ನಟಿ ಖುಷ್ಬೂ ಸುಂದರ್ ಆಸ್ಪತ್ರೆಗೆ ದಾಖಲು, ಹೇಗಿದೆ ಆರೋಗ್ಯ ಸ್ಥಿತಿ?

Khushbu Sundar Health : ಬಹುಭಾಷಾ ನಟಿ ಖುಷ್ಬೂ ಸುಂದರ್‌ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ನಟಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮೂಳೆ ಚಿಕಿತ್ಸೆ ಸಲುವಾಗಿ ಟ್ರೀಟ್‌ಮೆಂಟ್‌ ಪಡೆಯುತ್ತಿದ್ದಾರೆ. 

Written by - Savita M B | Last Updated : Jun 24, 2023, 12:54 PM IST
  • ನಟಿ ಖುಷ್ಬೂ ಸುಂದರ್‌ ಅವರಿಗೆ ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ.
  • ಇದರಿಂದ ಅವರು ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
  • ಇದೀಗ ಮತ್ತೆ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದಾರೆ.
ನಟಿ ಖುಷ್ಬೂ ಸುಂದರ್ ಆಸ್ಪತ್ರೆಗೆ ದಾಖಲು, ಹೇಗಿದೆ ಆರೋಗ್ಯ ಸ್ಥಿತಿ? title=

Khushbu Sundar : ನಟಿ ಖುಷ್ಬೂ ಸುಂದರ್‌ ಅವರಿಗೆ ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಇದರಿಂದ ಅವರು ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕಳೆದ ಏಪ್ರಿಲ್‌ ಮೊದಲವಾರದಲ್ಲಿ ಅನಾರೋಗ್ಯದಿಂದ ನಟಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮತ್ತೆ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಪೋಸ್ಟ್‌ ಒಂದನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ. 

ತಮ್ಮ ಅನರೋಗ್ಯದ ಕುರಿತಾಗಿ ಟ್ವಿಟ್‌ ಮಾಡಿರುವ ನಟಿ, ತಾವು ಟೇಲ್‌ ಬೋನ್‌ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆಯೂ ನಟಿ ಖಷ್ಬೂ ಅವರನ್ನು ಈ ಸಮಸ್ಯೆ ಕಾಡಿತ್ತು. ಇದೀಗ ಅದೇ ಅಮಸ್ಸಯೆ ಮತ್ತೆ ಎದುರಾಗಿದ್ದು, ಅದರ ಚಿಕಿತ್ಸೆ ಮುಂದುವರೆಸಿದ್ದಾರೆ. 

ಇದನ್ನೂ ಓದಿ-Apoorva Arora : ಮುಗುಳುನಗೆ ಬೆಡಗಿಯ ಬೋಲ್ಡ್‌ ಲುಕ್‌..ಪೋಟೋಸ್‌ ನೋಡಿ

"ನಾನೀಗ ಚೇತರಿಕೆ ಹಂತದಲ್ಲಿದ್ದೇನೆ.. ಕೋಕ್ಸಿಕ್ಸ್‌ ಅಥವಾ ಮೂಳೆ ಚಿಕಿತ್ಸೆಯ ಸಲುವಾಗಿ ನಾನು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ಈ ಹಿಂದೆಯೂ ನನಗೆ ಈ ಸಮಸ್ಸಯೆ ಬಾಧಿಸಿತ್ತು. ಆದಷ್ಟು ಬೇಗ ಗುಣಮುಖಳಾಗಿ ಹೊರಬರುತ್ತೇನೆ" ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಖೂಷ್ಬೂ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಸಿನಿಮಾ ಸ್ನೇಹಿತರು ಬೇಗ ಗುಣಮುಖರಾಗಿ ಬನ್ನಿ ಎಂದು ಹರಸಿದ್ದಾರೆ. 

ಇನ್ನು ಕಳೆದ ಏಪ್ರಿಲ್‌ನಲ್ಲಿಯೂ ಖುಷ್ಬೂ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವತ್ತು ಅದು ದೊಡ್ಡ ಸುದ್ದಿಯಾಗಿತ್ತು. ಬಳಿಕ ಸೋಷಿಯಲ್‌ ಮಿಡಿಯಾದಲ್ಲಿ ತಾವೇ ಸ್ವತಃ ನನಗೆ ಬರೀ ಜ್ವರ ಮತ್ತು ತಲೆನೋವು ಅದರಿಂದ ನಾಣು ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಖುಷ್ಬೂ ಹೇಳಿಕೊಂಡಿದ್ದರು. 

ಇದನ್ನೂ ಓದಿ-ಬಾಕ್ಸ್ ಆಫೀಸ್ ನಲ್ಲಿ 400 ಕೋಟಿ ರೂ ಗಳಿಸಿದ ಆದಿಪುರುಷ ಚಿತ್ರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News