ಸಿದ್ಧಾರ್ಥ್ ಮದುವೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ, ಜೈಸಲ್ಮೇರ್‌ನ ಸೂರ್ಯಗಢ ಅರಮನೆಯು ಬಾಲಿವುಡ್ ಜೋಡಿಯ ವಿವಾಹದ ವಿಧಿವಿಧಾನಗಳಿಗೆ ಸಾಕ್ಷಿಯಾಗಿದೆ. ಈಗ ಅಭಿಮಾನಿಗಳು ಕಿಯಾರಾ-ಸಿದ್ದಾರ್ಥ್ ಮದುವೆಯ ಫೋಟೋಗಳಿಗಾಗಿ ಕಾಯುತ್ತಿದ್ದಾರೆ. ಏತನ್ಮಧ್ಯೆ, ಕಿಯಾರಾ ಅಡ್ವಾಣಿ ಬ್ರೈಡಲ್ ಲುಕ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ, ಕಿಯಾರಾ ರಾಜಸ್ಥಾನಿ ವಧುವಿನಂತೆ ಕಾಣುತ್ತಿದ್ದಾರೆ.
ಕಿಯಾರಾ ಅಡ್ವಾಣಿ ಬ್ರೈಡಲ್ ಲುಕ್ ಲೀಕ್!
ಸಿದ್ಧಾರ್ಥ್ ಮಲ್ಹೋತ್ರಾ ಅವರ ವಧು ಕಿಯಾರಾ ಅಡ್ವಾಣಿ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ, ಕಿಯಾರಾ ರಾಜಸ್ಥಾನಿ ವಧುವಿನಂತೆ ಕಾಣುತ್ತಿದ್ದಾರೆ, ನಟಿಯ ಈ ಫೋಟೋವನ್ನು ನೋಡಿದ ಅಭಿಮಾನಿಗಳು ಇದು ಕಿಯಾರಾ ಅವರ ನಿಜವಾದ ನೋಟವೇ ಎಂದು ಗೊಂದಲಕ್ಕೊಳಗಾಗಿದ್ದಾರೆ. ವೈರಲ್ ಫೋಟೋದಲ್ಲಿ, ಕಿಯಾರಾ ಅಡ್ವಾಣಿ ಕೈಯಲ್ಲಿ ರಾಜಸ್ಥಾನಿ ಶೈಲಿಯ ಬಳೆಗಳನ್ನು ಧರಿಸಿದ್ದು, ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್ ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ವಿವಾಹದ ಆಚರಣೆಗಳನ್ನು ಮಾಡುತ್ತಿದ್ದಾರೆ.
ಕಿಯಾರ-ಸಿದ್ಧಾರ್ಥ್ ವಿವಾಹಕ್ಕೆ ಸಜ್ಜಾದ ಸೂರ್ಯಗಢ: ಗುಲಾಬಿ ಬೆಳಕಿನಿಂದ ಅಲಂಕಾರಗೊಂಡ ಅರಮನೆ ನೋಡಿ
ಇಂದು ಕಿಯಾರಾ - ಸಿದ್ದಾರ್ಥ್ ವಿವಾಹ :
ವರದಿಗಳ ಪ್ರಕಾರ, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 7 ರಂದು ಅಂದರೆ ಇಂದು ಸಪ್ತಪದಿ ತುಳಿಯಲಿದ್ದಾರೆ. ಸಿದ್ಧಾರ್ಥ್ ಮತ್ತು ಕಿಯಾರಾ ಫೆಬ್ರವರಿ 4 ರಂದು ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯನ್ನು ಕುಟುಂಬದೊಂದಿಗೆ ತಲುಪಿದರು. ಮತ್ತೊಂದೆಡೆ, ಸುದ್ದಿ ಪ್ರಕಾರ, ಕಿಯಾರಾ ಮತ್ತು ಸಿದ್ಧಾರ್ಥ್ ಅವರ ಮದುವೆಯ ವಿಧಿಗಳು ಕಳೆದ ಎರಡು ದಿನಗಳಿಂದ ಅರಮನೆಯಲ್ಲಿ ನಡೆಯುತ್ತಿವೆ.
ಇದನ್ನೂ ಓದಿ : ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ "ನಮ್ಮ ಲಚ್ಚಿ"ಗೆ ಸಿಕ್ತು ಈ ಹಿರಿಮೆ...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.