ಬೆಂಗಳೂರು: ಕಿಚ್ಚ ಸುದೀಪ್‌ ಅಂದ್ರೆ ಖದರ್‌, ಕಿಚ್ಚ ಸುದೀಪ್‌ ಅಂದರೆ ಕೋಟಿ ಕೋಟಿ ಫ್ಯಾನ್ಸ್‌ ಪಾಲಿನ ಆರಾಧ್ಯ ದೈವ. ಹೀಗೆ ‘ಕಿಚ್ಚ’ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನುಆರಾಧಿಸುತ್ತಾರೆ. ಜಗತ್ತಿನಾದ್ಯಂತ ಹವಾ ಎಬ್ಬಿಸಿರುವ ಸುದೀಪ್‌ ಅಭಿನಯದ ‘ವಿಕ್ರಾಂತ್ ರೋಣ’ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಹೀಗಿರುವಾಗಲೇ ದೆಹಲಿಯ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ 13 ವರ್ಷಗಳ ನಂತರ ಬಿಗ್ ಸರ್ಪ್ರೈಸ್‌ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಸುದೀಪ್‌ ಅವರು ನೆಗೆಟಿವ್‌ ಶೇಡ್‌ನಲ್ಲಿ ಕಮಾಲ್‌ ಮಾಡಿದ್ದ ‘ಈಗ’ ಚಿತ್ರದ ಬಳಿಕ ಇದೀಗ ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ವಿಸಿಟ್‌ ಕೊಟ್ಟಿದ್ದಾರೆ. ‘ಈಗ’ ಸಿನಿಮಾ ಮಾಡುವಾಗ ದೆಹಲಿಗೆ ಹೋಗಿದ್ದ ನಟ ಸುದೀಪ್ ಮತ್ತೆ ದೆಹಲಿಗೆ ಬೇಟಿ ನೀಡಿರಲಿಲ್ಲ. ಆದರೆ ಇದೀಗ ಬರೋಬ್ಬರಿ 13 ವರ್ಷಗಳ ಬಳಿಕ ಸುದೀಪ್‌ ಅವರು ‘ವಿಕ್ರಾಂತ್ ರೋಣ’ನಿಗಾಗಿ ದೆಹಲಿಗೆ ಹೋಗಿದ್ದಾರೆ.


MLA, MP ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ: ಸ್ಯಾಂಡಲ್​ವುಡ್ ನಟ ಅರೆಸ್ಟ್!


ತಮ್ಮ ದೆಹಲಿ ವಿಸಿಟ್‌ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದಾರೆ. ಈ ಸಂತಸದ ಸಂಗತಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಖುಷಿಪಟ್ಟಿದ್ದಾರೆ. ದೆಹಲಿಯಲ್ಲಿ ಸುದೀಪ್‌ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.


ಸಚಿವ ಪ್ರಹ್ಲಾದ್ ಜೋಶಿ ಸಂತಸ


ಡಾ.ಪುನೀತ್ ರಾಜಕುಮಾರ್ ರ 'ಗಂಧದ ಗುಡಿ' ಅಕ್ಟೋಬರ್ 28ಕ್ಕೆ ಬಿಡುಗಡೆ


ಸುದೀಪ್‌ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಜುಲೈ 28ರಂದು ಅದ್ಧೂರಿಯಾಗಿ ಜಗತ್ತಿನಾದ್ಯಂತ ರಿಲೀಸ್‌ ಆಗಲಿದೆ. ಈ ಹೊತ್ತಲ್ಲಿ ಸುದೀಪ್‌ ಅವರ ಅಭಿಮಾನಿ ಬಳಗ ಸಂಭ್ರಮಿಸಲು ಸಜ್ಜಾಗಿದೆ. ಇದರ ಜೊತೆಗೆ ಅಬ್ಬರದ ಪ್ರಮೋಷನ್‌ ಮಾಡುತ್ತಿರುವ ‘ವಿಕ್ರಾಂತ್ ರೋಣ’ ತಂಡದಿಂದ ಚಿತ್ರದ ಹವಾ ಮತ್ತಷ್ಟು ಹೆಚ್ಚಿಸಿದೆ. ಜುಲೈ 28ಕ್ಕಾಗಿ ಸಕಲ ಸಿದ್ಧತೆಯಲ್ಲಿ ತೊಡಗಿರುವ ಕೋಟಿ ಕೋಟಿ ಕನ್ನಡಿಗರು ‘ವಿಕ್ರಾಂತ್ ರೋಣ’ ಸಿನಿಮಾ ಸೆಲೆಬ್ರೇಟ್‌ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.