ಆನ್ ಲೈನ್ ನಲ್ಲಿ ಸೋರಿಕೆಯಾದ Doctor Strange ಸಿನಿಮಾ ..!

ಹಾಲಿವುಡ್ ನ ಡಾಕ್ಟರ್ ಸ್ಟ್ರೇಂಜ್ 2 ಪೂರ್ಣ ಚಲನಚಿತ್ರವು ಟೊರೆಂಟ್ ಸೈಟ್‌ಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Written by - Zee Kannada News Desk | Last Updated : May 6, 2022, 03:49 PM IST
  • ಹಾಲಿವುಡ್ ನ ಡಾಕ್ಟರ್ ಸ್ಟ್ರೇಂಜ್ 2 ಪೂರ್ಣ ಚಲನಚಿತ್ರವು ಟೊರೆಂಟ್ ಸೈಟ್‌ಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
  • ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ಬೆನೆಡಿಕ್ಟ್ ಕಂಬರ್‌ಬ್ಯಾಚ್ ಮತ್ತು ಎಲಿಜಬೆತ್ ಓಲ್ಸೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
  • ಇಂದು ಭಾರತದಲ್ಲಿ ಬಿಡುಗಡೆಯಾದ ಡಾಕ್ಟರ್ ಸ್ಟ್ರೇಂಜ್ 2 ಅತ್ಯಂತ ನಿರೀಕ್ಷಿತ ಮಾರ್ವೆಲ್ ಶೀರ್ಷಿಕೆಗಳಲ್ಲಿ ಒಂದಾಗಿದೆ.
ಆನ್ ಲೈನ್ ನಲ್ಲಿ ಸೋರಿಕೆಯಾದ Doctor Strange ಸಿನಿಮಾ ..! title=
Photo Courtesy: Instagram

ಮುಂಬೈ: ಹಾಲಿವುಡ್ ನ ಡಾಕ್ಟರ್ ಸ್ಟ್ರೇಂಜ್ 2 ಪೂರ್ಣ ಚಲನಚಿತ್ರವು ಟೊರೆಂಟ್ ಸೈಟ್‌ಗಳಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್ ಎಂಬ ಶೀರ್ಷಿಕೆಯ ಈ ಚಿತ್ರದಲ್ಲಿ ಬೆನೆಡಿಕ್ಟ್ ಕಂಬರ್‌ಬ್ಯಾಚ್ ಮತ್ತು ಎಲಿಜಬೆತ್ ಓಲ್ಸೆನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಇಂದು ಭಾರತದಲ್ಲಿ ಬಿಡುಗಡೆಯಾದ ಡಾಕ್ಟರ್ ಸ್ಟ್ರೇಂಜ್ 2 ಅತ್ಯಂತ ನಿರೀಕ್ಷಿತ ಮಾರ್ವೆಲ್ ಶೀರ್ಷಿಕೆಗಳಲ್ಲಿ ಒಂದಾಗಿದೆ.

ಬೆನೆಡಿಕ್ಟ್ ಕಂಬರ್‌ಬ್ಯಾಚ್ ಡಾ ಸ್ಟೀಫನ್ ಸ್ಟ್ರೇಂಜ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿರುವುದನ್ನು ನೋಡಲು ಅಭಿಮಾನಿಗಳು ಉತ್ಸುಕರಾಗಿರುವ ಬೆನ್ನಲ್ಲೇ ಪೂರ್ಣ ಚಲನಚಿತ್ರವು ಟೊರೆಂಟ್ ಸೈಟ್‌ಗಳು ಮತ್ತು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ತೆರೆಮೇಲೆ ಅಬ್ಬರಿಸಲು ಸಜ್ಜಾದ 'ಮಾರ್ಟಿನ್‌'! ರಿಲೀಸ್‌ ಡೇಟ್‌ ಫಿಕ್ಸ್

'ಡಾಕ್ಟರ್ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್', ಸ್ಯಾಮ್ ರೈಮಿ ನಿರ್ದೇಶಿಸಿದ್ದು, ಮೈಕೆಲ್ ವಾಲ್ಡ್ರಾನ್ ಅವರು ಚಿತ್ರಕಥೆಯನ್ನು ಬರೆದಿದ್ದಾರೆ.ಹಾರರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಈಗಾಗಲೇ ಜಗತ್ತಿನಾದ್ಯಂತ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 'ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್' ನಲ್ಲಿ ಬೆನೆಡಿಕ್ಟ್ ವಾಂಗ್ ವಾಂಗ್ ಆಗಿ, ರಾಚೆಲ್ ಮ್ಯಾಕ್ ಆಡಮ್ಸ್ ಡಾ ಕ್ರಿಸ್ಟೀನ್ ಪಾಮರ್ ಆಗಿ ಮತ್ತು ಚಿವೆಟೆಲ್ ಎಜಿಯೋಫೋರ್ ಕಾರ್ಲ್ ಮೊರ್ಡೊ ಆಗಿ ನಟಿಸಿದ್ದಾರೆ.ಕ್ಸೋಚಲ್ ಗೋಮೆಜ್ ಅವರು ಈ ಚಿತ್ರದಲ್ಲಿ ಅಮೇರಿಕಾ ಚಾವೆಜ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಒಮಿಕ್ರಾನ್‌ ಪತ್ತೆ: ದೇಶದಲ್ಲಿ 3,545 ಹೊಸ ಕೊರೊನಾ ಪ್ರಕರಣ ದಾಖಲು

ವರದಿಯ ಪ್ರಕಾರ, ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್‌ನಲ್ಲಿನ ಡಾಕ್ಟರ್ ಸ್ಟ್ರೇಂಜ್‌ನ ಮೊದಲ ಸೋರಿಕೆಯಾದ ಆವೃತ್ತಿಯು ಶುಕ್ರವಾರದ ಆರಂಭದಲ್ಲಿ ಬಹು ಟೊರೆಂಟ್ ಸೈಟ್‌ಗಳಲ್ಲಿ 'CAM' ಎಂಬ ಲೇಬಲ್‌ನೊಂದಿಗೆ ತೋರಿಸಲ್ಪಟ್ಟಿತು, ಇದನ್ನು ಸಿನಿಮಾ ಹಾಲ್‌ಗಳ ಒಳಗೆ ವೀಡಿಯೊ ಕ್ಯಾಮೆರಾದೊಂದಿಗೆ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News