Kiccha sudeep : ʼನನ್ನ ಸಿನಿಮಾದ ಟೀಸರ್ ರೆಡಿ ಇದೆ..ಆದರೆ ನನ್ನ ಅಳಿಯನ ಚೊಚ್ಚಲ ಸಿನಿಮಾ ಟೀಸರ್ಗಾಗಿ ಕಾಯುತ್ತಿದ್ದೇವೆʼ
Kiccha Sudeep New Movie : `ಇತ್ತೀಚೆಗೆ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಕ್ಲ್ಯೂ ನೀಡಿದ್ದರು. ಆದರೆ ಇದೀಗ ತಮ್ಮ 46ನೇ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ಸೋದರಳಿಯನ ಚೊಚ್ಚಲ ಸಿನಿಮಾ ಟೀಸರ್ ಬಿಡುಗಡೆ ನಂತರವೇ ಕಿಚ್ಚ ಅವರ ಸಿನಿಮಾ ಟೀಸರ್ ರಿಲೀಸ್ ಆಗಲಿದೆ.
Kichha 46 : ವಿಕ್ರಾಂತ್ ರೋಣ ಸಿನಿಮಾ ಬಳಿಕ ನಟ ಕಿಚ್ಚ ಸುದೀಪ್ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ನಟ ಕೆಲವು ದಿನಗಳ ಹಿಂದೆ ತಮ್ಮ ಮುಂದಿನ ಸಿನಿಮಾಗೋಸ್ಕರ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಜತೆ ಕೈ ಜೋಡಿಸಿದ್ದಾರೆ ಎನ್ನಲಾಗಿತ್ತು. ಇನ್ನು ಅದರ ಮುಂದಿನ ಭಾಗ ಎನ್ನುವಂತೆ ಆ ಸಿನಿಮಾದ ಟೈಟಲ್ ಹಾಗೂ ಟೀಸರ್ ಸೇರಿದಂತೆ ಕಿರು ವಿಡಿಯೋ ತುಣುಕುಗಳು ಬಿಡುಗಡೆಯಾಗಿರಬೇಕಿತ್ತು.
ಕಾರಣಾಂತರಗಳಿಂದ ಕಿಚ್ಚ 46 ಸಿನಿಮಾದ ಯಾವುದೇ ಟೀಸರ್, ಟ್ರೈಲರ್, ಕಿರು ವಿಡಿಯೋ ತುಣುಕಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಎಲ್ಲದಕ್ಕೂ ಕಾಲ ಕೂಡಿ ಬಂದಿದ್ದು ಕಿಚ್ಚ ಸುದೀಪ್ ತಾವೇ ಸ್ವತಃ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ.
ಈ ಕ್ಯೂಟ್ ಬೇಬಿ ಇಂದು ಎಲ್ಲರ ಹೃದಯ ಗೆದ್ದ ʻನ್ಯಾಷನಲ್ ಕ್ರಶ್ʼ! ಯಾರೆಂದು ಗುರುತಿಸುವಿರಾ?
ತಮೀಲಿನ ಹೈ ಬಜೆಟ್ ಸಿನಿಮಾಗಳನ್ನು ನೀಡಿದ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ವಿ ಕ್ರಿಯೆಷನ್ಸ್ ಅಡಿಯಲ್ಲಿ ಸುದೀಪ್ ಅವರ ಸಿನಿಮಾ ನಿರ್ಮಣವಾಗುತ್ತಿದ್ದು, ನಿರ್ಮಾಪಕ ಕಲೈಪುಲಿ ಎಸ್ ಧಾನು ಸುದೀಪ್ ಜತೆ ಕೈ ಜೋಡಿಸಿದ್ದಾರೆ. ಇನ್ನು ಈ ಸಿನಿಮಾ ಟೀಸರ್ ಯಾವಾಗ ಬಿಡುಗಡೆಯಾಗಲಿದೆ? ಯಾವಾಗ ಟೀಸರ್ ರಿಲೀಸ್ ಆಗಲಿದೆ ಎಂಬುದಕ್ಕೆ ಕಿಚ್ಚ ಸುದೀಪ್ ಟ್ವಿಟ್ ಮೂಲಕ ಉತ್ತರ ನೀಡಿ ಕೂತುಹಲ ಹೆಚ್ಚಿಸಿದ್ದಾರೆ.
ಇನ್ನು ತಮ್ಮ ಸಿನಿಮಾ ಟೀಸರ್ ಬಿಡುಗಡೆಯ ಕುರಿತು ಕಿಚ್ಚ ಸುದೀಪ್ ಅವರು "ನನ್ನ ಮುಂದಿನ K46 ಸಿನಿಮಾದ ಕಿರು ಟೀಸರ್ ತಯಾರಾಗಿದ್ದು, ಜೂನ್ 25 ರಂದು ನನ್ನ ಸೋದರಳಿಯ ಸಂಚಿತ್ ಅವರ ಚೊಚ್ಚಲ ಸಿನಿಮಾದ ಅನೌನ್ಸ್ಮೆಂಟ್ ಟೀಸರ್ ರೀಲಿಸ್ ಆಗಲಿದೆ. ಹಾಗಾಗಿ ನಾವೆಲ್ಲರೂ ಅದಕ್ಕಾಗಿ ಕಾಯುತ್ತಿದ್ದೇವೆ. ನನ್ನ ಮುಂದಿನ 46ನೇ ಸಿನಿಮಾವನ್ನು ತಂಡ ತುಂಬಾ ಕಠಿಣ ಶ್ರಮ ಹಾಕಿ ಕೆಲಸ ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಟೀಸರ್ ನ್ನು ನಿಮ್ಮ ಮುಂದೆ ತರಲಿದ್ದೇವೆ. 27 ರಂದು ಟೀಸರ್ ರಿಲೀಸ್ ದಿನಾಂಕವನ್ನು ಘೋಷಣೆ ಮಾಡಲಿದ್ದೇವೆ" ಎಂದಿದ್ದಾರೆ.
ಇದನ್ನೂ ಓದಿ-ನಟಿ ಖುಷ್ಬೂ ಸುಂದರ್ ಆಸ್ಪತ್ರೆಗೆ ದಾಖಲು, ಹೇಗಿದೆ ಆರೋಗ್ಯ ಸ್ಥಿತಿ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.