ಬೆಂಗಳೂರು: ಕಿಚ್ಚ ಸುದೀಪ್ ಪಕ್ಷ ಸೇರ್ಪಡೆ ಕುರಿತು ಆಯೋಜಿಸಿದ ಸುದ್ದಿಗೋಷ್ಠಿಗೂ ಮೊದಲೇ ಸುದೀಪ್‌ ಮಾಧ್ಯಮದವರ ಒಂದಿಷ್ಟು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದರು. ಕೆಲವು ದಿನಗಳಿಂದ ಅವರ ಸ್ನೇಹಿತ ಮ್ಯಾನೇಜರ್ ಜಾಕ್ ಮಂಜು ಪರವಾಗಿ ಟಿಕೆಟ್ ಕೇಳಿದ್ದಾರೆ ಎಂಬ ವದಂತಿ ಹರಿದಾಡುತ್ತಿತ್ತು. ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್‌, ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಯಾರಿಗೂ ಟಿಕೆಟ್ ಕೇಳಿಲ್ಲ ಎಂದರು. 


COMMERCIAL BREAK
SCROLL TO CONTINUE READING

ಟಿಕೆಟ್‌ ಕೊಡಿಸುವಷ್ಟು ದೊಡ್ಡವನು ನಾನಲ್ಲ. ಚಿತ್ರರಂಗಕ್ಕೆ ಕಾಲಿಟ್ಟಾಗ ನನ್ನ ಪರ ಕೆಲವರು ನಿಂತಿದ್ದಾರೆ. ಅವರ ಪರವಾಗಿ ನಾನು ನಿರ್ಧಾರ ತೆಗೆದುಕೊಂಡಿದ್ದೇನೆ.ಆದರೆ  ಸಿಎಂ ಬಸವರಾಜ ಬೊಮ್ಮಾಯಿ ಅವರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ನಿಜ  ಎಂದರು.


ಇದನ್ನೂ ಓದಿ:   Kichcha Sudeep : ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ - ನಟ ಸುದೀಪ್‌


ಬಳಿಕ  ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ಸುದೀಪ್‌,  ಕೆಲ ಕಷ್ಟ ಸಮಯದಲ್ಲಿ ಸಿಎಂ ಬಸವರಾಜ್‌ ಬೊಮ್ಮಯಿಯವರು ಸಹಕರಿಸಿದ್ದರು. ಆದ್ದರಿಂದ  ಯಾವುದೇ  ಪಕ್ಷವನ್ನು ತಲೆಯಲ್ಲಿ ಇಟ್ಟುಕೊಂಡು ಬಂದಿಲ್ಲ ವ್ಯಕ್ತಿಗಾಗಿ  ಮಾತ್ರ ಬಂದಿದ್ದೇನೆ ಎಂದು ಹೇಳಿದರು. ಆ ಸಂದರ್ಭದಲ್ಲಿ ಅಂಬರೀಶ್‌ ಅಧಿಕಾರವನ್ನು ನೆನೆದು  ಅಂದು ಅಂಬಿ ಮಾಮ ಇದ್ದಾಗ ಅವರ ಪರ ನಿಂತಿದ್ದೆ ವ್ಯಕ್ತಿಗೆ ಮಾತ್ರ ಪ್ರಾಮುಖ್ಯತೆ ಕೊಡುತ್ತಿನಿ  ಎಂದು ಹೇಳಿದ್ದಾರೆ.   


ಇದನ್ನೂ ಓದಿ:  ಐಕಾನ್ ಸ್ಟಾರ್ ಅಲ್ಲು ಅರ್ಜುನ್-ಸುಕುಮಾರ್ ಕಾಂಬೋ ಇಸ್ ಬ್ಯಾಕ್! ಧೂಳ್ ಎಬ್ಬಿಸಿದ ಪುಷ್ಪ-2 ಗ್ಲಿಂಪ್ಸ್


ಚುನಾವಣೆಗೆ ನಿಲ್ಲುವ ಯೋಚನೆ ಮಾಡಿಲ್ಲ ಅನಿವಾರ್ಯ ಸಂದರ್ಭ ಬಂದರೂ  ಚುನಾವಣೆಗೆ ನಿಲ್ಲಲ್ಲ.  ಚುನಾವಣೆ ಸ್ಪರ್ಧಿಸುವುದಕ್ಕಿಂತ   ಮಾಡಲು ತುಂಬಾ ಸಿನಿಮಾ ಬಾಕಿ ಇವೆ . ಆದ್ದರಿಂದ ಯಾವುದೇ ಗೊಂದಲಬೇಡ ಅಂಥಹ ಸಂದರ್ಭ ಬಂದರೆ ನಾನೇ ಪ್ರಕಟ ಮಾಡುತ್ತೇಂದು ಸ್ಪಷ್ಟನೆ ನೀಡಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.