Hey Fakira: ʻವಿಕ್ರಾಂತ್‌ ರೋಣʼ ಸಿನಿಮಾದ ʻಹೇ ಫಕೀರಾʼ ಸಾಂಗ್‌ ರಿಲೀಸ್‌

Hey Fakira: ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆ ಮೇಲೆ ಕಿಚ್ಚನ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾತುರರಾಗಿದ್ದಾರೆ. ವಿಶ್ವಾದ್ಯಂತ ರಿಲೀಸ್‌ ಆಗಲಿರುವ ಈ ಸಿನಿಮಾದ ಮತ್ತೊಂದು ಹಾಡು ಇದೀಗ ರಿಲೀಸ್‌ ಆಗಿದೆ. 

Written by - Chetana Devarmani | Last Updated : Jul 12, 2022, 05:06 PM IST
  • ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳ ಕಾತುರ
  • ವಿಶ್ವಾದ್ಯಂತ ರಿಲೀಸ್‌ ಆಗಲಿರುವ ವಿಕ್ರಾಂತ್‌ ರೋಣ ಸಿನಿಮಾ
  • ಈ ಸಿನಿಮಾದ ಮೂರನೇ ಲಿರಿಕಲ್‌ ಸಾಂಗ್‌ ರಿಲೀಸ್‌
Hey Fakira: ʻವಿಕ್ರಾಂತ್‌ ರೋಣʼ ಸಿನಿಮಾದ ʻಹೇ ಫಕೀರಾʼ ಸಾಂಗ್‌ ರಿಲೀಸ್‌  title=
ವಿಕ್ರಾಂತ್‌ ರೋಣ

Vikrant Rona: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆ ಮೇಲೆ ಕಿಚ್ಚನ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್‌ ಕಾತುರರಾಗಿದ್ದಾರೆ. ವಿಶ್ವಾದ್ಯಂತ ರಿಲೀಸ್‌ ಆಗಲಿರುವ ಈ ಸಿನಿಮಾದ ಮತ್ತೊಂದು ಹಾಡು ಇದೀಗ ರಿಲೀಸ್‌ ಆಗಿದೆ. 

ಇದನ್ನೂ ಓದಿ: Shiva Rajkumar Birthday: ಶಿವಣ್ಣ ನಟನೆಯ ʻಘೋಸ್ಟ್ʼ ಪೋಸ್ಟರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್‌ ‌ 

ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಸದ್ಯ, ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೀಗ ಈ ಸಿನಿಮಾದ ಮೂರನೇ ಲಿರಿಕಲ್‌ ಸಾಂಗ್‌ ರಿಲೀಸ್‌ ಆಗಿದೆ. ʻಹೇ ಫಕೀರಾʼ ಲಿರಿಕಲ್‌ ಸಾಂಗ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. 

ವಿಕ್ರಾಂತ್​ ರೋಣ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್‌, ಜಾಕ್ವೆಲಿನ್‌ ಫರ್ನಾಂಡೀಸ್‌, ನಿರೂಪ್​ ಭಂಡಾರಿ, ನೀತಾ ಅಶೋಕ್ ನಟಿಸಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿದೆ. 3ಡಿ ಅವತರಣಿಕೆಯಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಶಾಲಿನಿ ಆರ್ಟ್ಸ್ ಬ್ಯಾನರ್​ ಅಡಿ ಜಾಕ್​ ಮಂಜು ಚಿತ್ರ ನಿರ್ಮಾಣ ಮಾಡಿದ್ದು, ಅಲಂಕಾರ್​ ಪಾಂಡಿಯನ್​ ಸಹ-ನಿರ್ಮಾಪಕರಾಗಿದ್ದಾರೆ.  

'ವಿಕ್ರಾಂತ್‌ ರೋಣ' ಸಿನಿಮಾ ಹವಾ ಎಲ್ಲೆಲ್ಲೂ ಹಬ್ಬಿದ್ದು, ಈಗಾಗಲೇ ಎರಡು ಸಾಂಗ್‌ ವಿವಿಧ ಭಾಷೆಗಳಲ್ಲಿ ರಿಲೀಸ್‌ ಆಗಿ ಯುಟ್ಯೂಬ್‌ ಟ್ರೆಂಡ್‌ ಆಗಿವೆ. ಇದೀಗ ಸಿನಿಮಾದ ಮೂರನೇ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಅನೂಪ್‌ ಭಂಡಾರಿ ಲಿರಿಕ್ಸ್‌ ಬರೆದಿದ್ದು, ಸಂಜಿತ್ ಹೆಗಡೆ, ಚಿನ್ಮಯಿ ಶ್ರೀಪಾದ, ಬಿ ಅಜನೀಶ್ ಲೋಕನಾಥ್, ಅನುಪ್ ಭಂಡಾರಿ ಈ ಹಾಡಿಗೆ ಧ್ವನಿಯಾಗಿದ್ದಾರೆ. 

ಇದನ್ನೂ ಓದಿ: ಅರ್ಜುನ್​ ಜನ್ಯ ಆಕ್ಷನ್‌ ಕಟ್‌ ಹೇಳಲಿರುವ ಶಿವಣ್ಣನ ಚಿತ್ರದ ಟೈಟಲ್​ ಅನೌನ್ಸ್​

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News