Kiccha Sudeep Cine Journey: ಕಿಚ್ಚ ಸುದೀಪ್ ವೃತ್ತಿಬದುಕಿನ ವಿಶೇಷ ದಿನವಿದು. ಸುದೀಪ್‌ ಮೊದಲ ಬಾರಿ ಕಾಮೆರಾ ಮುಂದೆ ಬಂದ ದಿನ. ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 28 ವರ್ಷ ಕಳೆದಿದೆ. ಈ ದಿನದ ಬಗ್ಗೆ ಖುದ್ದು ಸುದೀಪ್‌ ಮಾತನಾಡಿದ್ದಾರೆ. ಮೊಟ್ಟ ಮೊದಲ ಬಾರಿ ಕಾಮೆರಾ ಮುಂದೆ ನಿಂತಾಗ ಆದ ಅನುಭವ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಈ ಪಯಣದಲ್ಲಿ ಜೊತೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಸುದೀಪ್ ತಂದೆ ಸಂಜೀವ್ ಹೋಟೆಲ್ ಉದ್ಯಮಿ. ಗಾಂಧಿ ನಗರದಲ್ಲಿ ಅವರ ಹೋಟೆಲ್ ಇತ್ತು. ಈ ಕಾರಣದಿಂದ ಸಹಜವಾಗಿಯೇ ಸಿನಿರಂಗದವರ ಒಡನಾಟ ಬೆಳೆದಿತ್ತು. ಸುದೀಪ್‌ ಸಹ ಸಿನಿಮಾ ನಟನಾಗುವ ಆಸೆ ಹೊಂದಿದ್ದರು. ಗಾಂಧಿನಗರದಲ್ಲೇ ಈ ಕನಸು ಶುರುವಾಗಿತ್ತು. ಈಗ ಕಿಚ್ಚ ಬಣ್ಣದ ಲೋಕಕ್ಕೆ ಕಾಲಿಟ್ಟು 28 ವರ್ಷಗಳು ಕಳೆದಿವೆ.  


ಇದನ್ನೂ ಓದಿ: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ʼಗೂಗ್ಲಿʼ ನಟಿ? .. ಪೋಟೋಸ್‌ ವೈರಲ್!‌ 


ಸುದೀಪ್ ಅವರ ಮೊದಲ ಸಿನಿಮಾ ಬ್ರಹ್ಮ. ಅಂಬರೀಷ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಸುದೀಪ ಅವರ ಮೊದಲ ಸಿನಿಮಾ ಬ್ರಹ್ಮ ರಿಲೀಸ್‌ ಆಗಲೇ ಇಲ್ಲ. ಬ್ರಹ್ಮ ಸಿನಿಮಾಗಾಗಿ ಕಾಮೆರಾ ಎದುರಿಸಿದ ಆ ದಿನವನ್ನು ಸುದೀಪ್‌ ಈ ಸಂದರ್ಭದಲ್ಲಿ ನೆನೆದಿದ್ದಾರೆ. 


 


Allu Arjun Pushpa 2 Look: ಅಲ್ಲು ಅರ್ಜುನ್‌ ಸೀರೆಯುಟ್ಟ ‌ʻಪುಷ್ಪ 2ʼ ಲುಕ್ ಲೀಕ್.!! 


ಈ ಸಿನಿರಂಗದಲ್ಲಿ 28 ವರ್ಷಗಳನ್ನು ಕಳೆದಿದ್ದೇನೆ. ಇದು  ನನ್ನ ಜೀವನದ ಅತ್ಯಂತ ಸುಂದರ ಭಾಗವಾಗಿದೆ. ಈ ಅವಕಾಶಕ್ಕಾಗಿ ನಾನು ದೇವರಿಗೆ ಧನ್ಯವಾದ ತಿಳಿಸುವೆ. ನನ್ನ ಪೋಷಕರು, ಕುಟುಂಬ, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು, ಬರಹಗಾರರು, ನನ್ನ ಸಹ ನಟರು, ಮಾಧ್ಯಮದವರು, ವಿತರಕರು, ಪ್ರದರ್ಶಕರು ಎಲ್ಲರಿಗೂ ಚಿರೃಋಣಿ ಆಗಿದ್ದೇನೆ. ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಸುದೀಪ್‌ ಪೋಸ್ಟ್‌ ಮಾಡಿದ್ದಾರೆ. ನಾನು ಜೀವನದಲ್ಲಿ ಗಳಿಸಿದ ಅತ್ಯಂತ ಅಮೂಲ್ಯ ಕೊಡುಗೆ ಎಂದರೆ ನನ್ನ ಫ್ಯಾನ್ಸ್. ನನ್ನನ್ನು ನಾನಿದ್ದಂತೇ ಸ್ವೀಕರಿಸಿದ್ದಕ್ಕಾಗಿ ಧನ್ಯವಾದ ಎಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.