Kichcha Sudeep: ಕಿಚ್ಚನ ಫ್ಯಾನ್ಸ್ಗೆ ಬಿಗ್ ಸರ್‌ಪ್ರೈಸ್! ಒಟ್ಟೊಟ್ಟಿಗೆ 3 ಸಿನಿಮಾ ಒಪ್ಪಿಕೊಂಡ ಸುದೀಪ್
Kichcha Sudeep Letter On Next Movie : ಮುಂದಿನ ಸಿನಿಮಾ ಯಾವಾಗ? ಎಂದು ಶಬರಿಯಂತೆ ಕಾದು ಕುಳಿತಿದ್ದ ಕಿಚ್ಚನ ಫ್ಯಾನ್ಸ್ಗೆ ಇಂದು ಸುದಿನ. ಕೊನೆಗೂ ತಮ್ಮ ಮುಂಬರುವ ಚಿತ್ರದ ಬಗ್ಗೆ ಕಿಚ್ಚ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ತಂದಿದೆ.
Kiccha Sudeep Next Movie : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಅಂದ್ರೆ ಎಲ್ಲ ಭಾಷೆಯ ಜನರಲ್ಲೂ ಕ್ರೇಜ್ ಹುಟ್ಟಿಸುತ್ತೆ. ಸದಾ ಕನ್ನಡತನ ಮೆರೆಯುವ ಸುದೀಪ್‌ಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಕಿಚ್ಚನ ಪ್ರತಿ ಕಾರ್ಯದಲ್ಲೂ ಅವರು ಸಾಥ್ ನೀಡುತ್ತಾರೆ. ವಿಕ್ರಾಂತ್ ರೋಣ ಹಿಟ್ ಬಳಿಕ ಮುಂದಿನ ಸಿನಿಮಾ ಅನೌನ್ಸ್ ಮಾಡದೇ ಸುದೀಪ್ ಸೈಲೆಂಟ್ ಆಗಿದ್ರು. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ವಿಕ್ರಾಂತ್ ರೋಣ ರಿಲೀಸ್ ಬಳಿಕ, ಕಬ್ಜ, ಬಿಗ್ ಬಾಸ್ ಕನ್ನಡ ಕಾರ್ಯಕ್ರಮ, ಸೆಲಿಬ್ರಿಟಿ ಕ್ರಿಕೆಟ್ ಲೀಗ್ ಹೀಗೆ ಸುದೀಪ್ ಬ್ಯುಸಿಯಾಗಿಬಿಟ್ರು. ಆದರೆ ಎಲ್ಲ ಸಂದರ್ಭದಲ್ಲೂ ಅವರ ಅಭಿಮಾನಿಗಳ ಪ್ರಶ್ನೆ ಮಾತ್ರ ಒಂದೇ ಆಗಿತ್ತು. ಅದು ಮುಂದಿನ ಸಿನಿಮಾ ಯಾವುದು ಎಂದು. ಸುದೀಪ್ ಕೂಡ ಈ ಬಗ್ಗೆ ಏನೂ ಹೇಳದೇ ಮೌನವಾಗಿಯೇ ಇದ್ದು ಬಿಟ್ಟಿದ್ದರು.
ಏನೇ ಮಾಡಿದರು ಅದನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸುವ ಕಿಚ್ಚ ಸುದೀಪ್ ಇದೀಗ ಮುಂದಿನ ಸಿನಿಮಾ ಅಪ್‌ಡೇಟ್‌ನ್ನು ಕೂಡ ಸಾಮಾಜಿಕ ಮಾಧ್ಯಮದ ಮೂಲಕವೇ ನೀಡಿದ್ದಾರೆ. ಸುದೀರ್ಘ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ಮೂರು ಸಿನಿಮಾಗಳನ್ನ ಒಪ್ಪಿಕೊಂಡಿರುವುದಾಗಿ ಕಿಚ್ಚ ಸುದೀಪ್ ಹೇಳಿದ್ದು, ಫ್ಯಾನ್ಸ್ ದಿಲ್ ಖುಷ್ ಆಗಿದೆ.
ಇದನ್ನೂ ಓದಿ : #Kiccha46 : ಹೊಂಬಾಳೆ ಫಿಲಂಸ್ ಜೊತೆ ಕಿಚ್ಚನ ಮುಂದಿನ ಆಕ್ಷನ್! ಖ್ಯಾತ ಮಹಿಳಾ ನಿರ್ದೇಶಕಿಯ ಡೈರೆಕ್ಷನ್?
