ರಿಷಬ್​ ಶೆಟ್ಟಿ ಮತ್ತು ರಾಜ್​ ಬಿ. ಶೆಟ್ಟಿ ಅವರ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗೆ ನಟ ಕಿಚ್ಚ ಸುದೀಪ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಕುರಿತು ಅಭಿನಯ ಚಕ್ರವರ್ತಿ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ. ನಟ-ನಿರ್ದೇಶಕ ರಾಜ್​ ಬಿ. ಶೆಟ್ಟಿ ಸಿನಿಮಾದಲ್ಲಿ ಒಂದಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ.‘ಒಂದು ಮೊಟ್ಟೆಯ ಕಥೆ’ ಸಿನಿಮಾದಿಂದ ಶುರುವಾದ ಸಿನಿರಂಗದ ಪಯಣ ಇದೀಗ ಅವರನ್ನು ಯಶಸ್ಸಿನೆಡೆಗೆ ಕೊಂಡೊಯ್ದಿದೆ. ಕಳೆದ ವರ್ಷ ರಾಜ್​ ಬಿ. ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಗರುಡ ಗಮನ ವೃಷಭ ವಾಹನʼ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಇದೀಗ ಈ ಸಿನಿಮಾ ಕಿಚ್ಚನ ಮನವನ್ನು ಸಹ ಗೆದ್ದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆನ್ ಲೈನ್ ನಲ್ಲಿ ಸೋರಿಕೆಯಾದ Doctor Strange ಸಿನಿಮಾ ..!


ರಿಷಬ್​ ಶೆಟ್ಟಿ ಮತ್ತು ರಾಜ್​ ಬಿ. ಶೆಟ್ಟಿ ಅವರ ಕಾಂಬಿನೇಷನ್‌ನಲ್ಲಿ ಈ ಚಿತ್ರ ಸಖತ್‌ ಆಗಿ ಮೂಡಿಬಂದಿದ್ದು, ಒಟಿಟಿಯಲ್ಲೂ ಈ ಚಿತ್ರ ಪ್ರದರ್ಶನವಾಗಿ ಜನಮೆಚ್ಚುಗೆ ಪಡೆದುಕೊಂಡಿದೆ. ನಟ ಶಿವರಾಜ್​ಕುಮಾರ್ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು ಈ ಚಿತ್ರಕ್ಕೆ ಭೇಷ್‌ ಅಂದಿದ್ದರು. 


ಇದೀಗ ‘ಗರುಡ ಗಮನ ವೃಷಭ ವಾಹನ’ ಚಿತ್ರವನ್ನು ಕಿಚ್ಚ ಸುದೀಪ್​ ನೋಡಿದ್ದು, ಒಂದು ಸುದೀರ್ಘ ಪತ್ರದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದಿನಿಂದಲೂ ಒಳ್ಳೆಯ ಸಿನಿಮಾಗಳಿಗೆ ಕಿಚ್ಚ ಸುದೀಪ್​ ಬೆನ್ನು ತಟ್ಟುತ್ತಲೇ ಬಂದಿದ್ದಾರೆ. ಇದೀಗ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಗ್ಗೆ ಒಂದು ದೀರ್ಘವಾದ ಮೆಚ್ಚುಗೆಯ ಪತ್ರವನ್ನು ಬರೆದು, ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 


 


ವಿಜಯ್ ರಾಘವೇಂದ್ರ ನಟನೆಯ ರಾಘು ಸಿನಿಮಾದ ಮುಹೂರ್ತ...ಅಣ್ಣನ ಸಿನಿಮಾಗೆ ತಮ್ಮ ಶ್ರೀಮುರಳಿ ಕ್ಲ್ಯಾಪ್


ʻನನಗೆ ಸಿನಿಮಾ ನೋಡಲು ಅವಕಾಶ ಸಿಗುವುದು ಕಡಿಮೆ. ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿದ ಬಳಿಕ ಪ್ರಾಮಾಣಿಕವಾಗಿ ನನ್ನ ಮನಸ್ಸಿನಿಂದ ಬಂದಿದ್ದು, ವಾವ್​... ಬರವಣಿಗೆ ಬ್ರಿಲಿಯಂಟ್​, ತಾಂತ್ರಿಕವಾಗಿ ಇದೊಂದು ಪಾಠದಂತಿದೆ. ಮ್ಯೂಸಿಕ್​ ಅಂತೂ ಅದ್ಭುತವಾಗಿದೆ. ಈ ಸಿನಿಮಾದ ದೊಡ್ಡ ಪ್ಲಸ್​ ಪಾಯಿಂಟ್‌ ಅಂದರೆ ಸರಳತೆʼ ಎಂದು ಸುದೀಪ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.