ಸುದೀಪ್ ಮಾಡಿರುವ ಟ್ವೀಟ್‌ನಲ್ಲಿ ಏನಿದೆ?
"ನನ್ನ ಎಲ್ಲ ಸ್ನೇಹಿತರಿಗೆ ನಮಸ್ಕಾರ... #Kiccha46 ಕುರಿತಾಗಿ ನಿಮ್ಮ ಟ್ವೀಟ್‌ಗಳು ಮತ್ತು ಮೀಮ್‌ಗಳು ನನಗೆ ಅರ್ಥವಾಗಿದೆ. ಧನ್ಯವಾದ. ಈಗ ಇದೇ ವಿಚಾರದ ಬಗ್ಗೆ ಸಣ್ಣ ಸ್ಪಷ್ಟೀಕರಣ ನೀಡಲು ಬಯಸಿರುವೆ. ನಾನು ಕೊಂಚ ವಿರಾಮ ತೆಗೆದುಕೊಂಡಿದ್ದೆ. ನನ್ನ ವೃತ್ತಿಜೀವನದಲ್ಲಿ ನಾನು ತೆಗೆದುಕೊಂಡ ಮೊಟ್ಟಮೊದಲ ವಿರಾಮ ಇದು. ವಿಕ್ರಾಂತ್ ರೋಣ ಚಿತ್ರದ ನಂತರ ನನಗೆ ಬ್ರೇಕ್ ಬೇಕು ಅನಿಸಿತು. ಕೋವಿಡ್ ಮತ್ತು ಸುದೀರ್ಘ ವೇಳಾಪಟ್ಟಿ ಹೊಂದಿದ್ದ ಬಿಗ್ ಬಾಸ್ (OTT ಹಾಗೂ TV), ವಿಕ್ರಾಂತ್ ರೋಣ ಚಿತ್ರದಲ್ಲಿ ಭಾಗಿಯಾಗುವುದು ಶ್ರಮದಾಯಕ ಎನಿಸಿತ್ತು. ಆದ್ದರಿಂದ ಈ ವಿರಾಮ ತೆಗೆದುಕೊಳ್ಳುವ ಅಗತ್ಯವಿದೆ ಎನಿಸಿತು. ನನ್ನ ವಿರಾಮವನ್ನು ಆನಂದಿಸಲು ಉತ್ತಮ ಮಾರ್ಗ ಅಂದ್ರೆ ಅದು ನನಗೆ ಸಂತೋಷ ಕೊಡುವ ಕೆಲಸ ಮಾಡುವುದು.ಕ್ರಿಕೆಟ್ ನನಗೆ ವಿಶ್ರಾಂತಿ ನೀಡುವ ಕ್ರೀಡೆ. ನಾನು ಕ್ರಿಕೆಟ್ ಆಟದಿಂದ ಸಂತೋಷ ಅನುಭವಿಸುತ್ತೇನೆ. ಅದಕ್ಕೆ KCC ಮತ್ತು KB ಜೊತೆಗೆ ಸಮಯ ಕಳೆದೆ. ನನಗೆ ಖುಷಿ ನೀಡಿದೆ" ಎಂದು ಸುದೀಪ್ ಬರೆದಿದ್ದಾರೆ.
Rani Mukherjee: 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದೇಕೆ ಈ ಖ್ಯಾತ ನಟಿ?
ಕಿಚ್ಚನ ಈ ಟ್ವೀಟ್ ನೋಡಿ ಅಭಿಮಾನಿಗಳಿಗೆ ಒಂದೆಡೆ ಸಂತೋಷವಾಗಿದೆ, ಮತ್ತೊಂದೆಡೆ ಆ ಮೂರು ಸಿನಿಮಾಗಳು ಯಾವವು? ಯಾರ ಜೊತೆ ಸಹಯೋಗದಲ್ಲಿ ಮಾಡುತ್ತಿದ್ದಾರೆ? ಯಾವ ಕತೆ ಆಧಾರಿತ ಸಿನಿಮಾ? ಎಂಬ ಪ್ರಶ್ನೆಗಳು ಮೂಡಿವೆ. ಒಟ್ಟಾರೆ ಇಷ್ಟು ದಿನ ಕಿಚ್ಚನ ನೆಕ್ಷ್ಟ್ ಮೂವಿಗಾಗಿ ಕಾದು ಕುಳಿತಿದ್ದ ಅವರ ಅಭಿಮಾನಿಗಳಿಗೆ ಸುದೀಪ್ ಬಿಗ್ ಅಪ್‌ಡೇಟ್ ಕೊಟ್ಟಿದ್ದಂತೂ ಸಂತಸ ತಂದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.